ನಾರಿ ಮಣಿಯರಲ್ಲಿ ಒಬ್ಬಳಾದ  ದಿಟ್ಟ  ಪ್ರಭಾವಿ ಆಡಳಿತಗಾರ್ತಿ “ವಿನ್ನಿಯಮ್ಮ” ಖ್ಯಾತ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ದೈವಧಿನರಾದರು : ಕುಂದಾಪುರ ಕ್ಷೇತ್ರಕ್ಕೆ ಇಂದಿರಾ ಗಾಂಧಿಯಂತೆ ಧೈರ್ಯವಂತೆ, ದಿಟ್ಟ ಆಡಳಿತ ನಡೆಸಿದವರು.

JANANUDI.COM NETWORK

 

 

ನಾರಿ ಮಣಿಯರಲ್ಲಿ ಒಬ್ಬಳಾದ  ದಿಟ್ಟ  ಪ್ರಭಾವಿ ಆಡಳಿತಗಾರ್ತಿ “ವಿನ್ನಿಫ್ರೆಡ್ ” ಖ್ಯಾತ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ದೈವಧಿನರಾದರು :

ಕುಂದಾಪುರ ಕ್ಷೇತ್ರಕ್ಕೆ ಇಂದಿರಾ ಗಾಂಧಿಯಂತೆ ಧೈರ್ಯವಂತೆ, ದಿಟ್ಟ ಆಡಳಿತ ನಡೆಸಿದವರು.

 

 

 

 

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ, ಹಿರಿಯ ರಾಜಕಾರಣಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಇಂದು  ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಕಳೆದ ಕೆಲ ಕಾಲದಿಮ್ದ ಅನಾರೋಗ್ಯ ಪೀಡಿತರಾಗಿದ್ದ ಅವರು ಇಂದು ನಿಧನರಾಗಿದ್ದಾರೆ.

ದಿಟ್ಟ ನಿಲುವಿನ ಗಟ್ಟಿ ದನಿಯ ರಾಜಕಾರಣಿ ಎಂದೇ ಹೆಸರಾಗಿದ್ದ ವಿನ್ನಿಫ್ರೆಡ್ ಫೆರ್ನಾಂಡಿಸ್ ಎರಡು ಬಾರಿ ಶಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲು ಇವರು ಪ್ರಜಾ ಸೊಶೀಲ್ಸಿಟ್ ಪಕ್ಷದಲ್ಲಿ ಚುನಾವಣೆಗೆ ನಿಂತು ಬ್ರಹತ್ ಗೆಲುವನ್ನು ಕಂಡಿದ್ದರು. ಅಂದು ಮನೆ ಮನೆಗಳಲ್ಲಿ, ರಸ್ತೆಗಳಲ್ಲಿ ಪ್ರಜಾ ಸೊಶೀಲ್ಸಿಟ್ ಪಕ್ಷದ ಬಿರುಗಾಳಿ ಬಿಸುತಿತ್ತು. ಕುಂದಾಪುರದ ರಸ್ತೆಯ ಕೊನೆ ಕೊನೆಯಲ್ಲಿ ಇವರ ಬಗ್ಗೆ ಹಾಡಿನ ಮಾರ್ಧನಿ ಮೊಳಗುತಿತ್ತು, ಇದರ ಜೊತೆಗೆ ಬೈಂದೂರಿನ ಶಾಸಕರಾಗಿ ಹಲ್ಸನಾಡು ಸುಬ್ಬರಾಯರು, ಇಬ್ಬರು ಪ್ರಜಾ ಸೊಶೀಲ್ಸಿಟ್ ಪಕ್ಷದಲ್ಲಿ ನಿಂತು ಅಭೂತ ಪೂರ್ವ ಜಯ ಸಾಧಿಸಿದ್ದರು. ಆವತ್ತು ಪ್ರಜಾ ಪ್ರಜಾ ಸೊಶೀಲ್ಸಿಟ್ ಪಕ್ಷದ ಗುರುತು ಮನೆಯಾಗಿತ್ತು, ಈ ಮನೆಯ ಆಕ್ರತಿ ಸಾವಿರಾರೂ ಜನರ ಅಂಗಳದಲ್ಲಿ  ಗೂಡು ದೀಪಗಳಂತ್ತೆ ತೂಗುದಿದ್ದವು. ಅಂದು ವಿಜಯೋತ್ಸೊವ ಆಚರಿಸುವಾಗ ಕುಂದಾಪುರ ಬೀದಿ ಬೀದಿಯಲ್ಲಿ ಬ್ಯಾಂಡು, ಸಂಗೀತದೊಂದಿಗೆ ಅಭಿಮಾನಿಗಳ ಜಯಕಾರದೊಂದಿಗೆ, ಹೂ ಮಾಲೆಗಳನ್ನು ಸ್ವೀಕರಿಸುತ್ತಾ  ಮೆರವಣಿಗೆಯಲ್ಲಿ ಸಾಗಿದ್ದು ಈಗಲೂ ನೆನಪಿನಲ್ಲಿ ಇದೆ.

    ಮೊದಲು ಇವರು  ಕುಂದಾಪುರ ಪುರಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು, ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸೇರಿ ಮತ್ತೊಮ್ಮೆ ಶಾಸಕಿಯಾದರು.  ಅವರ ಕಾಲದಲ್ಲಿ ಅವರು ಉತ್ತಮ ಆಡಳಿತ ನೀಡಿದ್ದರು. ಬಡವರಿಗೆ ಅವರಿಂದ ತುಂಬ ಸಹಾಯವಾಗಿದೆ.  ಸಹಾಯ ಕೇಳಿದವರಿಗೆ ಸಹಾಯ ನೀಡುವ ಗುಣ ಅವರದಾಗಿತ್ತು.   ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿಯೂ ಅವರು ಆಯ್ಕೆಯಾಗಿದ್ದರು.

