ದೇಶದ ಸಾಮಾನ್ಯ ನಾಗರೀಕನಿಗೂ ಉತ್ತಮವಾದ ಆರೋಗ್ಯ ಚಿಕಿತ್ಸೆಯನ್ನು ಒದಗಿಸುವುದು ಅತ್ಯಂತ ಪ್ರಮುಖವಾದ ಕಾರ್ಯ: ಗೋವಿಂದಸ್ವಾಮಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ದೇಶದ ಸಾಮಾನ್ಯ ನಾಗರೀಕನಿಗೂ ಉತ್ತಮವಾದ ಆರೋಗ್ಯ ಚಿಕಿತ್ಸೆಯನ್ನು ಒದಗಿಸುವುದು ಅತ್ಯಂತ ಪ್ರಮುಖವಾದ ಕಾರ್ಯ: ಗೋವಿಂದಸ್ವಾಮಿ 

 

 

ಯಲ್ದೂರು, ಮಾ-06 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದೇಶದ ಸಾಮಾನ್ಯ ನಾಗರೀಕನಿಗೂ ಉತ್ತಮವಾದ ಆರೋಗ್ಯ ಚಿಕಿತ್ಸೆಯನ್ನು ಒದಗಿಸುವುದು ಅತ್ಯಂತ ಪ್ರಮುಖವಾದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ನೀರಿನ ವ್ಯವಸ್ಥೆ, ಮೀನು ಸಾಕಾಣಿಕ ತೊಟ್ಟಿ, ಹೊಗಳಗೆರೆ ಗ್ರಾಮದಿಂದ ಆಸ್ಪತ್ರೆಯವರೆಗೂ ವಿದ್ಯುತ್ ದೀಪಗಳ ಅಳವಡಿಕೆ, ಅಗತ್ಯವಿರುವ ಸಿಬ್ಬಂಧಿ ನೇಮಕಾತಿಗೆ ತಮ್ಮ ಜಿಲ್ಲಾ ಪಂಚಾಯ್ತಿ ಅನುದಾನದಿಂದ ಒದಗಿಸುವುದಾಗಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಗೋವಿಂದಸ್ವಾಮಿ ತಿಳಿಸಿದರು.
ಅವರು ಇಂದು ಯಲ್ದೂರು ಹೋಬಳಿ, ಹೊಗಳಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಈಗಿನ ಭಯಾನಕ ಕೊರೋನಾ ವೈರಸ್‍ನಂತಹ ಕಾಯಿಲೆಗಳ ಭೀತಿಯಲ್ಲಿ ಬಡವರು ಬಗ್ಗರು ಎನ್ನದೇ ಎಲ್ಲಾ ರೀತಿಯ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದು, ಆಸ್ಪತ್ರೆ ಸಿಬ್ಬಂಧಿ ಅವರಿಗೆ ಸೂಕ್ತವಾಗಿ ಸ್ಪಂಧಿಸಿ ಚಿಕಿತ್ಸೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬೇಕಾಗಿರುವ ಎಲ್ಲಾ ರೀತಿಯ ವೈದ್ಯಕೀಯ ಉಪಕರಣಗಳ ಸೌಲಭ್ಯ, ಧ್ವಜಸ್ತಂಭ ಕಟ್ಟೆಯ ನಿರ್ಮಾಣ, ನೆಲಹಾಸಿಗೆ ಗ್ರಾನೈಟ್ ಅಳವಡಿಕೆ ಮುಂತಾದವುಗಳನ್ನು ಒದಗಿಸಿ ಸರ್ಕಾರಿ ಆಸ್ಪತ್ರೆಯು ಯಾವುದೇ ಖಾಸಗೀ ಆಸ್ಪತ್ರೆಗೆ ಕಡಿಮೆಇಲ್ಲದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಆದ್ದರಿಂದ ನಾಗರೀಕರು ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ರಮಾವತಿ, ಪಿ.ಡಿ.ಒ. ಚಿನ್ನಪ್ಪ, ಎಸ್.ಡಿ.ಎ. ಶ್ರೀನಿವಾಸ್, ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಪ್ಪ, ವೈದ್ಯಾಧಿಕಾರಿ ಡಾ|| ಶಾಲಿನಿ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ವೆಂಕಟಸ್ವಾಮಿ, ಆಸ್ಪತ್ರೆಯ ಸಿಬ್ಬಂಧಿ ರವೀಂದ್ರಬಾಬು, ನವೀನ್‍ಕುಮಾರ್, ಪಾರ್ವತಮ್ಮ, ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.