JANANUDI.COM NETWORK
ನಾನು ಅಧಿಕಾರದಲ್ಲಿ ಇರಲಿ ಬಿಡಲಿ, ಜನರ ಸಮಸ್ಯೆಯನ್ನು ಸ್ಪಂದಿಸಿ ಜನರ ಪ್ರತಿನಿಧಿಯಾಗುತ್ತೇನೆ – ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ
ಕುಂದಾಪುರ, ಡಿ.೬: ನಾನು ಅಧಿಕಾರದಲ್ಲಿ ಇರಲಿ ಬಿಡಲಿ, ಜನರ ಸಮಸ್ಯೆಯನ್ನು ಸ್ಪಂದಿಸಿ ಜನ ಪ್ರತಿನಿಧಿಯಾಗುತ್ತೇನೆ – ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಡಿಸೆಂಬರ್ ೫ ರಂದು ಕುಂದಾಪುರದ ಶೆರೋನ್ ಹೊಟೇಲಿನ ಹರ್ಷ ರೆಪ್ರೆಶಮೆಂಟನಲ್ಲಿ ಕುಂದಾಪುರ ತಾಲೂಕು ನಿರತ ಪತ್ರಕರ್ತರ ಸಂಘದ ಜೊತೆ ನೆಡೆದ ಸಂವಾದ ಗೋಷ್ಠಿರಯಲ್ಲಿ ತಮ್ಮ ಮನದದ ಮತ್ತು ತಾನು ಮಾಡಿದ ಅಭಿವ್ರದ್ದಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವಿರ ಎಂಬ ಪರ್ಶ್ನೆಗೆ ಅವರು ಮನಸ್ಸಿದೆಯೆಂದು ಹೇಳಿದರು
ಚುನಾವಣೆಯಲ್ಲಿ ಆಯ್ಕೆಯಾದವರು ಚುನಾಯಿತ ಪ್ರತಿನಿಧಿಗಳಾದರೇ, ಜನರೊಂದಿಗೆ ಇದ್ದು ಜನರ ಸಮಸ್ಯೆ ಹಾಗೂ ಭಾವನೆಗಳಿಗೆ ಸ್ಪಂದಿಸುವವರು ನಿಜವಾದ ಜನಪ್ರತಿನಿಧಿಗಳಾಗುತ್ತಾರೆ. ಅಧಿಕಾರ ಇದ್ದಾಗ ಯಾವ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತೇನೊ ಈಗಲೂ ಮಾಡುತ್ತೇನೆ.
ನಾನು ಅಧಿಕಾರದಲ್ಲಿದ್ದಾಗೆ ನನ್ನಿಂದ ಆದ ಕೆಲಸಕ್ಕೆ ತೃಪ್ತಿ ಇದೆ. . ಈ ಭಾಗದ ಪ್ರಮುಖ ಸಮಸ್ಯೆಗಳಾದ ಮರಳು ಹಾಗೂ ಡೀಮ್ಡ್ಫಾರೆಸ್ಟ್ ಸಮಸ್ಯೆಯ ಕುರಿತು ಶಾಶ್ವತವಾದ ಪರಿಹಾರ ಕಾಣಬೇಕಾದ ಅನಿವಾರ್ಯತೆ ಇದೆ. ಒಂದು ಸರ್ವೇ ನಂಬರ್ನ ಕೆಲ ಭಾಗಗಳು ಡೀಮ್ಡ್ಫಾರೆಸ್ಟ್ನಲ್ಲಿ ಬಂದರೇ, ಆ ಸರ್ವೇ ನಂಬರ್ನಲ್ಲಿ ಎಲ್ಲ ಜಾಗವೂ ಡೀಮ್ಡ್ಫಾರೆಸ್ಟ್ ವ್ಯಾಪ್ತಿಗೆ ಒಳಪಡುವ ಅವೈಜ್ಞಾನಿಕ ಕ್ರಮಗಳಿವೆ. ಮೂಕಾಂಬಿಕಾ ಅಭಯಾರಣ್ಯವನ್ನು ಈಗಾಗಲೇ ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸಲಾಗಿದೆ. ಕುದುರೆಮುಖ ಹಾಗೂ ಸೋಮೇಶ್ವರ ಅರಣ್ಯ ಪ್ರದೇಶಗಳಿಗೂ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕ ಆಕ್ಷೇಪಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಮರಳು ಸರಿಯಾಗಿ ತೆಗೆಯಲು ಅವಕಾಶ ಕೊಡದೆ ಕೆಲವು ನದಿಗಳಲ್ಲಿ ಮರಳಿನಿಂದಾಗಿ ದ್ವೀಪವಾಗಿದೆ, ಅದರಲ್ಲಿ ಅರಣ್ಯ ಇಲಾಖೆಯವರು ಗೀಡಗಳನ್ನು ನಡುತ್ತಾರೆಂದು ಅವರ ಗಮನ ಸೆಳೆದಾಗ. ಅಲ್ಲಿಯೂ ಮರಳು ತೆಗೆಯಲು ಲೈಸನ್ಸ್ ಇದ್ದವರಿಗೆ ಅವಕಾಶ ಕೊಡಬೇಕು ಎಂದು ತಿಳಿಸಿದರು.
