ತಲ್ಲೂರು ನಾರಯಣ ವಿಶೇಷ ಮಕ್ಕಳ ಶಾಲೆಗೆ ಗ್ಲೊಬಲ್ ಗ್ರ್ಯಾಂಟ್‍ನಿಂದ ಶಾಲಾ ವಾಹನ ಕಂಪ್ಯೂಟರ್ ಮತ್ತು ಕಲಿಕಾ ಸಾಮಾಗ್ರಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಹಸ್ತಾಂತರ

JANANUDI.COM NETWORK

 

 

ತಲ್ಲೂರು ನಾರಯಣ ವಿಶೇಷ ಮಕ್ಕಳ ಶಾಲೆಗೆ
ಗ್ಲೊಬಲ್ ಗ್ರ್ಯಾಂಟ್‍ನಿಂದ ಶಾಲಾ ವಾಹನ ಕಂಪ್ಯೂಟರ್ ಮತ್ತು ಕಲಿಕಾ ಸಾಮಾಗ್ರಿ
ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಹಸ್ತಾಂತರ

 

ಕುಂದಾಪುರ, ಮಾ17: ರೋಟರಿ ಕ್ಲಬ್ ಕುಂದಾಪುರ ದಕ್ಷಿಣ 3182 ಮತ್ತು ರೋಟರಿ ಕ್ಲಬ್ ಶೆರೇರ್ ವಿಲ್ಲಿ 6540 ಇವರ ಸಹಭಾಗಿತ್ವದಲ್ಲಿ ರೋಟರಿ ದತ್ತಿ ನಿಧಿ ತಲ್ಲೂರಿನ ವಿಶೇಷ ಮಕ್ಕಳ ಶಾಲೆಗೆ ರೋಟರಿ ಗ್ಲೊಬಲ್ ಗ್ರ್ಯಾಂಟ್ 1989053 ಇದರ ಅಡಿಯಲ್ಲಿ ಮಂಜುರಾದ ಶಾಲಾ ವಾಹನ ಬಸ್ಸ್ ಮತ್ತು ಕಂಪ್ಯುಟರ್ ಮತ್ತು ಶಾಲಾ ಕಲಿಕಾ ಸಾಮಾಗ್ರಿಗಳನ್ನು ತಲ್ಲೂರು ವೀಶೆಷ ಮಕ್ಕಳ ಶಾಲೆಗೆ ಶಾಲಾ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ (15-3-20) ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಪಿಡಿಜಿ ರೋಟರಿ ಕ್ಲಬ್ ಶೆರೇರ್ ವಿಲ್ಲೆ ಅಮೇರಿಕಾ, ರಂಜನ್ ಕಿಣಿ ಪತ್ನಿ ಸಮೇತವಾಗಿ ಆಗಮಿಸಿದ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ‘ರೋಟರಿ ಗ್ಲೊಬಲ್ ಗ್ರ್ಯಾಂಟ್ ಪ್ರಾಜೆಕ್ಟಗಳನ್ನು ಮಾಡುವುದರ ಮೂಲಕ ದೇಶ ದೇಶಗಳ ನಡುವೆ ಹಾಗೇಯೆ ಮನುಷ್ಯ –ಮನುಷ್ಯ ನಡುವೆ ಸಂಬಂಧ ಬೆಸೆಯುವ ಕಾರ್ಯ ನಡೆಯುತ್ತದೆ. ವಸುದೈವ ಕುಟುಂಬ ಎಂಬ ಪರಿಕಲ್ಪನೆ ಸಾಕಾರವಾಗಲು ಈ ಗ್ರ್ಯಾಂಟ್ ಗಳು ಸಹಕಾರಿಯಾಗುತ್ತವೆ. ಅದಲ್ಲದೆ ಸಂಬಂಧ ವ್ರದ್ದಿಯಾಗಿ ಶಾಂತಿ ನೆಲೆಸಲು ಸಾಧ್ಯ, ಅಲ್ಲದೆ ಸಾಮಾಜಿಕ ಕಳಕಳಿಯಿಂದ ಸಮಾಜದಲ್ಲಿ ಅಗತ್ಯವಿರುವರಿಗೆ ನೀಡುವ ಸಹಾಯ ಆತ್ಮ ತ್ರಪ್ತಿಯನ್ನು ನೀಡುತ್ತದೆ. ಮಾನವ ಜೀವನದ ನಿಜವಾದ ಅರ್ಥ ತಿಳಿಯುವಲ್ಲಿ ನಾವು ಸಫಲರಾಗುತ್ತೇವೆ, ಇಂತಹ ಅನೇಕ ಕಾರ್ಯಕ್ರಮಗಳು ರೋಟರಿ ಕುಂದಾಪುರ ದಕ್ಷಿಣದಿಂದ ನಡೆಸುವಂತಾಗಲಿ’ ಎಂದು ಅವರು ಹಾರೈಸಿದರು’
