ಕೋವಿಡ್ 19 ವೈರಸ್ (ಕೊರೊನಾ) ತಡೆಯ ಎಕ್ಷನ್ ಟೀಮ್ ಕುಂದಾಪುರ ತಂಡ ಕಾರ್ಯಚರಣೆಯಲ್ಲಿದೆ: ಸೊಂಕು ಪೀಡಿತ ಭಟ್ಕಳ ಮೂಲದ ವ್ಯಕ್ತಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ಸಹ ಪ್ರಯಾಣಿಕರನ್ನು ಗುರುತಿಸಿ ಕ್ವಾರಂಟೆಯ್ನಲ್ಲಿ ಇರಿಸಲಾಗಿದೆ

JANANUDI.COM NETWORK

 

 

 

 

ಕೋವಿಡ್ 19 ವೈರಸ್ (ಕೊರೊನಾ) ತಡೆಯ ಎಕ್ಷನ್ ಟೀಮ್ ಕುಂದಾಪುರ ತಂಡ ಕಾರ್ಯಚರಣೆಯಲ್ಲಿದೆ: ಸೊಂಕು ಪೀಡಿತ ಭಟ್ಕಳ ಮೂಲದ ವ್ಯಕ್ತಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ಸಹ ಪ್ರಯಾಣಿಕರನ್ನು ಗುರುತಿಸಿ ಕ್ವಾರಂಟೆಯ್ನಲ್ಲಿ ಇರಿಸಲಾಗಿದೆ

 

ಕುಂದಾಪುರ, ಮಾ. 24: ಇವತ್ತು ಬೆಳಿಗ್ಗೆ 7 ಗಂಟೆಗೆ ತಾಲೂಕು ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿ ನಾಗಭೂಷಣ್ ಉಡುಪ, ಎ.ಎಸ್.ಪಿ. ಹರಿರಾಮ್ ಶಂಕರ್, ಮತ್ತು ಸಹಾಯಕ ಕಮಿಶನರ್ ರಾಜು ಇವರನೊಳಗೊಂಡ ತಂಡ ಕೋವಿಡ್ 10 ಎಕ್ಷನ್ ಟೀಮ್ ಕುಂದಾಪುರ ತಂಡದ ಜೊತೆ ಸಭೆಯನ್ನು ನಡೆಸಿತು.
ಭಟ್ಕಳ ಮೂಲದ ವ್ಯಕ್ತಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ಸಹ ಪ್ರಯಾಣಿಕರನ್ನು ಗುರುತಿಸಲಾಗಿದೆ. ಅವರನ್ನು ಕ್ವಾರಂಟೆಯ್ನ್ ಒಳಗಾಗಲು ಆದೇಶಿಸಿದೆ. ಆರೋಗ್ಯ ಇಲಾಖೆಯವರು ಮತ್ತು ಪೊಲೀಸ್ ಸಿಬಂದಿ ಕ್ವಾರಂಟೆಯ್ನ್ ನಲ್ಲಿದ್ದವರನ್ನು ಪರೀಶಿಲಿಸುತ್ತಾ ಇರಬೇಕೆಂದು ಸಭೆಯಲ್ಲಿ ಚರ್ಚಿಸಿ ಇದನ್ನು ಪ್ರಮುಖ ವಿಚಾರವಾಗಿ ನಿರ್ಧರಿಸಿದೆ
ಅದರಂತೆ ಕ್ವಾರಂಟೆಯ್ನ್ ಒಳಗಾಗದವರ ಮನೆಯ ಹೊರಗೆ ಭಿತ್ತಿ ಚಿತ್ರವನ್ನು ಅಂಟಿಸುವುದು. ಕೊರೊನಾ ವೈರಸ್ ಹರಡದಂತೆ ಸಹಕರಿಸಲು, ಇಂತಹ ಭಿತ್ತಿ ಚಿತ್ರವನ್ನು ಅಂಟಿಸಿದವರ ಮನೆಗೆ ಯಾರು ಸಂಪರ್ಕ ಮಾಡಬಾರಾದಾಗಿ ವಿನಂತಿಸಿಕೊಳ್ಳಲಾಗಿದೆ.
    ಅಂಗಡಿ, ಮಾರ್ಕೆಟನಲ್ಲಿ ಮತ್ತು ಹಾಗೂ ಇತರ ಎಲ್ಲಾರೀತಿಯಲ್ಲಿ ಜನರ ಜ್ಯೊತೆ ವ್ಯವರಿಸುವಾಗ 1 ಮೀಟರ್ ಅಂತರವನ್ನು ಕಾಯ್ದುಗೊಳ್ಳ ಬೇಕು ಎಂದು ತಿಳಿಸಿದೆ. ಅದರಂತೆ ಕೆಲ್ವವು ಅಂಗಡಿಗಳ ಮುಂದೆ ಬಿಳಿ ಬಣ್ಣದಿಂದ ಸಾಲುಗಳನ್ನು ಹಾಕಲಾಗಿದೆ. ಇದರ ಪೋಟೊಗಳನ್ನೂ ಲಗತ್ತಿಸಲಾಗಿದೆ.

ಈ ಬಗ್ಗೆ ಎನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲಾ ಪೊಲೀಸ್ ಠಾಣೆಗಳಿಗೆ ಜಿಲ್ಲಾ ಕಮಿಶನರ್ ಆದೇಶವನ್ನು ನೀಡಿದ್ದಾರೆ.
ಈ ಆದೇಶವನ್ನು ಸಾರ್ವಜನಿಕರೂ ಒದಿ ತಿಳಿದುಕೊಂಡು, ಕೊರೊನಾ ವೈರಸ್ ತಡೆಯುವ ಸಲುವಾಗಿ ನಾವು ಇದರ ಪೋಟೊ ಪ್ರತಿಯನ್ನು ಪ್ರಕಟಿಸುತಿದ್ದೆವೆ.