JANANUDI.COM NETWORK
ಕುಂದಾಪುರ: ನ.೨೮ ತಲ್ಲೂ ರಿನ ’ತಲ್ಲೂ ರು ಫ್ಯಾ ಮಿಲಿ ಟ್ರ ಸ್ಟ್ (ರಿ) ಸ್ಥಾ ಪಿಸಿರುವ ಹಿಗ್ಗು- ಅರಿವಿನಮಾಲೆ” ಪುಸ್ತಜ ದತ್ತಿಯ ಚೊಚ್ಚಲ ಗ್ರಾಂಟನ್ನು ಹಿರಿಯ ವ್ಯಂಗ್ಯ ಚಿತ್ರಕಾರ ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ “ಕುಂದಾಪ್ರ ಕನ್ನಡ ನಿಘಂಟು” ಬೃಹತ್ ಕುಂದಾಪ್ರ ಕನ್ನಡದ ಪದಕೋಶಕ್ಕೆ ನೀಡಲು ತ್ತೀರ್ಮಾನಿಸಲಾಗಿದೆ ಎಂದು ಟ್ರಸ್ಟಿನ ಆಡಳಿತ ಟ್ರ ಸ್ಟಿ ಸುರೇಶ ತಲ್ಲೂ ರು ತಿಳಿಸಿದ್ದಾರೆ.
ಕರಾವಳಿಯ ನೆಲ, ಜಲ, ಪರಿಸರ ಮತ್ತತ ಬದುಕನ್ನು ಆರೋಗ್ಯ ಪೂಣಾವಾದ ಮನಸುಗಳೊಂದಿಗೆ ಕಟ್ಟಿ ತಲ್ಲೂ ರು ಫ್ಯಾ ಮಿಲಿ ಟ್ರ ಸ್ಟ್ ನ ಪುಟ್ಟ ಪುಟ್ಟ ಹೆಜ್ಜೆಯ ಗುರುತು ಗಳ ಸರಣಿಯೇ “ಕರಾವಳಿ ಕಟ್ಟು ” ಈ ಚಳುವಳಿಯ ಭಾಗವಾಗಿ, ಈಗಾಗಲೇ “ತಲ್ಲೂ ರು ನುಡಿಮಾಲೆ” ದತ್ತಿ ನಿಧಿ ಉಪನ್ಯಾಸಗಳು ನಡೆದಿವೆ ಮತ್ತು ಕೊರೊನಾ ಸಮಯದಲ್ಲೂ ರಚಿಷಲಾಗಿರುವ ವೀಡಿಯೊ ಸರಣಿಗಳು ಚಾಲ್ತಿಯಲ್ಲಿವೆ. ಈ ಚಳುವಳಿಯ ಮಾಂದುವರಿದ ಭಾಗವಾಗಿ “ಹಿಗ್ಗು- ಅರಿವಿನ ಮಾಲೆ” ಯೋಜನೆಯನ್ನೂ ರೂಪಿಸಲಾಗಿದೆ. ಎರಡು ಲಕ್ಷ ರೂ.ಗಳ ಈ ಪುಸ್ತಕ ಪ್ರಕಟಣೆಯ ದತ್ತಿಯನ್ನು ಕರಾವಳಿಯ ಅನನ್ಯ ಅಪರೂಪದ ಮೌಲಿಕವಾದ ಪುಸ್ತಕಗಳ ಪ್ರಕಟಣೆಗಾಗಿ ಮೀಸಲಿರಿಸಲು ತಲ್ಲೂ ರು ಫ್ಯಾ ಮಿಲಿ ಟ್ರ ಸ್ಟ್ (ರಿ.) ನಿಧಾರಿಸಿದ್ದು ಕಾಲಕಾಲಕ್ಕೆ ಮಹತ್ವದ, ಆಂದರೆ ಪ್ರಕಟಣೆಯ ಬೆಳಕನ್ನು ಕಾಣಲು ಸಾಧ್ಯವಾಗದ ಅರ್ಹ ಪುಸ್ತಕ ಕಗಳನ್ನು ಬೆಳಕಿಗೆ ತರಲು ಈ ಗ್ರಾಂಟನ್ನು ವಿನಿಯೋಗಿಸಲಾಗುತ್ತದೆ’ ಕುಂದಾಪುರದಲ್ಲಿ ಶುಕ್ರರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.
ವ್ರತ್ತಿಪರ ವ್ಯಂಗ್ಯ ಚಿತ್ರಕಾರಾರಾದ ಪಂಜು ಗಂಗೊಳ್ಳಿ ಅವರು ಎರಡು ದಶಕಗಳ ಕಾಲ ಶ್ರಮಿಸಿ, ಸಂಗ್ರಹಿಸಿ, ಸಂಪಾದಿಸಿದ “ಕುಂದಾಪುರರ ಕನ್ನಡ ನಿಘಂಟು” ಸುಮಾರು 10,000ಕ್ಕೆ ಮಿಕ್ಕಿ, ಕುಂದಾಪುರ ಕನ್ನಡ ಪದಗಳ ಮತ್ತು 1700 ರಷ್ಟು ಕುಂದಾಪುರ ಕನ್ನಡದ ನುಡಿ ಗಟ್ಟುಗಳ ಅರ್ಥವಿವರಣೆ ನೀಡುವ. ಜೊತೆಗೆ, ಕುಂದಾಪುರ ಕನ್ನಡದ ರೀತಿ, ರಿವಾಜು, ಕಟ್ಟುಪಾಡು, ಆಚಾರ ವಿಚಾರಗಳನ್ನು ಒಳಗೊಂಡಿರುವ ಒಂದು ವಿಶಿಷ್ಠ ಸಾಂಸ್ಕ್ರತಿಕ ಕೋಶವಾಗಿದ್ದು, ವಿಶ್ವವಿಧ್ಯಾನಿಲಯ ಮಾಡಬೇಕಾದ ಮಹತ್ವದ ಕೆಲಸವನ್ನು ಮಾಡಿರುವ ಪಂಜು ಗಂಗೊಳ್ಳಿ ಅವರನ್ನು ಅಭಿನಂದಿಸಿರುವ ಟ್ರಸ್ಟ್, ಸುಮಾರು ೭೦೦ ಪುಟಗಳ ಈ ಶಬ್ದಕೋಶವನ್ನು ಕರಾವಳಿ ಕಟ್ಟುವ ಮಹತ್ವದ ಕೆಲಸದಲ್ಲಿ ದಾಖಲೀಕರಣದ ಹೆಜ್ಜೆ ಎಂದು ಸುರೇಶ ತಲ್ಲೂರು’ ಹೇಳಿದ್ದಾರೆ.
