ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಂಶತಿ ಸಂಭ್ರಮ, ವಿವಿಧ ಪ್ರಶಸ್ತಿ ಪ್ರದಾನ,

ವರದಿ: ವಾಲ್ಟರ್ ಮೊಂತೇರೊ

 

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :
ವಿಂಶತಿ ಸಂಭ್ರಮ, ವಿವಿಧ ಪ್ರಶಸ್ತಿ ಪ್ರದಾನ,

ಕರ್ನಾಟಕ ಸಂಘ ರತ್ನ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 20ನೇ ವರ್ಷಾಚರಣೆ ಅಂಗವಾಗಿ ನಂದಳಿಕೆಯ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಜರಗಿದ ವಿಂಶತಿ ಸಂಭ್ರಮ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ಕ್ಷೇತ್ರ ಕೇಮಾರು ಮಠದ ಶ್ರೀಶ್ರೀಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಬೋಳ ವಂಜಾರಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಮಾರಂಭವನ್ನು ಉದ್ಘಾಟಿಸಿದರು. ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರ್ನಾಟಕ ಸರಕಾರದ ಮುಖ್ಯ ಸಚೇತರಾದ ವಿ. ಸುನಿಲ್ ಕುಮಾರ್, ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್, ನಂದಳಿಕೆ ಚಾವಡಿ ಅರಮನೆಯ ಎನ್. ಸುಹಾಸ್ ಹೆಗ್ಡೆ, ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಶೆಟ್ಟಿ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಬೆಂಗಳೂರು ಬಿ.ಎಸ್.ಎನ್.ಡಿ.ಪಿ. ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಗೀತಾಂಜಲಿ ಎಂ. ಸುವರ್ಣ ಕಟಪಾಡಿ, ಸಮಾಜ ಸೇವಕರು ಮತ್ತು ಯುವ ಉದ್ಯಮಿ ಇನ್ನಾ ದೀಪಕ್ ಕೋಟ್ಯಾನ್ ತುಳು ಚಲನಚಿತ್ರ ಹಾಗೂ ಬಲೇ ತೆಲಿಪಾಲೆ ಖ್ಯಾತಿಯ ಬೈಲೂರು ಪ್ರಸನ್ನ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಇನ್ನ ಗೋಪಾಲ ಮೂಲ್ಯ, ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಪ್ರೆಡ್ ಡಿಸೋಜಾ, ಕಾರ್ಕಳದ ಯುವ ಉದ್ಯಮಿ ಸಮದ್ ಖಾನ್, ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಸತ್ಯನಾರಾಯಣ ಭಟ್, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬೋಳ ನಾರಾಯಣ ನಲ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ರಾಜು ಶೆಟ್ಟಿ ಕುಂಟಲಗುಂಡಿ, ಫ್ರೆಂಡ್ಸ್ ಕ್ಲಬ್‍ನ ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ ವಿಂಶತಿ ಸಂಭ್ರಮಾಚರಣೆ ಸಮಿತಿಯ ಕಾರ್ಯಾಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್ ಸಮಾರಂಭದಲ್ಲಿ ಉಪಸ್ಥಿತಿರಿದ್ದರು.
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ನಂದಳಿಕೆ ಪ್ರಶಾಂತ್ ಪೂಜಾರಿ ವರದಿ ವಾಚಿಸಿದರು. ಟಿವಿ ನಿರೂಪಕರಾದ ರಾಜೇಂದ್ರ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು. ವಿಂಶತಿ ಸಂಭ್ರಮಾಚರಣೆ ಸಮಿತಿಯ ಕಾರ್ಯದರ್ಶಿ ಕಾಸರಬೈಲು ಸುರೇಶ್ ಪೂಜಾರಿ ವಂದಿಸಿದರು.

“ಅಬ್ಬನಡ್ಕ ಸೌರಭ ಪ್ರಶಸ್ತಿ”: ಹರೀಶ್ ಪೂಜಾರಿ ಬೋಳ (ಗರಡಿ ಅರ್ಚಕರು), ಶ್ರೀಧರ್ ಕುಲಾಲ್ ಕುತ್ಯಾರು (ನಿವೃತ್ತ ಯೋಧ), ಸಂಜೀವ (ದೇಜು) ಕೆದಿಂಜೆ (ದೈವಸ್ಥಾನದ ಅರ್ಚಕರು), ಸುರೇಶ್ ರಾವ್, ಕೆಮ್ಮಣ್ಣು (ಸಂಘಟಕರು), ವಾಸುದೇವ ತಂತ್ರಿ ಬೆಳ್ಮಣ್ಣು (ಪಾಕತಜ್ಞರು), ರಾಜೇಶ್ ಸೇರಿಗಾರ ನಂದಳಿಕೆ (ಸ್ಯಾಕೋಪೋನ್ ವಾದಕರು), ಶರತ್ ಶೆಟ್ಟಿ ಕಿನ್ನಿಗೋಳಿ (ರಂಗಭೂಮಿ ಕಲಾವಿದರು), ಪ್ರತಿಮಾ ಅನಿಲ್ ನಂದಳಿಕೆ (ಎಸ್.ಎಲ್.ಆರ್.ಎಂ. ಮೇಲ್ವೀಚಾರಕರು), ರಾಜು ಶೆಟ್ಟಿ ನಂದಳಿಕೆ (ಕೃಷಿ), ಸುಂದರ ಪೂಜಾರಿ ಬೋಳ (ಮೂರ್ತೆದಾರರು), ಹರಿಪ್ರಸಾದ್ ನಂದಳಿಕೆ (ಪ್ರತಕರ್ತರು), ಪುಂಡಲೀಕ ಮರಾಠೆ ಬಂಟಕಲ್ಲು (ಶಿಕ್ಷಣ), ಉದಯ್ ಮುಂಡ್ಕೂರು (ಛಾಯಾಗ್ರಾಹಕರು), ಹರೀಶ್ ಸಚ್ಚೇರಿಪೇಟೆ (ಟಿವಿ ವರದಿಗಾರರು), ಕೃತಿ ಆರ್. ಸನಿಲ್ ಉಡುಪಿ (ನೃತ್ಯ)