JANANUDI.COM NETWORK
ಪಡುಕೋಣೆ ಚರ್ಚ್ನಲ್ಲಿ 7 ಜನರಿಂದ ಪ್ರಾಥನೆ ಸಲ್ಲಿಕೆ ಕೇಸು ದಾಖಲು: ಮಂದಿರ ಚರ್ಚಗೆ ಮಜ್ಜಿದಿಗೆ ಹೋಗಾಲಾಗುವುದಿಲ್ಲಾವೆಂದು ಕೊರಗುವುದಕ್ಕಿಂತ, ನಮ್ಮ ಮನೆಗಳನ್ನೆ ಮಂದಿರವನ್ನಾಗಿ ಮಾಡಿಕೊಳ್ಳಿ.
ಕುಂದಾಪುರ: ಎ.10 ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಸೆಕ್ಷನ್ 144 ಜ್ಯಾರಿಯಲ್ಲಿದ್ದು. ಭಾರತದಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಸಭೆ ಸಮಾರಂಭಗಳು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಆಚರಿಸುವುದು ನಿಷೇದವಿದೆ. ಅಂದರೆ 4 ಜನರಿಕ್ಕಿಂತ ಹೆಚ್ಚು ಜನರು ಭಾಗವಹಿಸಲ್ಲಿಕ್ಕೆ ಆಸ್ಪದವಿಲ್ಲಾ, ಧರ್ಮಗುರುಗಳಿಗೆ ವಯಕ್ತಿಕವಾಗಿ ಪೂಜೆ ಸಲ್ಲಿಸಲು ಅವಕಾಶವಿದೆ. ಆದರೆ ಪಡುಕೋಣೆ ಚರ್ಚಿನಲ್ಲಿ ಯೇಸುವಿನ ಕೊನೆಯ ಊಟದ ದಿನ ಪೂಜೆ ಸಲ್ಲಿಸುವಾಗ 7 ಜನ ಮಾತ್ರ ವಿದ್ದು, ಇದನ್ನು ಉದ್ದೇಶ ಪೂರ್ವಕವಾಗಿ ಕಂಡು ಹಿಡಿದು, ಆದೇಶ ಉಲ್ಲಂಘಿಸಿ ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತಿದ್ದಾರೆಂದು ದೂರು ಬಂದುದರಿಂದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ನಾಡ ಗ್ರಾಮದ ಪಡುಕೋಣೆ ಸಂತ ಅಂತೋನಿ ಚರ್ಚ್ನಲ್ಲಿ ೭ ಜನರು ಸೇರಿರುವಾಗ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತಿದ್ದಾರೆಂದು, ಸಾಕ್ಷಿಗಾಗಿ ಇಗರ್ಜಿಯ ಕಿಟಕಿಯ ಮುಖಾಂತರ ಪೋಟೊ ತೆಗೆದು ಒಬ್ಬರು ದೂರವಾಣಯ ಮೂಲಕ ಮಾಹಿತಿ ಕೊಟ್ಟಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸಂತ ಅಂತೋನಿ ಚರ್ಚ್ ನಲ್ಲಿ ಪಾದರ್ ಫ್ರೆಡ್ ಮಸ್ಕರಿಯನ್ ಹಾಗೂ ಇತರ 6 ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತಿದ್ದರು. ಹಾಗಾಗಿ ಸಿ.ಆರ್.ಪಿ.ಸಿ ಕಲಂ 144(3) ಉಲ್ಲಂಘನೆ ಮಾಡಿರುವುದು ದೃಢಪಟ್ಟಿದೆಯೆಂದು ಕೇಸುಗಳನ್ನು ದಾಖಲಿಸಲಾಯಿತು.
ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರಿಂದ ಬೈಂದೂರು ತಹಶಿಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಬಸಪ್ಪ ಪಿ. ಪೂಜಾರಿ ಅವರು ನೀಡಿದ ದೂರಿನಂತೆ ಸಂತ ಅಂತೋನಿ ಚರ್ಚ್ ಪಾದರ್ ಫ್ರೆಡ್ ಮಸ್ಕರಿಯನ್ ಹಾಗೂ ಇತರ 6 ಜನರ ಮೇಲೆ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188, 269 ಜೊತೆಗೆ 149 ಪಿ.ಸಿ ಅಡಿಯಲ್ಲಿ ಪ್ರಕರಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸರು ಕೇಸು ದಾಖಲಿಸಿದ್ದಕ್ಕೆ ನಮ್ಮ ವಿರೋಧ ಇಲ್ಲಾ, ಆದರೆ ಬರೆ ೩ ಜನ ಜಾಸ್ತಿ ಇದ್ದದ್ದಕ್ಕೆ ಸಾಮುಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಆರೋಪ ಹೊರಿಸುವುದು ಅಷ್ಟಂದು ಸಮಜಂಸವಲ್ಲಾ. ಇಲ್ಲಿ ಒಂದು ಅನುಮಾನ ಕಾಡುತ್ತದೆ, ಒಂದು ಸಮುದಾಯದವರ ಮೇಲೆ ವೈರತ್ವ ಸಾಧಿಸಲು, ಶಿಸ್ತಿನ ಸಮುದಾಯದವರಾದವರ ಮೇಲೆ ಹೇಗಾದರೂ ಮಾಡಿ ಸಿಕ್ಕಿಸಿ ಹಾಕ ಬೇಕೆಂಬ ದುರಾಲೋಚನೆಯಿಂದಲೇ ಇದು ನಡೆಸಿದೆ, ಮತ್ತು ಕೇಸು ದಾಖಲಿಸಿಕೊಳ್ಳುವಂತೆ ಪ್ರಭಾವ ಬಿರಲಾಗಿದೆಯೆಂಬ ಅನುಮಾನ ಕಾಡುತ್ತದೆ.
ಆದರೂ ಕೂಡ ಎಲ್ಲಾ ಸಮುದಾಯಗಳು ಎಚ್ಚೆತ್ತುಕೊಳ್ಳಬೇಕು, ಅತೀ ಬುದ್ದಿವಂತರ ತರಹ ದಡ್ಡ ಥರಹದ ಕೆಲಸಗಳನ್ನು ಮಾಡಬೇಡಿ. ಸರಕಾರದ ಆದೇಶಗಳನ್ನು ಚೆನ್ನಾಗಿ ಪರಿಶೀಲಿಸಿ ಪಾಲಿಸ ಬೇಕು. ಇವತ್ತು ನಮ್ಮ ಮನೆಯನ್ನೆ ಪೂಜಾ, ಪ್ರಾರ್ಥನ ವಿಧಿ ಅನುಸರಿಸಿ ನಮ್ಮ ಮನೆಗಳನ್ನು ಮಂದಿರ ಮಾಡಿ ಕೊಳ್ಳಲು ದೇವರು ಎಂತಹ ಒಳ್ಳೆ ಅವಕಾಶ ಕೊಟ್ಟಿದ್ದಾನೆ, ಅದರಂತೆ ಮಂದಿರ ಚರ್ಚಗೆ, ಮಜ್ಜಿದಿಗೆ ಹೋಗಾಲಾಗುವುದಿಲ್ಲಾವೆಂದು ಕೊರಗುವುದಕ್ಕಿಂತ, ನಮ್ಮ ಪೂಜಾ, ಪ್ರಾರ್ಥನ ವಿಧಿ ಅನುಸರಿಸಿ ನಮ್ಮ ಮನೆಗಳನ್ನು ಮಂದಿರ ಮಾಡಿ ಕೊಳ್ಳಲು ದೇವರು ಎಂತಹ ಒಳ್ಳೆ ಅವಕಾಶ ಕೊಟ್ಟಿದ್ದಾನೆ, ಅದರಂತೆ ಮನೆಯನ್ನೆ ಪೂಜಾ, ಪ್ರಾರ್ಥನ ವಿಧಿಗಳನ್ನು ಮಾಡಿ ನಮ್ಮ ಮನೆಗಳನ್ನು ಮಂದಿರವನ್ನಾಗಿ ಮಾಡಿಕೊಳ್ಳಿ.