    ವಿನ್ನಿಫ್ರೆಡ್ ಫೆರ್ನಾಂಡಿಸ್ ಎಂದರೆ ಅವರು ವಿನ್ನ್ ಆಗುವರೇ ಆಗಿದ್ದರು, ಬಹಳ ಛಲಗಾರ್ತಿಯಾಗಿದ್ದ ಅವರು, ನೇರ ದಿಟ್ಟ ನುಡಿಯ ಗಟ್ಟಿಗಾರ್ತಿ.  ಹಾಗೇ ನಡೆದುಕೊಳ್ಳುವರಾಗಿದ್ದು, ಯಾರಿಗೆ ಏನು ಕಮ್ಮಿ ಇರಲಿಲ್ಲಾ, ಅವರಿಗೆ ಮಂತ್ರಿಗಿರಿ ಸಿಗದಿದದ್ದು ನಮ್ಮ ಕುಂದಾಪುರದ ದೌರ್ಭಾಗ್ಯವೇ ಸರಿ. ದೇಶಕ್ಕೆ  ಅಂದು  ಇಂದಿರಾ ಗಾಂಧಿ ಪ್ರಧಾನಿಯಾದರೆ, ವಿನ್ನಿಫ್ರೆಡ್ ಫೆರ್ನಾಂಡಿಸ್ ಕುಂದಾಪುರ ಕ್ಷೇತ್ರಕ್ಕೆ ಇಂದಿರಾ ಗಾಂಧಿಯಂತೆ ಧೈರ್ಯವಂತೆ, ದಿಟ್ಟಗಾರ್ತಿಯಾಗಿ ಆಡಳಿತ ನಡೆಸಿದವರು.

    90 ವರ್ಷದ ಜನ್ಮ ದಿನವನ್ನು ಆಚರಿಸುವಾಗ ಅವರು ತಮ್ಮ ಎಲ್ಲಾ ಹಳೆ ನೆನಪುಗಳನ್ನು ಸ್ಮರಿಸಿಕೊಂಡಿದ್ದರು. ವಿಧಾನ ಸಭೆಯಲ್ಲಿ ಗುಡ್ ಪ್ರೈಡೆಗೆ ರಜೆ ಬೇಕೆಂದು ಒತ್ತಾಯ ಮಾಡಿ ಅದು ಸಫಲವಾಗದಿದ್ದಾಗ ಸಭೆಯನ್ನು ತ್ಯಜಿಸಿ ಹೊರ ಹೋಗಿದ್ದರು. ನಂತರ ಮುಂದಿನ ದಿನಗಳಲ್ಲಿ ಇದು ರಾಷ್ಠ್ರ ರಜೆಯಾಗಿ ಮಾರ್ಪಟ್ಟಿದ್ದು, ಹೀಗೆ ಅನೇಕ ಜನಪರ ಕೆಲಸವನ್ನು ಅವರು ಮಾಡಿದ್ದರು.

    

     ತಮ್ಮ ಓರಗೆಯ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದ ವಿನ್ನಿಫ್ರೆಡ್ ಫೆರ್ನಾಂಡಿಸ್ ಅಂದಿನ ಕಾಲದ,ಬಹಳ ಪ್ರಭಾವಿ ನಾಯಕಿಯಾಗಿದ್ದರು. ಕುಂದಾಪುರ ಪರಿಸರದಲ್ಲಿ ವಿನ್ನಿಯಮ್ಮ ಎಂದೇ ಚಿರಪರಿಚಿತರು. ವಿನ್ನಿಫ್ರೆಡ್ ಫೆರ್ನಾಂಡಿಸ್ ಮೂವರು ಪುತ್ರರು,  ಆಲ್ಫ್ರೆಡ್, ವಿಲ್ಫ್ರೆಡ್, ಜೊಸ್ಫ್ರೆಡ್ ಮೂವರು ಪುತ್ರಿಯರು ಮಾರಿಯೆಟ್, ಹ್ಯಾರಿಯೆಟ್, ಶಾಲೆಟ್ ಮತ್ತು ಅಳಿಯಂದಿರು, ಸೊಸೆಯಂದಿರು ಹಾಗೇ ಭಾರೀ  ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಕುಟುಂಬುದ ಮೂಲಗಳ ಪ್ರಕಾರ ಅಂತ್ಯಕ್ರಿಯೆಯು ನಾಡಿದ್ದು 30 ನೇ ತಾರಿಕಿನಂದು ನಡೆಯಲಿದೆಯೆಂದು ತಿಳಿದು ಬಂದಿದೆ.

 ಜನನುಡಿ ಸುದ್ದಿ ಜಾಲ ಸಂಸ್ಥೆ ಅವರಿಗೆ ಹ್ರದಯಾಳದೊಂಗಿಗೆ ಶ್ರದ್ದಾಂಜಲಿ ಅರ್ಪಿಸುತ್ತದೆ. ಮತ್ತು ದುಖಿತ ಕುಟುಂಬಕ್ಕೆ, ದುಖವನ್ನು ಸಹಿಸಿಕೊಳ್ಳಲು ದೇವರು ಶಕ್ತಿಯನ್ನು ನೀಡಲೆಂದು ಬೇಡುತ್ತೇವೆ