ಜನಧ್ವನಿ: ಕುಂದಾಪುರ ಬ್ಲಾಕ್ ಕಾಂಗ್ರೆಸ್‍ನಿಂದ ಬಿಜೆಪಿ ಸರಕಾರದ ವಿರುದ್ದ ಪ್ರತಿಭಟನೆ

JANANUDI.COM NETWORK

ಕುಂದಾಪುರ,ಅ.20: ಇಂದು ಜನಧ್ವನಿ – ರಾಜ್ಯ ಬಿಜೆಪಿ ಸರಕಾರದ ವಿರುದ್ದ ಪ್ರತಿಭಟನೆ ರಾಜ್ಯಾದ್ಯಂತ ನಡೆಯಿತು, ಕುಂದಾಪುರ ಬ್ಲಾಕ್ ಕಾಂಗ್ರೆಸ್‍ನಿಂದಲೂ, ಈ ಪ್ರತಿಭಟನೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂದೆ ಬೆಳಿಗ್ಗೆ 11 ಗಂಟೆಗೆ ನಡೆಯಿತು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್‍ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರತಿಭಟನೆಯ ನೇತ್ರತ್ವವನ್ನು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಯಾಡಿ ಸಿವರಾಮ ಶೆಟ್ಟಿ ವಹಿಸಿ ‘ದುರುದ್ದೇಶ ಭರಿತ ಜ್ಯಾರಿ ತಂದ ಭೂಸುಧಾರಣೆ ಕಾನೂನು ರಾಜ್ಯ ರೈತ ವಿರೋಧಿಯಾಗಿದ್ದು,s ಸಣ್ಣ ಮತ್ತು ಅತೀ ಸಣ್ಣ ರೈತರ ಕ್ರಷಿ ಚಟುವಟಿಕೆಯನ್ನು ಬಂಡವಾಳಶಹಿಗಳು ನಿಯಂತ್ರಿಸುವಂತಾಗಿದೆ, ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ರೈತರ ಭೂಮಿ ರಿಯಲ್ ಎಸ್ಟೆಡ್ ಮತ್ತು ಭೂ ಮಾಫಿಯದಾರರ ಪಾಲಾಗುವುದು ಖಚಿತ’ ಎಂದು ಹೇಳಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ವಹಿಸಿ ’ರಾಜ್ಯ ಸರಕಾರ ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗವನ್ನು ತನ್ನ ಊರುಗೋಲನ್ನಾಗಿ ಮಾಡಿಕೊಂಡಿದೆ. ಅಕ್ಕಿ ಬೆಳೆಯಿಂದ ಹಿಡಿದು ಪಿಪಿಇ ಕೀಟ್ ಖರೀದಿಯ ವರೆಗೆ, ಪ್ರತಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಸಿದೆ’ ಎಂದರು.
ಮಾಜಿ ನಗರ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ ಮಾತನಾಡಿ ’ರಾಜ್ಯ ಸರಕಾರ ಜ್ಯಾರಿ ತಂದ ಎ.ಪಿ.ಎಮ್. ಸಿ. ಮತ್ತು ಕೇಂದ್ರ ಸರಕಾರ ಜ್ಯಾರಿ ತಂದ ಕಾರ್ಮಿಕ ಕಾಯ್ದೆಯು ಜನವಿರೋಧಿ’ ಎಂದರು. ಪ್ರತಿಭಟನೆಯ ನಂತರ ಮನವಿಯನ್ನು ತಹಶೀಲ್ದಾರ್ ಕಛೇರಿಯ ಮೂಲಕ ಸರಕಾರಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಜ್ಯೋತಿ ಪುತ್ರನ್, ಮಹಿಳಾ ಬ್ಲಾಕ್ ಅಧ್ಯಕ್ಷೆ. ಚಂದ್ರಶೇಖರ ಶೆಟ್ಟಿ, ಐ.ಟಿ.ಶೆಲ್ ರಾಜ್ಯ ಕಾರ್ಯದರ್ಶಿ. ಗಣೇಶ ಶೇರಿಗಾರ, ನಗರ ಅಧ್ಯಕ್ಷ. ಅಶೋಕ ಪೂಜಾರಿ, ಬ್ಲಾಕ್ ಉಪಾಧ್ಯಕ್ಷರು. ಪ್ರಭಾವತಿ ಶೆಟ್ಟಿ, ಪುರಸಭೆ ಅಧ್ಯಕ್ಷೆ. ರೋಶನ್ ಶೆಟ್ಟಿ, ಟಿಜಿಟಲ್ ಯುತ್ ಅಧ್ಯಕ್ಷರು. ಕಮಾರ ಖಾರ್ವಿ, ಅಧ್ಯಕ್ಶರು ಸೇವಾದಳ, ಚಂದ್ರ ಅಮೀನ್. ಅಧ್ಯಕ್ಷರು ಐ.ಎನ್.ಟಿ.ಯು.ಸಿ, ಸತೀಶ ಜಪ್ತಿ, ಆರ್.ಪಿ.ಜಿ.ಎಸ್.ಸಂಚಾಲಕರು. ರಮೇಶ್ ಶೆಟ್ಟಿ, ಕಾರ್ಯದರ್ಶಿ ಜಿಲ್ಲಾ ಯುವ ಕಾಂಗ್ರೆಸ್. ಶಿವರಾಮ ಪುತ್ರನ್, ಮಾಜಿ ನಾಮ ನಿರ್ದೇಶಿತ ಸದಸ್ಯರು. ಕೇಶವ ಭಟ್. ಶಸಿರಾಜ್ ಪೂಜಾರಿ. ಶಿಶಿರ, ಅಶೋಕ ಸುವರ್ಣ, ಗಣಪತಿ ಶೇಟ್. ಕೆ.ಸುರೇಶ. ದಿನೇಶ್ ಬೆಟ್ಟ, ವಿಠಲ ಕಾಂಚನ್. ಶ್ರೀನಿವಾಸ ಶೆಟ್ಟಿ. ಜ್ಯೋತಿ ಟಿ.ನಾಯ್ಕ್. ಸ್ಟೀವನ್ ಡಿಕೋಸ್ತಾ. ಸದಾನಂದ ಖಾರ್ವಿ. ವಿಜಯಧರ ಕೆ.ವಿ. ಶೋಭಾ ಸಚ್ಚಿದಾನಂದ. ಅಣ್ಣಯ್ಯ ಪುತ್ರನ್. ಮಹಮದ್ ಹುಸೇನ್. ಬಿ.ಶಂಕರ ಬಸ್ರೂರು. ಶೀನಾ ಪೂಜಾರಿ. ಗಣೇಶ ದೇವಾಡಿಗ. ನರಸಿಂಹ ನಾಯ್ಕ್. ರಜಾಕ್ ಮಡುಗೋಪಾಡಿ. ,ಪಲ್ಲವಿ. ಚಂದ್ರ ಕಾಂಚನ್ ಇನ್ನಿತರರು ಹಾಜರಿದ್ದರು.
ಬ್ಲಾಕ್ ಕಾಂಗ್ರೆಸನ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪ್ರಸ್ತಾವಿಸಿ ಸ್ವಾಗತಿಸಿದರು, ಕೋಶಾಧಿಕಾರಿ ನಾರಯಣ ಆಚಾರಿ ವಂದಿಸಿದರು.