. ರೊ. ಐಡಿಪಿಜಿ ಅಭಿನಂದನ್ ಶೆಟ್ಟಿ ಮಾತಾಡಿ “ಇಂತಹ ಹಲವಾರು ಯೋಜನೆಗಳು, ಕೊಡುಗೆಗಳು ನಾವು ರೋಟರಿ ಗ್ಲೊಬಲ್ ಗ್ರ್ಯಾಂಟ್ ದತ್ತಿನಿಧಿಯ ಸಹಕಾರದಿಂದ ಮಾಡಿದ್ದೆವೆ. ಅದಕ್ಕಾಗಿ ಬಹಳ ಮುತುವರ್ಜಿ ವಹಿಸಿ ಯೋಜನೆಯ ತಯಾರಿ ಮಾಡ ಬೇಕಗುತ್ತದೆ ಈ ಯೋಜನೆಯ ತಯಾರಿಯನ್ನು ರೋ| ಜಿ. ಶ್ರೀಧರ್ ಶೆಟ್ಟಿ ಚೆನ್ನಾಗಿ ಮಾಡಿದ್ದಾರೆ’ ಎಂದು ತಿಳಿಸಿದರು. ಪಿಡಿಜಿ ರೊ| ಸದಾನಂದ ಛಾತ್ರ ‘ಈ ಥರಹದ ಹಲವು ಯೋಜನೆಗಳನ್ನು ತಯಾರಿಸಿ ಗ್ಲೊಬಲ್ ಗ್ರ್ಯಾಂಟ್ ಮುಖಾಂತರ ಕೊಡುಗೆಗಳನ್ನು ನೀಡಲು ಶ್ರಮಿಸಿದ್ದೆವೆ, ಆದರೆ ಈ ವಿಶೇಷ ಮಕ್ಕಳಿಗೆ ಸಿಗಬೇಕಾದಂತದ ಕೊಡುಗೆಯ ಯೋಜನೆ ಬಹಳ ವೀಶೆಷ ಹಾಗೂ ಉತ್ತಮ ಕೊಡುಗೆಯಾಗಿದೆ, ಎಂದರು. ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ ಮಾತಾಡಿ ‘ಇಂತಹ ಕಾರ್ಯಕ್ರಮಗಳನ್ನು ಮಾಡಲು ಹೆಮ್ಮೆಯಾಗುತ್ತದೆ, ಮತ್ತು ಇಂತ ಯೋಜನೆಗಳಿಂದ ರೋಟರಿ ಸಂಸ್ಥೆಗೆ ಹಿರಿಮೆ ಸಲ್ಲುತ್ತದೆ’ ಎಂದರು. ತಲ್ಲೂರು ರೋಟರಿ ಅಧ್ಯಕ್ಷ ರೊ| ಸದಾನಂದ ಆಚಾರ್ ಶುಭ ಹಾರೈಸಿದರು.
ಅದ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷರಾದ ರೊ|ದೇವರಾಜ್ ಕೆ. ಮಾತಾಡಿ ‘ಇಂತಹ ಒಂದು ಕೊಡುಗೆ ಗ್ಲೊಬಲ್ ಗ್ರ್ಯಾಂಟ್ ವತಿಯಿಂದ ನನ್ನ ಕಾಲದಲ್ಲಿ ಸಾಕರಗೊಂಡಿದ್ದಕ್ಕೆ, ತುಂಬ ಸಂತೋಷವಾಗುತ್ತದೆ, ಈ ಶಾಲೆಗೂ ನಮಗೂ ಒಂದು ಕುಟುಂಬದ ಸಂಬಂಧವಿದ್ದಂತ್ತೆ, ಎಲ್ಲಾ ಕಾರ್ಯಕ್ರಮಗಳಿಗೆ ನಮಗೆ ಆತ್ಮೀಯವಾಗಿ ಕರೆಯುತ್ತಾರೆ’ ಎಂದು ತಿಳಿಸಿದರು. ಈ ಪ್ರಾಜೆಕ್ಟನ ವರದಿ ತಯಾರಿಸಿ, ಗ್ರ್ಯಾಂಟ್ ಸಿಗಲು ಶ್ರಮಿಸಿದ ರೊ.ಜಿ, ಶ್ರೀಧರ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕೊಡುಗೆಯ ಫಲಾನುಭವಿ ತಲ್ಲೂರು ನಾರಯಣ ವಿಶೇಷ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೇಮಾ ಕೊಡುಗೆಗಾಗಿ ಕ್ರತಜ್ಞತೆಯನ್ನು ಸಲ್ಲಿಸಿದರು. ನಾರಯಣ ಶಾಲೆಯ ಟ್ರಸ್ಟಿ ಸುರೇಶ್ ತಲ್ಲೂರು ಸ್ವಾಗತಿಸಿದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಕಾರ್ಯದರ್ಶಿ ಶೋಭ ಭಟ್ ಧನ್ಯವಾದಗಳನ್ನು ಸಲ್ಲಿಸಿದರು. ರೊ| ವಾಸು ದೇವ್ ಕಾರಂತ್ ನಿರೂಪಿಸಿದರು.