ನಿರ್ಮಲ ಭಕ್ತಿಯಿಂದ ಮಾತ್ರ ಪರಮಾತ್ಮನ ಕೃಪೆಗೆ ಪಾತ್ರವಾಗಬಹುದು . ಆದರೆ ಭಕ್ತಿ ಪರಿಶುದ್ದವಾಗಿರಬೇಕು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಶ್ರೀನಿವಾಸಪುರ 1 : ನಿರ್ಮಲ ಭಕ್ತಿಯಿಂದ ಮಾತ್ರ ಪರಮಾತ್ಮನ ಕೃಪೆಗೆ ಪಾತ್ರವಾಗಬಹುದು . ಆದರೆ ಭಕ್ತಿ ಪರಿಶುದ್ದವಾಗಿರಬೇಕು ಅಷ್ಟೆ. ದೇವರು ಮತ್ತೇನನ್ನೂ ಕೇಳುವುದಿಲ್ಲ ಎಂದು ರಾಯಲ್ಪಾಡಿನ ಮೇಧಾ ಗುರು ಜ್ಯೋತಿರ್ವಿಜ್ಞಾನ ಕೇಂದ್ರದ ಸಂಸ್ಥಾಪಕ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ಹೇಳಿದರು.
ಶುಕ್ರವಾರ ಬಯ್ಯಪಲ್ಲಿ ಗ್ರಾಮದಲ್ಲಿನ ಗ್ರಾಮದೇವತೆಯವರಾದ ಗಂಗಮ್ಮ,ಪುಲೇಕಮ್ಮ ದೇವರ ಮಂಡಲಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಥಿರ ಚಿತ್ತದಿಂದ ಐಹಿಕತ್ವವನ್ನು ಮರೆತು ಮೌನಯೋಗದಿಂದ ಭವಬಂದಗಳನ್ನು ದೂರಕ್ಕೆ ತಳ್ಳಿ ಪರಮಾತ್ಮನನ್ನು ನೆನೆಯುತ್ತಾ ಸ್ವಲ್ಪ ಸಮಯ ದೇವಸ್ಥಾನದಲ್ಲಿ ಕುಳಿತು ಬರುವುದರಿಂದ ಮನಸ್ಸಿಗೆ ಸ್ವಸ್ಥತೆ ಬರುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ . ಯೋಚನೆಗಳೆಲ್ಲವೂ ಸಕ್ರಮವಾಗುತ್ತದೆ.
ದೇವರನ್ನು ಪರಿಶುದ್ದವಾದ ಭಕ್ತಿಯಿಂದ ಗೆಲ್ಲಬೇಕು . ಭಕ್ತಿಗೆ ಎಲ್ಲಕಿಂತ ಮಿಗಿಲಾದ ಶಕ್ತಿ ಇದೆ. ಎಲ್ಲರನ್ನೂ ನಿಗ್ರಹಿಸುವ ಒಂದು ಶಕಿ ಇದ್ದು, ಅದನ್ನೇ ನಾವು ಪರಮಾತ್ಮ ಎನ್ನುತ್ತೇವೆ. ಆತನ ಸೇವೆ ಮಾಡಿದವರು ಎಂದೂ ಕೆಟ್ಟಿಲ್ಲ . ಸ್ವಾಮಿಯ ಸೇವೆಯ ಅವಕಾಶ ಸಿಕ್ಕಿರುವ ನಾವೇ ಧನ್ಯರು . ದಿನ ನಿತ್ಯದ ಒತ್ತಡದಿಂದ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದು , ಮನಸ್ಸಿನ ಶಾಂತಿಗಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅರ್ಚಕರ ಹಾಗು ಪುರೋಹಿತರ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ವಿಕ್ರಮ್, ಪುರೋಹಿತ ಸುಬ್ರಮಣ್ಯರವರು ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದರು
.