ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ನೂತನ ಉಪ ನಿರ್ದೇಶಕಿ ಎಂ.ಜಿ.ಪಾಲಿರವರಿಗೆ ಸ್ವಾಗತ ಕೋರಿದ ಅಂಗನವಾಡಿ ಸಮಿತಿ
ಕೋಲಾರ : ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಧಕ್ಷ ಮತ್ತು ಇಲಾಖೆಯಲ್ಲಿ ಉತ್ತಮ ಅಧಿಕಾರಿ ಎಂಬ ಸರ್ಕಾರದಿಂದ ಪ್ರಶಸ್ತಿ ಪಡೆದಿರುವ ಎಂ.ಜಿ.ಪಾಲಿರವರು ಕೋಲಾರದ ಜಿಲ್ಲಾ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪ್ರಜಾಸೇವಾ ಸಮಿತಿ (ಪಿ.ಎಸ್.ಎಸ್) ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕೀಯರ ಕ್ಷೇಮಾಭಿವೃದ್ಧಿ ಸಮಿತಿಯಿಂದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ ನೇತೃತ್ವದಲ್ಲಿ ಉಪನಿರ್ದೇಶಕರ ಕಛೇರಿಯಲ್ಲಿ ಎಂ.ಜಿ. ಪಾಲಿರವರನ್ನು ಶಾಲೂ ಹೊದಿಸಿ ಹಾರ ಹಾಕಿ ಸಿಹಿ ತಿನಿಸುವ ಮೂಲಕ ಸ್ವಾಗತಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಭಿವೃದ್ಧಿ ನಿರೀಕ್ಷಕಿ ಶೀಲಾ.ಬಿ.ಎಸ್. ಎಂಬುವರು ಇಲಾಖೆಗೆ ಬಂದಾಗಿನಿಂದ ಜಿಲ್ಲೆಯ ಬಡ ಮಹಿಳೆಯರಿಗೆ ಇಲಾಖೆಯಿಂದ ಹೆಚ್ಚಿನ ಸೌಲಭ್ಯಗಳನ್ನು ನೀಡಿ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಈಗ ಮಾಲೂರಿನ ಪ್ರಭಾರ ಸಿ.ಡಿ.ಪಿ.ಒ. ಆಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ಶೀಲಾ ರವರನ್ನು ಉಪನಿರ್ದೇಶಕಿಯ ಮುಖಾಂತರ ಶಾಲೂ ಹೊದಿಸಿ ಹಾರ ಹಾಕಿ ಸಿಹಿ ತಿನಿಸುವ ಮೂಲಕ ಅವರನ್ನು ಸಹ ಸಮಿತಿಯಿಂದ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರೊ.ನಂಜುಂಡ ಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಲಾರದ ಜಿ. ನಾರಾಯಣಸ್ವಾಮಿ, ಅಂಗನವಾಡಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ನಿರ್ಮಲಾ ಬಾಯಿ, ಸಮಿತಿಯ ಮುಖಂಡರುಗಳಾದ ನಾಗವೇಣಮ್ಮ, ವಿ.ಜಮುನಾರಾಣಿ, ಶ್ರೀನಿವಾಸಪುರದ ಎಂ.ಪಾರ್ವತಮ್ಮ, ಚೌಡಮ್ಮ, ಮಾಲೂರಿನ ಎಂ.ವಿಜಯಕುಮಾರಿ ಹಾಗೂ ಅಂಗವಿಕಲ ಕಲ್ಯಾಣಾಧಿಕಾರಿ ವೆಂಕಟರಮಣಪ್ಪ ಮತ್ತು ಮಾಲೂರಿನ ಮಹಿಳಾ ಸಂತ್ವಾನ ಸಹಾಯವಾಣಿಯ ಕಾರ್ಯದರ್ಶಿ ಎಸ್.ಆರ್.ಲಕ್ಷ್ಮಮ್ಮ ಉಪಸ್ಥಿತರಿದ್ದರು.