ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪ್ರಿಂಟರ್ಸ್ (ಮುದ್ರಕರ) ದಿನಾಚರಣೆ

ವರದಿ:ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪ್ರಿಂಟರ್ಸ್ (ಮುದ್ರಕರ) ದಿನಾಚರಣೆ


ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ (ರಿ.)ನ ವತಿಯಿಂದ ಪ್ರಿಂಟರ್ಸ್ (ಮುದ್ರಕರ) ದಿನಾಚರಣೆ ಅಂಗವಾಗಿ ಕೆದಿಂಜೆ ಶಿವನೇತ್ರ ಪ್ರಿಂಟರ್ಸ್ ಉದ್ಯಮದ ಮೂಲಕ ಕಳೆದ 20 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಿರುವ ಕೆದಿಂಜೆ ಶಿವನೇತ್ರ ಪ್ರಿಂಟರ್ಸ್‍ನ ಮಾಲಕರಾದ ಆನಂದ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ನಂದಳಿಕೆ ಪ್ರಶಾಂತ್ ಪೂಜಾರಿ, ಬಾಲಕೃಷ್ಣ ಮಡಿವಾಳ, ಅಣ್ಣಿ ಕುಲಾಲ್, ಪ್ರವೀಣ್ ಶೆಟ್ಟಿ, ಲತಾ ಕುಲಾಲ್ ಮೊದಲಾದವರಿದ್ದರು.