ದೇಶದ ಭದ್ರತೆ ಮತ್ತು ಭವಿಷ್ಯವು ಯುವ ಸಮುದಾಯದ ಮೇಲೆ ಅವಲಂಬಿತವಾಗಿದೆ – ಲೋಕೇಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ  : ಭದ್ರತೆ ಮತ್ತು ಭವಿಷ್ಯವು ಯುವ ಸಮುದಾಯದ ಮೇಲೆ ಆವಲಂಬಿತವಾಗಿದ್ದು, ಇಂತಹ ಯುವ ಸಮುದಾಯ ಸದೃಢವಾಗಲು ಮನಸ್ಸು ಮತ್ತು ದೇಹದ ದೃಢತೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಲಿಷ್ಟ ಭಾರತ ನಿರ್ಮಿಸಲು ಶ್ರಮಿಸಬೇಕಾಗಿದೆ ಎಂದು ಶ್ರೀನಿವಾಸಸಂದ್ರ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ ಲೋಕೇಶ್ ಅವರು ಅಭಿಪ್ರಾಯ ಪಟ್ಟರು.ಇಂದು ಕೆ.ಜಿ.ಎಫ್ ತಾಲ್ಲೂಕಿನ ಕರಡಗೂರಿನಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಕೋಲಾರ, ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ಜನ ವಿಕಾಸ ಯುವಜನ ಸೇವಾ ಸಂಸ್ಥೆ, ಕೋಲಾರ ಹಾಗೂ ಸೂರ್ಯೋದಯ ಯುವಕರ ಸಂಘ ಕರಡಗೂರು, ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಸಧೃಡ ಭಾರತಕ್ಕಾಗಿ ಬೈಸಿಕಲ್ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ನೀಡಿ ಅವರು ಮಾತನಾಡಿದರು. ಭವ್ಯ ಭಾರತ ಕನಸು ನನಸಗಾಲು ನಾವು ಪಣತೊಡಬೇಕು. ದೇಶದ ಸಮಗ್ರತೆ ಐಕ್ಯತೆಗೆ ಒಂದಾಗಿ ದುಡಿಯಬೇಕು ಎಂದರು.ಸುರ್ಯೋದಯ ಯುವಕರ ಸಂಘದ ಅಧ್ಯಕ್ಷ ಗಜೇಂದ್ರ ಅವರು ಮಾತನಾಡಿ ದೇಶದ ಎಲ್ಲೆಡೆ ಸ್ವಚ್ಚ ಭಾರತದಂತೆ ಫಿಟ್ ಇಂಡಿಯಾ ಕಾರ್ಯಕ್ರಮ ನಡೆಯುತ್ತಿದ್ದು, ಯುವ ಜನರು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಮನೆಮನೆಯಲ್ಲಿ ಜಾಗೃತಿ ಮೂಡಿಸಿ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರಬೇಕೆಂದರು.ರಾಷ್ಟ್ರದ ಬೆಳವಣಿಗೆಗೆ ಯುವ ಪೀಳಿಗೆ ಮುಂದಾಗಬೇಕು. ರಾಷ್ಟ್ರ ಕಟ್ಟುವಂತಹ ನಿಲುವಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಮುಂದೆ ಬರಬೇಕು. ಪ್ರತಿಯೊಂದು ಹಂತಹಂತದಲ್ಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರ ನಿರ್ಮಾಣ ಪ್ರೇಮಿಗಳಾಗಬೇಕೆಂದು ತಿಳಿಸಿದರು.ನೆಹರು ಯುವಕೇಂದ್ರದ ಎಸ್ ಪ್ರವೀಣ್‍ಕುಮಾರ್ ಮಾತನಾಡಿ ಭಾರತೀಯರು ದೈಹಿಕ ಚಟುವಟಿಕೆಗಳಲ್ಲಿ ದೂರ ಉಳಿಯುತ್ತಿದ್ದಾರೆ. ಶೇ54% ರಷ್ಟು ಭಾರತೀಯರು ದೈಹಿಕವಾಗಿ ಆಲಸಿಗಳಾಗಿದ್ದಾರೆ. ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಆದ್ದರಿಂದ ಜನರು ತಮ್ಮ ದೈನಂದಿನ ಬದುಕಿನಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಗಳನ್ನು ತೊಡಗಿಸಿಕೊಳ್ಳಲು ಉತ್ತೇಜಿಸುವ ಗುರಿಯೊಂದಿಗೆ ಆರಂಭವಾಗಿರುವ ಅಭಿಯಾನ ಇದಾಗಿದೆ ಎಂದರು. ಯುವಜನತೆ ಸ್ವಾಮಿ ವಿವೇಕಾನಂದರು ನೀಡಿದ ತತ್ವ ಆರ್ದಶಗಳು ಪಾಲಿಸಿ ಪ್ರಾಮಾಣಿಕ ಚಿಂತನೆ ಮಾಡಬೇಕಿದೆ. ಜಿಲ್ಲೆಯಲ್ಲಿ ಕೋರೋನಾ ಹೆಚ್ಚಾಗುತ್ತಿದ್ದು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೆ ಸದ್ಯದ ಲಸಿಕೆಯಾಗಿದೆ. ಪೌಷ್ಟಿಕ ಆಹಾರ ಸೇವೆನೆಯಿಂದ ಮತ್ತು ದೈಹಿಕ ವ್ಯಾಯಾಮದಿಂದ ರೋಗಗಳಿಂದ ದೂರವಿರಬಹುದಾಗಿದೆ ಎಂದರು.