ಪಠ್ಯಪುಸ್ತಕ ವಿತರಣೆ ಮಾಡದ ರಮಣಪ್ಪ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ಮಾಡಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳದ ಉಪ ನಿರ್ದೇಶಕರ ವಿರುದ್ದ ಕ್ರಮ ಕೈಗೊಳ್ಳಬೇಕು: ರೈತ ಸಂಘ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಪಠ್ಯಪುಸ್ತಕ ವಿತರಣೆ ಮಾಡದ ರಮಣಪ್ಪ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ಮಾಡಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳದ ಉಪ ನಿರ್ದೇಶಕರ ವಿರುದ್ದ ಕ್ರಮ ಕೈಗೊಳ್ಳಬೇಕು: ರೈತ ಸಂಘ

 

ಕೋಲಾರ, ಪೆ.05: ಪಠ್ಯಪುಸ್ತಕ ವಿತರಣೆ ಮಾಡದ ರಮಣಪ್ಪ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ಮಾಡಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳದ ಉಪ ನಿರ್ದೇಶಕರ ವಿರುದ್ದ ಕ್ರಮ ಕೈಗೊಳ್ಳಬೇಕು. ಹಾಗೂ ಯಾವುದೇ ಹೊಸ ಖಾಸಗಿ ಶಾಲೆಗೆ ಅನುಮತಿ ನೀಡಬಾರದು ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಶಿಕ್ಷಣ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಮಾಡಲು ಸರ್ಕಾರ ಮೊದಲು ರಾಜಕೀಯ ಹಾಗೂ ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸುವ ಕಾನೂನು ಜಾರಿಯಾಗಬೇಕು.ರಾಜಕೀಯ ಸಂಘಟನೆಗಳಲ್ಲಿ ತೊಡಗಿರುವ ಶಿಕ್ಷಕರ ವಿರುದ್ದ ಕ್ರಮ ಕೈಗೊಂಡು ಶಾಲೆಗಳನ್ನು ಅಭಿವೃದ್ದಿಪಡಿಸುವ ಜೊತೆಗೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರ ಮನ ಒಲಿಸುವಂತೆ ಆದೇಶ ನೀಡಬೇಕು. ಮುಚ್ಚಿರುವ ಸರ್ಕಾರಿ ಶಾಲೆಗಳನ್ನು ಪ್ರಾರಂಭ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಶ್ರಮ ವಹಿಸಬೇಕು.ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳ ಮೂಲಭೂತ ಸೌಲಭ್ಯಗಳು, ಗುಣಮಟ್ಟ,ಶಿಕ್ಷಕರ ವಿದ್ಯಾಭ್ಯಾಸ, ಶಾಲೆಯ ಕಟ್ಟಡದ ಸ್ಥಳ, ಶಾಲೆಯಲ್ಲಿ ಶಿಕ್ಷಕರ ಆಹೋರಾತ್ರಿ ಇವುಗಳ ಗುಣಮಟ್ಟದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಿ ಶಿಕ್ಷಣ ಇಲಾಖೆಯ ನಿಯಮಗಳನ್ನು ಅನುಸರಿಸದ ಎಲ್ಲಾ ಶಾಲೆಗಳ ಬಗ್ಗೆ ತನಿಖೆಯಾಗಿ ಕಾನೂನು ಉಲ್ಲಂಘಿಸಿರುವ ಶಾಲೆಗಳ ಮಾನ್ಯತೆ ರದ್ದು ಮಾಡಬೇಕು. ಕೋರ್ಟ್ ಆದೇಶವನ್ನು ಮೀರಿ ಹೆಚ್ಚಿನ ಶುಲ್ಕ ಪಡೆಯುತ್ತಿದ್ದು, ಶುಲ್ಕದ ದರ ಪಟ್ಟಿಯನ್ನು 4-10ರ ಅಳತೆಯಲ್ಲಿ ಖಾಸಗಿ ಶಾಲೆಗಳ ಮುಂದೆ ನಮೂದಿಸದ ಸರ್ಕಾರಿ ಶುಲ್ಕಕ್ಕಿಂತ ಹೆಚ್ಚಿಗೆ ಪಡೆಯುವ ಖಾಸಗಿ ಶಾಲೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಪಠ್ಯ ಪುಸ್ತಕ ವಿತರಣೆ ಮಾಡದ ರಮಣಪ್ಪ ವಿರುದ್ದ ಕೇಸು ದಾಖಲಿಸಲು ಆದೇಶ ನೀಡಿದ್ದರೂ ಅದನ್ನು ಪಾಲೀಸದ ಉಪ ನಿರ್ದೇಶಕರ ವಿರುದ್ದ ಕ್ರಮ ಕೈಗೊಳ್ಳಬೇಕು. .ಸರ್ಕಾರಿ ಶಾಲೆಗಳಿಗೆ ಆಸ್ತಿಗಳು ಸಂಪೂರ್ಣ ಒತ್ತುವರಿಯಾಗಿದ್ದು, ಇವುಗಳ ಒತ್ತುವರಿ ತೆರವುಗೊಳಿಸಿ ಶಾಲೆಗೆ ಬರುವ ಅಭಿವೃದ್ದಿ ಹಣದ ಲೂಟಿಯನ್ನು ತಡೆಯಬೇಕು, ಖಾಸಗಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಹೊಂದದ ಹಾಗೂ ನಿಯಮಗಳನ್ನು ಪಾಲಿಸದ ಶಾಲೆಗಳು ಮನಸ್ಸಿಗೆ ಬಂದಂತೆ ಡೊನೇಷನ್ ಪಡೆಯುವ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಬೇಕು. ಆರ್.ಟಿ.ಇ ಸೀಟಿನ ಮಕ್ಕಳ ಬಳಿ ಶುಲ್ಕ ಪಡೆಯುವ ಶಾಲೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಮತ್ತು ಪುಸ್ತಕ, ಬಟ್ಟೆ, ಬ್ಯಾಗ್, ಪೆನ್ನು ಇವುಗಳ ಹೆಸರಿನಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿರುವ ಶಾಲೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಹೈಕೋರ್ಟ್ ಸೂಚನೆ ಆದಾರದ ಮೇಲೆ ಶುಲ್ಕ ಸುಲಿಗೆಗೆ ಕಡಿವಾಣ ಹಾಕಿ ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದರು, ಈ ಆದೇಶ ಅಧಿಕಾರಿಗಳ ಪಾಲಿಗೆ ಖಾಸಗಿ ಶಾಲೆಗಳು ನೀಡುವ ಹಣ ಜೇಬು ತುಂಬಿಸಿಕೊಳ್ಳುವ ಕಾಯಕ ಮಾಡಿಕೊಂಡು ಡೋನೆಷನ್‍ಗೆ ಬೆಂಗವಾಲಾಗಿ ನಿಂತಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.
ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ,ಶ್ರೀನಿವಾಸಗೌಡ, ಕಾವ್ಯಾಂಜಲಿ ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಈಕಂಬಳ್ಳಿ ಮಂಜುನಾಥ್, ರವಣಪ್ಪ, ಮುಂತಾದವರಿದ್ದರು.