ಪಿಯು ಪರೀಕ್ಷೆ ಇಂದಿನಿಂದ ಆರಂಭಗೊಂಡಿದೆ

ಪಿಯು ಪರೀಕ್ಷೆ ಇಂದಿನಿಂದ ಆರಂಭಗೊಂಡಿದೆ

 ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿವೆ. ಸರಕಾರ, ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸಕಲ ಕ್ರಮಗಳನ್ನು ತೆಗೆದುಕೊಂಡಿದೆ. ಇವತ್ತಿನಿಂದ ಆರಂಭವಾಗುವ ಪರೀಕ್ಷೆಗಳು ಮಾರ್ಚ್​ 18ರವರೆಗೆ ನಡೆಯಲಿವೆ.

ಈ ಬಾರಿ ಒಟ್ಟು 6,73,606 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರಲ್ಲಿ 3,38,868 ಮಂದಿ ಬಾಲಕರು ಹಾಗೂ 3,34,738 ಬಾಲಕಿಯರು ಇದ್ದಾರೆ. 1013 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.

ವಿದ್ಯಾರ್ಥಿಗಳು ಉಚಿತ ಬಸ್​ ವ್ಯವಸ್ಥೆ

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಹಾಲ್ ಟಿಕೆಟ್​ ತೋರಿಸುವ ಮೂಲಕ ಸರ್ಕಾರಿ ಬಸ್ಸುಗಳನ್ನು ಉಚಿತವಾಗಿ ಹೋಗಬಹುದು.

ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಪರೀಕ್ಷಾ ಕೇಂದ್ರದಿಂದ 200 ಮೀಟರ್​ ಸುತ್ತಮುತ್ತ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಹಾಗೂ ಕೇಂದ್ರದ ಸಮೀಪದ ಎಲ್ಲ ಜೆರಾಕ್ಸ್​ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಇರಿಸುವ ಸ್ಟ್ರಾಂಗ್​ ರೂಮ್​ಗಳಿಗೆ 24X7 ಪೊಲೀಸ್​ ಭದ್ರತೆ ಕಲ್ಪಿಸಲಾಗಿದೆ. ಹಾಗೂ ಉತ್ತರ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಆರ್​ಎಸ್​ ಅಳವಡಿಕೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಯಾರಾದರೂ ಹಂಚುತ್ತಿರುವುದು ಕಂಡುಬಂದಲ್ಲಿ ಅಂತಹವರನ್ನು ಕೂಡಲೇ ಬಂಧಿಸುವ ಆದೇಶ ಮಾಡಲಾಗಿದೆ.