ಎಲ್ಲಾ ಕ್ಷೇತ್ರಗಳಲ್ಲಿ ಜಾತಿ ಆದಾರವಾಗುತ್ತಿದೆ ಆದರೆ ಇಡೀ ದೇಶಕ್ಕೆ ಅನ್ನ ನೀಡುವ ಕೃಷಿ ಕೂಲಿ ಕಾರ್ಮಿಕರಲ್ಲಿ ಇಲ್ಲದ ಜಾತಿ

ವರದಿ ; ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಎಲ್ಲಾ ಕ್ಷೇತ್ರಗಳಲ್ಲಿ ಜಾತಿ ಆದಾರವಾಗುತ್ತಿದೆ ಆದರೆ ಇಡೀ ದೇಶಕ್ಕೆ ಅನ್ನ ನೀಡುವ ಕೃಷಿ ಕೂಲಿ ಕಾರ್ಮಿಕರಲ್ಲಿ ಇಲ್ಲದ ಜಾತಿ ಇಂದು ವಿದ್ಯಾವಂತರಿಂದಲೇ ಜಾತಿ ಸೃಷ್ಟಿಯಾ ಗುತ್ತಿದೆಯೆಂದರೆ ಇನ್ನು ದೇಶವನ್ನು ಜಾತ್ಯಾತೀತವಾಗಿ ಕಟ್ಟಲು ಹೇಗೆ ಸಾದ್ಯವೆಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್ ಗಣೇಶ್ರವರು ಅಭಿಪ್ರಾಯಿಸಿದರು . ಶ್ರೀನಿವಾಸಪುರ ತಾಲೂಕಿನ ರೋಣೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ಕೋಲಾರ , ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಏರ್ಪಡಿ ಸಿದ್ದ 3 ದಿನಗಳ ಜಿಲ್ಲಾ ಮಟ್ಟದ ಪುನಃಶ್ವೇತನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂದೀಜಿ ರವರ ತತ್ವ ಮತ್ತು ಕಾರ್ಯಕ್ರಮಗಳ ತಳಹದಿಯ ಮೇಲೆ ಯುವಕರನ್ನು ಸಂಘಟಿಸಿ ರಾಷ್ಟ್ರೀಯ ಸೇವೆಗಾಗಿ ತರಬೇತಿಯನ್ನು ನೀಡುವುದು ಸೇರಿದಂತೆ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳಲ್ಲಿ ರಾಷ್ಟ್ರಪ್ರೇಮ , ರಾಷ್ಟಧ್ವಜ , ರಾಷ್ಟ್ರಗೀತೆ , ತ್ಯಾಗ , ಸರಳತೆ , ಸೇವೆ , ತಾಳ್ಮೆ , ಸಹಕಾರ ಮತ್ತು ಪೂರ್ಣ ಸೇವಾ ಮನೋಭಾವ ‘ ನೆಯನ್ನು ಮೂಡಿಸುವುದು ಭಾರತ ಸೇವಾದಳದ ಉದ್ದೇಶವಾಗಿದೆ ಎಂದರು . ಹಾಗೆಯೇ ಶಿಕ್ಷಣದ ಮೂಲಕ ಜನರ ಆರೋಗ್ಯ , ಶಾರಿರಕ ದೃಡತೆಯನ್ನು ಬಲಗೊಳಿಸ ವುದು , ಜಾತಿ , ವರ್ಣೀಯ ಭಾವನೆಗಳನ್ನು ತ್ಯಜಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸಿ ರಾಷ್ಟ್ರೀಯತೆಯನ್ನು ಹೆಚ್ಚಿಸುವುದು , ಆಪತ್ಕಾಲದಲ್ಲಿ ನೆರವು ನೀಡುವಂತಹ ಕೆಲಸಗಳನ್ನು ಸೇವಾದಳ ಮಾಡಿಕೊಂಡು ಬರುತ್ತಿದೆ ಎಂದರು .
