ಪಿಸಿ ಬಡಾವಣೆ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ನಗರದ ಪಿಸಿ ಬಡಾವಣೆ ಆಟೋ ನಿಲ್ದಾಣದಲ್ಲಿ 65 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ, ಆಟೋ ಚಾಲಕರು ತಮ್ಮ ವೈಯಕ್ತಿಕ ಹಾಗೂ ಪ್ರಯಾಣಿಕರ ಸುರಕ್ಷೆ ಕುರಿತಂತೆ ಜಾಗೃತಿವಹಿಸಬೇಕೆಂದು ಕಿವಿ ಮಾತು ಹೇಳಿದರು.
ಸ್ಥಳೀಯ ಮುಖಂಡ ಕೋಲಾರ ಜಿಲ್ಲಾ ಕಾಂಗ್ರೆಸ್ ಎಸ್‍ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಮಾತನಾಡಿ, ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು ಎಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಆಟೋ ನಾರಾಯಣಸ್ವಾಮಿ ಮಾತನಾಡಿ, ಕೋಲಾರದಲ್ಲಿ 5 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳು ಸಂಚರಿಸುತ್ತಿದ್ದು, ಇತ್ತೀಚಿಗೆ ಬಹುತೇಕ ಆಟೋಗಳು ಸಮರ್ಪಕವಾಗಿ ಸಮವಸ, ಆಟೋ ದಾಖಲೆಗಳನ್ನು ಇಟ್ಟುಕೊಂಡು ಆಟೋ ಚಲಾಯಿಸುತ್ತಾ ಬದುಕು ಸಾಗಿಸುತ್ತಿದ್ದಾರೆಂದರು.
ಮೂವÀತ್ತಕ್ಕೂ ಹೆಚ್ಚು ಆಟೋಗಳನ್ನು ಕೆಂಪು ಹಳದಿ ಹೂವು ಮತ್ತು ಕನ್ನಡ ಬಾವುಟಗಳೊಂದಿಗೆ ಸಿಂಗರಿಸಿ ರಸ್ತೆಯುದ್ದಕ್ಕೂ ಜೋಡಿಸಲಾಗಿತ್ತು. ಆಟೋ ಚಾಲಕರು ಸಾಲಾಗಿ ಆಟೋಗಳನ್ನು ಓಡಿಸಿ ಕನ್ನಡ ಪ್ರೇಮ ಮೆರೆದರು. ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಲಾರ ರೋಟರಿ ಸೆಂಟ್ರಲ್ ಅಧ್ಯಕ್ಷ ಎ.ಸುಧಾಕರ್, ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್, ಕಾಂಗ್ರೆಸ್ ಮುಖಂಡ ಖಾದ್ರಿಪುರ ಬಾಬು ಇತರರು ಭಾಗವಹಿಸಿದ್ದರು.