ಉಡುಪಿಯ ಪ್ರೊಡಿಜಿ ಮುದ್ರಣ ಸಂಸ್ಥೆಯ ಪ್ರೊಡಿಜಿ ಪ್ರಕಾಶನದಿಂದ ಪ್ರಕಟಗೊಳ್ಳಲಿರುವ ಈ ನಿಘಂಟು, ಮುಂದಿನ ವರ್ಷದ ಆದಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆಯೆಂದು ಟ್ರಸ್ಟಿಗಳು ತಿಳಿಸಿದ್ದಾರೆ.
ಪಂಜು ಗಂಗೊಳ್ಳಿ ವೃತ್ತಿಪರ ಕಾರ್ಟೂನಿಸ್ಟ್ ಆಗಿ ಮಾಂಬಯಲ್ಲಿ ನೆಲೆಸಿರುವ ಅವರ ಹುಟ್ಟುರೂ ಕುಂದಾಪುರದ ಗಂಗೊಳ್ಳಿ . ಭಂಡಾಕಾರ್ಸ್ ಕಾಲೇಜಿನಲ್ಲಿ ಬಿಎಸ್ಸಿ ಮಾಡಿ, ಮಾಂಗಾರು ದಿನ ಪತ್ರಿಕೆಯಲ್ಲಿ ಕಾರ್ಟೂನಿಷ್ಟ್ ಆಗಿ ಕಾಲಿಟ್ಟವರು, ’ಲಂಕೇಶ್ ಪತ್ರಿಕೆಯಲ್ಲಿ ಕೆಲವು ವರ್ಷಗಳ ಕಾಲ ಕಾರ್ಟೂನಿಸ್ಟ್ ಆಗಿದ್ದರು. ಬಳಿಕ ಪ್ರೀತಿಶ್ ನಂದಿ ಸಂಪಾದಕತ್ವದ ’ದಿ ಸಂಡೇ ಆಬ್ಸರ್ವರ್’’ ಪತ್ರಿಕೆಯ ಮೂಲಕ ಇಂಗ್ಲಿಷ್ ಪತ್ರಿಕೆಗಳುಗೆ ಕಾಲಿಟ್ಟ ಅವರು,. ಕಳೆದ ೨೦ ವರ್ಷಗಳಿಂದ ’ಬ್ಯುಸಿನೆಸ್ಟ ಇಂಡಿಯಾ’ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ದುಡಿಯುತಿದ್ದಾರೆ
ಪಂಜು ಗಂಗೊಳ್ಳಿ ಯವರಿಗೆ ಆನುವಂಶಕವಾಗಿ ಬಂದ ಚಿತ್ರ ಕಲೆ ವೃತ್ತಿಯಾದರೆ, ಬರವಣಿಗೆ ಪ್ರವ್ರತ್ತಿ ’ಮೂಢ ನಂಬಿಕೆಗಳ ’ವಿಶ್ವರೂಪ’ ’ರುಜು’ ಇವರ ಪ್ರಕಟಿತ ಕೃತಿಗಳು. ಸ್ನೇಹಿತರನ್ನು ಒಗ್ಗು ಡಿಸಿಕಾಂಡು ಕಳೆದ 20 ವರ್ಷಗಳಿಂದ ರಚಿಸುತ್ತಾ ಬಂದಿರುವ ಕುಂದಾಪುರ ಕನ್ನಡ ನಿಘಂಟು ಈಗ ಬಿಡುಗಡೆಗೆ ಸಿದ್ದವಾಗಿದ್ದು, ”ಕುಂದಾಪುರ ಕನ್ನಡ ಹಾಡುಗಳು’ ತಯಾರಿಯ ಹಂತದಲ್ಲಿ ಇದೆಯೆಂದು. ಗೋಷ್ಠಿಯಲ್ಲಿ ತಿಳಿಸಲಾಯಿತು.
ಪತ್ರಿಕಾ ಗೋಷ್ಠಿಯಲ್ಲಿ ತಲ್ಲೂರು ಪ್ಯಾಮಿಲಿ ಟ್ರಸ್ಟನ ಮೇನೆಜಿಂಗ್ ಟ್ರಸ್ಟಿಗಳಾದ ರಾಜರಾಮ್ ತಲ್ಲೂರು,ಸದಾನಂದ ತಲ್ಲೂರು,ವಸಂತ ತಲ್ಲೂರು ಮತ್ತು ತಲ್ಲೂರು ಪ್ಯಾಮಿಲಿ ಟ್ರಸ್ಟನ ಆಡಳಿತಾಧಿಕಾರಿ ಚಂದ್ರಶೇಖರ ತಲ್ಲೂರ್ ಉಪಸ್ಥಿತರಿದ್ದರು.