ಫ್ಲೈಓವರ್ ಅಗತ್ಯವಿದೆಯಾ ಎನ್ನುವ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಉತ್ತರಿಸಿದ ಜೆ.ಪಿ ಹೆಗ್ಡೆ, ’ಫ್ಲೈಓವರ್ ಅಗತ್ಯ ಕುಂದಾಪುರಕ್ಕೆ ಅಗತ್ಯವಿತ್ತು. ಜನರ ಅಪೇಕ್ಷೆಗೆ ಸ್ಪಂದಿಸಿ ಫ್ಲೈಓವರ್ ಯೋಜನೆಯನ್ನು ಸೆರಿಸಲು ಸಹಕರಿಸಿದ್ದೆ. ಇದರಿಂದ ಯಾವ ತಪ್ಪಾಗಿದೆ’ ಎಂದು ಅವರೇ ಕೇಳಿದರೂ. ಆ ಹೇಳಿಕೆ ತಪ್ಪು ಎನ್ನುವ ರೀತಿ ಅವರು ಮಾತಮಾಡಿದರು.
ಕುಂದಾಪುರಕ್ಕೆ ಇಡೀ ಉಡುಪಿ ಜಿಲ್ಲೆಯಲ್ಲಿರುವುದು ಒಂದೇ ಫ್ಲೈಓವರ್. ಶಾಸ್ತ್ರೀ ವೃತ್ತದಲ್ಲಿರುವ ಫ್ಲೈಓವರ್ ಅನ್ನು ಬಸ್ರೂರು ಮೂರುಕೈ ತನಕವೂ ವಿಸ್ತರಿಸಲು ಶ್ರಮ ವಹಿಸಿದ್ದೆ. ಆದರೆ ಆ ದಿನಗಳಲ್ಲಿ ಅದು ಸಾಧ್ಯವಾಗಿಲ್ಲ. ಶಾಸ್ತ್ರಿ ಸರ್ಕಲ್ನಲ್ಲಿ ನಿಗದಿತ ಅವಧಿಯ ಒಳಗೆ ಫ್ಲೈ ಓವರ್ ಕಾಮಗಾರಿ ಪೂರ್ತಿಗೊಂಡಿದ್ದರೆ ಯಾರೂ ಈ ಕುರಿತು ಮಾತನಾಡುತ್ತಿರಲಿಲ್ಲ.
