ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಜೇತ ಶಾಲೆಗೆ ದೇಣಿಗೆ ಹಸ್ತಾಂತರ

ವರದಿ:ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಜೇತ ಶಾಲೆಗೆ ದೇಣಿಗೆ ಹಸ್ತಾಂತರ


ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಗುರುತಿಸಿಕೊಂಡಿರುವ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರ ಹುಟ್ಟುಹಬ್ಬ ಮತ್ತು ಸಂಘದ ಪೂರ್ವಾಧ್ಯಕ್ಷ ಬಿರೋಟ್ಟು ದಿನೇಶ್ ಪೂಜಾರಿ ಮತ್ತು ಹಿತಾ ದಿನೇಶ್ ದಂಪತಿಗಳ ವೈವಾಹಿಕ ಜೀವನದ ವಿವಾಹ ವಾರ್ಷಿಕೋತ್ಸವವನ್ನು ಕಾರ್ಕಳದ ಪರಪ್ಪು ವಿಜೇತ ವಿಶೇಷ ಶಾಲೆಯ ಭಿನ್ನ ಸಾಮಥ್ರ್ಯವುಳ್ಳ ದೇವರ ಮಕ್ಕಳೊಂದಿಗೆ ತಮ್ಮ ಸಂಭ್ರಮವನ್ನು ಆಚರಿಸುವ ಮೂಲಕ ಅಡಂಬರದ ಆಚರಣೆಗೆ ವಿಮುಕ್ತಿ ನೀಡಿ ಮಾನವೀಯ ಮೌಲ್ಯಕ್ಕೆ ಮನ್ನಣೆ ನೀಡುವ ಮೂಲಕ ಶಾಲೆಗೆ ರೂ. 5000/- ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ವಿಜೇತ ಶಾಲೆಯ ಪ್ರಾಂಶುಪಾಲರಾದ ಕಾಂತಿ ಹರೀಶ್, ಹರೀಶ್ ಕುಮಾರ್, ಬೆಂಗಳೂರು ನೈಸ್ ಕಂಪನಿಯ ಉದ್ಯೋಗಿ ಆಶಾ ಕುಮಾರಿ, ಶಾಲಾ ಸಿಬ್ಬಂದಿ ವರ್ಗದವರು, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸದಸ್ಯರು ಮತ್ತಿತರು ಉಪಸ್ಥಿತಿತರಿದ್ದರು.