ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಜಿಲ್ಲಾಧಿಕಾರಿಗಳಿಂದ ಪೌಷ್ಟಿಕಾಂಶ ಪಾನೀಯ ವಿತರಣೆಗೆ ಚಾಲನೆ
ಕೋಲಾರ : ನಾವು ಕೋವಿಡ್‍ನೊಂದಿಗೆ ಜೀವನ ನಡೆಸಬೇಕಾಗಿದೆ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ ನಮ್ಮನ್ನು ನಾವು ಕಾಪಾಡಿಕೊಳ್ಳುವ ಮೂಲಕ ಆರೋಗ್ಯವಂತರಾಗಬೇಕು ಈ ದೆಸೆಯಲ್ಲಿ ಪೌಷ್ಟಿಕಾಂಶ ಪಾನೀಯ ಸೇವಿಸಿ ಸದೃಢರಾಗುವಂತೆ ಜಿಲ್ಲಾಧಿಕಾರಿಗಳಾದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಸಿ ಸತ್ಯಭಾಮ ತಿಳಿಸಿದರು.
ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಶುಕ್ರವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೋಲಾರ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ರೋಗಿಗಳು, ಕಾರ್ಮಿಕರು ಮತ್ತು ಫಲಾನುಭವಿಗಳಿಗಾಗಿ ನೀಡಲಾಗುತ್ತಿರುವ 12000 ಪೌಷ್ಟಿಕಾಂಶ ಪಾನೀಯ ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನಸಾಮಾನ್ಯರಿಂದ ಹಿಡಿದು ಪ್ರತಿಯೊಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಗತ್ಯ ಪೂರಕ ಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಆಗಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ಸರ್ಕಾರ ಆಗಿಂದಾಗೆ ನೀಡುವ ನೀತಿ ನೇಮಗಳನ್ನು ಅನುಷ್ಠಾನ ಗೊಳಿಸಲು ಸಹಕಾರ ಅಗತ್ಯ ಎಂದರು.
ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಗೋಪಾಲಕೃಷ್ಣಗೌಡ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಕೋರೊನ ಬಾರದಂತೆ ಎಚ್ಚರಿಕೆ ವಹಿಸಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಈ ದಿಸೆಯಲ್ಲಿ ಸಂಸ್ಥೆಯಿಂದ ಪೌಷ್ಟಿಕಾಂಶವುಳ್ಳ ಪಾನಿಯವನ್ನು ವಿತರಿಸುತ್ತಿದ್ದು, ಇದರ ಸದುಪಯೋಗ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಮಿತಿ ವಾಯ್ಸ್ ಚೇರ್ಮನ್ ಆರ್. ಶ್ರೀನಿವಾಸನ್ ಕೋಶಾಧ್ಯಕ್ಷ ಜಿ. ಶ್ರೀನಿವಾಸ್. ಕಾರ್ಯದರ್ಶಿ ವಿ.ಪಿ. ಸೋಮಶೇಖರ್ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರತ್ನಯ್ಯ ಶಿಕ್ಷಣಾಧಿಕಾರಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೋಲಾರ ಜಿಲ್ಲಾ ಘಟಕದಿಂದ ಪೌಷ್ಟಿಕಾಂಶ ಪಾನೀಯ್ನ ವಿತರಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ ಚಾಲನೆ ನೀಡಿದರು.