ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ರಾಯಲ್ಪಾಡು 2 : ಗೌನಿಪಲ್ಲಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಗೌನಿಪಲ್ಲಿ – ರಾಯಲ್ಪಾಡು ರಸ್ತೆ ಎರಡು ಬದಿಯಲ್ಲಿರುವ ಪುಟ್ ಪಾತ್ ಪೆಟ್ಟಿಗೆ ಅಂಗಡಿಗಳನ್ನು ಹಾಗೂ ಮುಂಬಾಗ ಛಾವಣಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶನಿವಾರ ಯಶ್ವಸಿಯಾಗಿ ನಡೆಯಿತು.
ಈ ಪುಟ್ಪಾತ್ ಅಂಗಡಿಗಳನ್ನು ತೆರವುಗೊಳಿಸಲು ಹಲವು ವರ್ಷಗಳಿಂದ ತಕರಾರು ನಡೆಯುತ್ತಿತ್ತು ಇದರಲ್ಲಿ ರಾಜಕೀಯ ಹಸ್ತಕ್ಷೇಪವು ಬಳಕೆ ಮಾಡಿಕೊಂಡು ಕಾಲಕಳೆಯುತ್ತಿದ್ದರು. ಇದರಿಂದ ಸಾರ್ವಜನಿಕರು ಓಡಾಡಲು ಕಿರಿಕರಿ ಉಂಟು ಮಾಡಿದೆ ಎಂದು ದೂರುಗಳು ಗ್ರಾಮಪಂಚಾಯಿತಿ , ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ದೂರುಗಳು ನೀಡಲಾಗಿತ್ತು.
ಇದರ ಹಿನ್ನಲೆಯಲ್ಲಿ ಅಂಗಡಿ ಮಾಲೀಕರಿಗೆ ಹಲವು ಬಾರಿ ನೋಟಿಸ್ ನೀಡಿದ್ದರೂ ತೆರವುಗೊಳಿಸದ ಕಾರಣ ಶನಿವಾರ ಬೆಳ್ಳಂಬೆಳಗ್ಗೆ ಗ್ರಾಮಪಂಚಾಯಿತಿ , ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಎರಡು ಜೆಸಿಬಿ ಗಳನ್ನು ಕರೆ ತಂದು ಪುಟ್ಪಾತ್ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತು.
ಲೋಕೋಪಯೋಗಿ ಇಲಾಖೆ ಎಇಇ ಎಲ್.ಕೆ.ಶ್ರೀನಿವಾಸಮೂರ್ತಿ,ಪಿಡಿಒ ಗೌಸ್ಸಾಬ್,ಜೆಇ ಎ.ಕೆ.ನಾಗರಾಜ್,ಗೋವಿಂದಪ್ಪ,ಪಿಎಸ್ಐ ವರಲಕ್ಷ್ಮಿ ಇತರರದಿದ್ದರು.