ಜೀವ ಉಳಿಸಲು ಎಲ್ಲ ಅರ್ಹ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು  : ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಜೀವ ಉಳಿಸಲು ಎಲ್ಲ ಅರ್ಹ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
  ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೋತ್ಥಾನ ರಕ್ತ ನಿಧಿ ವತಿಯಿಂದ ಬುಧವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಅಗತ್ಯ ಸಂದರ್ಭಗಳಲ್ಲಿ ಬೇಕ್ತದ ಕೊರತೆ ಇದೆ. ಇದರಿಂದ ಹಲವು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ರಕ್ತದಾನ ಮಾಡುವುದರಿಂದ ಅಮೂಲ್ಯವಾದ ಜೀವ ಉಳಿಯುತ್ತದೆ ಎಂದು ಹೇಳಿದರು.
  ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್ ಮಾತನಾಡಿ, ಕೊರೊನಾ ಸೋಂಕಿನ ಭಯದಿಂದಾಗಿ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯ ಜನ ಒಲವು ತೊರಿಸುತ್ತಿಲ್ಲ. ಇದು ರಕ್ತದ ಕೊರತೆಗೆ ಕಾರಣವಾಗಿದೆ. ನಮ್ಮ ಸೈನ್ಯ ಸೇರಿದಂತೆ ದೇಶದಲ್ಲಿ ರಕ್ತದ ಕೊರತೆ ಏರ್ಪಟ್ಟಿದೆ. ರಕ್ತದ ಕೊರತೆ ನೀಗುವ ಉದ್ದೇಶದಿಂದ ರಾಷ್ಟ್ರೋತ್ಥಾನ ರಕ್ತ ನಿಧಿ ರಕ್ತ ಸಂಗ್ರಹ ಮಾಡಲು ಮುಂದಾಗಿದೆ ಎಂದು ಹೇಳಿದರು.
  ಶಿಬಿರದಲ್ಲಿ 90 ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
  ಬಿಜೆಪಿ ಮುಖಂಡರಾದ ಜಯರಾಮರೆಡ್ಡಿ, ಎಂ.ಲಕ್ಷ್ಮಣಗೌಡ, ಎ.ಅಶೋಕ್‌ ರೆಡ್ಡಿ, ನಾರಾಯಣಸ್ವಾಮಿ, ವೆಂಕಟೇಗೌಡ, ರೆಡ್ಡಪ್ಪ, ಹೊದಲಿ ನಾರಾಯಣಸ್ವಾಮಿ, ನಾಗರಾಜ್‌, ರಮೇಶ್‌, ಬಾಲಾಜಿ, ತಾಲ್ಲೂಕು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ವೈ.ಆರ್‌.ಶಿವಪ್ರಕಾಶ್‌ ಇದ್ದರು.