ಜನನುಡಿ ಡಾಟ್ ಕಾಮ್ ಎರ್ಪಡಿಸಿದ ವಲಯ ಮಟ್ಟದ ಚರ್ಚಗಳ ಗೋದಲಿ ಸ್ಪರ್ಧೆಯಲ್ಲಿ ಪ್ರಥಮ ತ್ರಾಸಿಗೆ, ದ್ವಿತೀಯ ಬೈಂದೂರಿಗೆ

ಜನನುಡಿ ಡಾಟ್ ಕಾಮ್ ಎರ್ಪಡಿಸಿದ ವಲಯ ಮಟ್ಟದ ಚರ್ಚಗಳ ಗೋದಲಿ ಸ್ಪರ್ಧೆಯಲ್ಲಿ ಪ್ರಥಮ ತ್ರಾಸಿಗೆ, ದ್ವಿತೀಯ ಬೈಂದೂರಿಗೆ

ಕುಂದಾಪುರ, ಕುಂದಾಪುರದ ಜನನುಡಿ ಡಾಟ್ ಕಾಮ್ ಸುದ್ದಿ ಬಿತ್ತರ ಸಂಸ್ಥೆಯಿಂದ 2018 ರ ಕುಂದಾಪುರ ವಲಯ ಮಟ್ಟದಲ್ಲಿ ಕುಂದಾಪುರ ವಲಯದ ಚರ್ಚಗಳ ಮಧ್ಯೆ ಗೋದಲಿಗಳ ಸ್ಪರ್ಧೆಯನ್ನು ಹಮ್ಮಿಕೊಂಡಿತು.
ಈ ಸ್ಪರ್ಧೆಯಲ್ಲಿ ತೀರ್ಪುದಾರರು ತ್ರಾಸಿ ಚರ್ಚ್ ಆವರಣದಲ್ಲಿ ಭಾ.ಕ.ಯು. ಸಂಘ ನಿರ್ಮಿಸಿದ ಗೋದಲಿಗೆ ಪ್ರಥಮ ಸ್ಥಾನವನ್ನು ನೀಡಿದ್ದಾರೆ. ದ್ವಿತೀಯ ಸ್ಥಾನವನ್ನು ಬೈಂದೂರು ಭಾ.ಕ.ಯು. ಸಂಘ ನಿರ್ಮಿಸಿದ ಗೋದಲಿಗೆ ಪ್ರಾಪ್ತವಾಗಿದೆ, ತ್ರತೀಯ ಸ್ಥಾನವನ್ನು ಕೋಟಾ ಚರ್ಚಿನ ಆವರಣದಲ್ಲಿ ಕೋಟದ ಮ್ಯಾಕ್ಷಿಮ್ ಡಾಯಸ್ ಮತ್ತು ಸ್ನೇಹಿತರು ನಿರ್ಮಿಸಿದ ಗೋದಲಿಗೆ ಪ್ರಾಪ್ತವಾಗಿದೆ, ಕುಂದಾಪುರ ಭಾ.ಕ.ಯು. ಸಂಘ ನಿರ್ಮಿಸಿದ ಗೋದಲಿಗೆ ನಾಲ್ಕನೆ ಸ್ಥಾನ ದೊರಕಿದರೆ, ಪಿಯುಸ್ ನಗರ್ ಭಾ.ಕ.ಯು. ಸಂಘ ನಿರ್ಮಿಸಿದ ಗೋದಲಿಗೆ ದೊರಕಿದೆ.
ಬಹುಮಾನಗಳನ್ನು ವಿತರಿಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಬಹುಮಾನಗಳನ್ನು ಪಡೆದವರಿಗೆ ಅಭಿನಂದನೆಗಳು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಮುಂದಿನ ವರ್ಷದಲ್ಲಿ ನಿಮಗೆ ಶುಭವನ್ನು ಕೋರುವೆವು.

– ಸಂಪಾದಕರು

ಪ್ರಥಮ ಸ್ಥಾನ – ತ್ರಾಸಿ ಭಾ.ಕ.ಯು. ಸಂಘ

ದ್ವಿತೀಯ ಸ್ಥಾನ – ಬೈಂದೂರು ಭಾ.ಕ.ಯು. ಸಂಘ

ತ್ರತೀಯ ಸ್ಥಾನ – ಕೋಟಾ ಫ್ರೆಂಡ್ಸ್

ನಾಲ್ಕನೆ ಸ್ಥಾನ – ಕುಂದಾಪುರ ಭಾ.ಕ.ಯು. ಸಂಘ

ಐದನೆ ಸ್ಥಾನ – ಪಿಯುಸ್ ನಗರ ಭಾ.ಕ.ಯು. ಸಂಘ