ಹೆದ್ದಾರಿ ಯೋಜನೆ ಮತ್ತು ವಾರಾಹಿ ಎಡ ಬಲ ದಂಡೆ ಇಂತಹ ಯೋಜನೆಗಳು ಅವಧಿ ಮುಗಿದು ಹಲವಾರು ವರ್ಷಗಳು ಪೂರ್ಣ ಗೊಳ್ಳದಿದ್ದರು ಆ ಕಂಪೆನಿಗಳನ್ನು ಬ್ಲ್ಯಾಕ್ ಲಿಸ್ಟನಲ್ಲಿ ಹಾಕಲಿಲ್ಲಾ, ದಂಡವೂ ವಿಧಿಸುವುದಿಲ್ಲಾ ಯಾಕೆ ಅಂತಾ ಕೇಳಿದರೆ. ಟೆಂಡರ್ ಪಾಸ್ ಆಗಿ ಆ ಯೋಜನೆ ಮೇಲೆ ಕೇಸ್ ಆಗಿ ೫ ವರ್ಷಗಳಾದ ಬಳಿಕವೂ ಅದೇ ಕಂಪನಿಗೆ ದುಡ್ಡು ಜಾಸ್ತಿ ಮಾಡಿ ಟೆಂಡರ್ ನೀಡಿದ ದಾಖಲೆ ನಮ್ಮಲ್ಲಿ ಇದೆ ಎನ್ನುತ್ತಾ, ಈ ವ್ಯವಸ್ಥೆ ಸರಿಯಾಗ ಸರಿಯಿಲ್ಲವಂಬತ್ತೆ ಉತ್ತರ ನೀಡಿದರು.
ಪ್ರವಾಸದ್ಯೋಮದಲ್ಲಿ ಕೇರಳ ಮತ್ತು ಗೋವಾ ಬಹಳವಾದ ಅಭಿವ್ರದ್ದಿಯನ್ನು ಪಡೆದಿದೆ, ನಮ್ಮಲ್ಲಿಯೂ ಅಂತಹಾ ಹಿನ್ನಿರು ಪ್ರದೇಶ, ಬೀಚ್ ಗಳು ಇವೆಯಾದರೂ ನಮ್ಮ ಕರವಳಿಯಲ್ಲಿ ಪ್ರವಾಸದ್ಯೋಮ ಹಿಂದೆ ಬಿದ್ದಿದೆ ಎಂಬ ಪ್ರಶ್ನೆಗೆ ಅವರು ಪ್ರವಾಸದ್ಯೋಮದಲ್ಲಿ ನಾವು ಹಿಂದ್ದೆ ಇದೆವೆಂದು ಒಪ್ಪಿಕೊಂಡ ಅವರು ಆದರೂ ಕುಂದಾಪುರ ಕೋಡಿಯಲ್ಲಿ ಬ್ಯಾಕ್ ವಾಟರ್ ಯೋಜನೆ ಮಾಡಲು ನಾನೇ ಮುತುವರ್ಜಿ ವಹಿಸಿದ್ದೆ ಎಂದು ಹೇಳಿದಾಗ. ಆಲಿ ಈಗ ಪ್ರವಾಸಿಗರು ತುಂಬರುತ್ತಾರೆ, ಆದರೆ ಕುಂದಾಪುರ ಚರ್ಚ ರಸ್ತೆಯನ್ನು ದಾಟಿ ಕೋಡಿ ಭಾಗಕ್ಕೆ ಹೋಗುವಾಗ ರಸ್ತೆ ತೀರ ಸಪೂರವಾಗಿದ್ದು, ಪ್ರವಾಸಿಗಳಿಗೆ ಅನಾನುಕೂಲವಾಗುತ್ತೆ ಎಂದು ತಿಳಿಸಲಾಯಿತು.
ಕುಂದಾಪುರ ತಾಲ್ಲೂಕು ಕಾರ್ಯನಿರಹೀಗೆ ಅನೇಕ ಯೋಜನೆಗಳಿಗೆ ಸಂಬಂಧ ಪಟ್ಟಂತ್ತೆ ಸಂವಾದ ನಡೆಯಿತು. ವಾರದ ಹಿಂದೆ ಹೆದ್ದಾರಿ ಜಾಗ್ರತಿ ಸಮಿತಿಯವರು ಮಾಡಿದ ಹೋರಾಟದಿಂದ ಹೆದ್ದಾರಿ ೬೬ ಕಾಮಾಗಾರಿ ಪುನಾರಾರಂಭವಾಗಿದೆಯೆಂದು ತಿಳಿಸಿ ಇದರ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ ಉಪಸ್ಥಿತರಿದ್ದರು. ಈ ಸಂವಾದದಲ್ಲಿ ತಾಲೂಕಿನ ಹೆಚ್ಚು ಪತ್ರಕರ್ತರು ಭಾಗವಹಿಸಿದ್ದರು.