ಇಡೀ ಭಾರತದಲ್ಲಿ ಸೇವಾ ಭಾವನೆಯಲ್ಲಿ , ರಾಷ್ಟ್ರಪ್ರೇಮದ ಬಗ್ಗೆ ಕೆಲಸ ಮಾಡುತ್ತಿರುವುದು ಎಂದರೆ ಅದು ಏಕೈಕ ಭಾರತ ಸೇವಾದಳ ಎಂದರು . ಶಿಕ್ಷಕರು ಇಲ್ಲಿ 120 ಮಂದಿ ನೋಂದಣಿ ಮಾಡಿಕೊ೦ಡಿದ್ದು ಇದರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಇಂದು ಶಿಬಿರದಲ್ಲಿ ಶೇ 40 ಕ್ಕಿಂತ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದರು . ತರಬೇತಿಯಲ್ಲಿ ನೀಡುವ ಸಂಪನ್ಮೂಲವನ್ನು ದೇಶದ ಇತಿಹಾಸ ದೇಶ ಪ್ರೇಮ ಮಾಹಿತಿಯನ್ನು ಪಡೆದು ಶಿಕ್ಷಕರು ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಇದನ್ನು ತಲುಪಿಸಿ ಅವರನ್ನು ದೇಶ ಪ್ರೇಮದ ಕಡೆ ನಡೆಸಿದಾಗ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು .
ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ರೋಣೂರು ಚಂದ್ರಶೇಖ ರ್ ರವರು ಮಾತನಾಡಿ ನಮ್ಮ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಸೇವಾದಳ ಕಾರ್ಯಕ್ರಮ ಹಮಿ ಕೊಂಡಿರುವುದು ಶ್ಲಾಘನೀಯವೆ೦ದರು . ಶಿಕ್ಷಕರಲ್ಲಿ , ಯವಕರಲ್ಲಿ ಮಕ್ಕಳಲ್ಲಿ ಸಮಗ್ರ ದೇಶ ಪ್ರೇಮವನ್ನು , ತ್ಯಾಗವನ್ನು ತುಂಬುವಂತಹ ಸೇವಾದಳದ ಕೆಲಸ ಮೆಚ್ಚುವಂತಾಗಿದೆ ಎಂದರು . ತಾಲೂಕು ಅಧ್ಯಕ್ಷ ಬಂಗವಾದಿ ಎಂ.ನಾಗರಾಜ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತ ಸೇವಾದಳದಲ್ಲಿ ಶ್ರೀನಿವಾಸಪುರ ತಾಲೂಕು ಮುಂಚೂಣಿಯಲ್ಲಿದೆ ಎಂದರು . ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ ಬಹು ಕಷ್ಟದ ಸಮಯದಲ್ಲಿ ಸಹ ಶ್ರೀನಿವಾಸಪುರದಲ್ಲಿ 110 ಮಂದಿಗೆ ತರಬೇತಿ ನೀಡಲಾಗಿತ್ತು ದೇಶಭಕ್ತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊ ಂಡು ನಿರಂತರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು .
ಈ ಸಂದರ್ಭದಲ್ಲಿ ಭಾರತ ಸೇವಾದಳ ಜಿ.ಸ.ಸದಸ್ಯ ಬೈರೇ ಗೌಡ , ಪ್ರಾಶಿ.ಸಂ.ಕಾರ್ಯದರ್ಶಿ ಸಿ.ವಿ. ಶಿವಣ್ಣ , ಸ.ನೌ.ಸಂ ಕಾ . ತಿಪ್ಪಣ್ಣ , ಕೋಶಾಧ್ಯಕ್ಷ ಆರ್.ರವಿಕುಮಾರ್‌ , ಟಿಪಿಓ ನಾರಾಯಣಸಾ ಮಿ , ತಾ , ಕಾರ್ಯದರ್ಶಿ ಎಸ್.ಎ ನ್ . ನಂದಿನಿ , ಖಜಾಂಚಿ ಜಿ.ವಿ.ಶ್ರೀನಿವಾಸ್ , ರಘುನಾಥರೆಡ್ಡಿ ಅಪೂರ್ ಮಂಜುನಾಥ್ , ಜ್ಞಾನೇಶ್‌ , ಮುಳಬಾಗಿಲು ನಾರಾಯಣಸ್ವಾಮಿ , ಹೆಚ್.ವಿ.ಅಶೋಕ್ ಇತರರು ಹಾಜರಿದ್ದರು .