ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
“ ಕೋವಿಡ್-19 ಮಾಹಿತಿ ಕರಪತ್ರ ಬಿಡುಗಡೆ”
ಶ್ರೀನಿವಾಸಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಶ್ರೀನಿವಾಸಪುರ ತಾಲೂಕಿನ ಯೋಜನಾ ಕಛೇರಿಯ ವ್ಯಾಪ್ತಿಯಲ್ಲಿ ಬರುವ ನೆಲವಂಕಿ ವಲಯದ ತಾಡಿಗೋಳ್ ಕಾರ್ಯಕ್ಷೇತ್ರದಲ್ಲಿ ಕೋವಿಡ್-19 ವೈರಸ್ಸ್‍ನ ಜಾಗೃತಿಯ ಕರಪತ್ರ ಬಿಡುಗಡೆಯನ್ನುಕಾರ್ಯಕ್ರಮವನ್ನು ತಾಡಿಗೋಳ್ ಗ್ರಾಮಪಂಚಾಯ್ತಿ ಅಧ್ಯಕ್ಷಕರಾದ ಶ್ರೀಯುತ ಎಮ್ ನಾರಾಯಣಸ್ವಾಮಿ ಉದ್ಘಾಟಿಸಿದರು, ನಂತರ ಶ್ರೀನಿವಾಸಪುರ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಯುತ ಸುರೇಶ್ ಗೌಡ ಎಸ್ ರವರು ಕೋವಿಡ್ -19 ವೈರಸ್ಸ್ ಎಂಬುದು ದೊಡ್ಡ ಮಹಾಮಾರಿ ಕಾಯಿಲೆ ಆಗಿದ್ದು ಇದನ್ನು ನಮ್ಮಿಂದ ಹೊರದೊಡಿಸಲು ನಾವೆಲ್ಲರೂ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನವನ್ನು ಹರಿಸಬೇಕು ಮಾಸ್ಕ್ ಕಡ್ಡಾಯವಾಗಿ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವುದು, ಸ್ಯಾನಿಟೈಜರ್ ಅಥವಾ ಸೋಪಿನಿಂದ ಹಾಗಾಗ್ಗೆ ಕೈ ಕಾಲುಗಳನ್ನು ತೊಳೆಯುವುದು ಅತ್ಯವಶ್ಯಕವಾಗಿದೆ ಮತ್ತು ನಮ್ಮ ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛತೆಯಾಗಿ ಕಾಪಾಡಿಕೊಳ್ಳುವುದು ಹಾಗೂನಾವೆಲ್ಲರೂ ಈ ಕೋವಿಡ್ -19 ವೈರಸ್ಸ್‍ನ್ನುಒಬ್ಬರಿಂದ ಒಬ್ಬರಿಗೆ ಹರಡದಂತೆ ಎಚ್ಚರದಿಂದ ಮುಂಜಾಗೃತಾ ಕ್ರಮಗಳನ್ನು ಪಾಲಿಸುವ ಮೂಲಕ ನಿಯಂತ್ರಸಲು ಎಲ್ಲಾರೂ ಸಹಕಾರ ನೀಡಬೇಕು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೆಲವಂಕಿ ವಲಯದ ಮೇಲ್ವಿಚಾರಕರಾದ ರಘು ಕೆ.ಜಿ ರವರು, ಹಾಗೂ ತಾಡಿಗೋಳ್ ಗ್ರಾಮಪಂಚಾಯ್ತಿ ಅಧ್ಯಕ್ಷಕರಾದ ಶ್ರೀಯುತ ಎಮ್ ನಾರಾಯಣಸ್ವಾಮಿ ಹಾಗೂ ಕೃಷಿ ಮೇಲ್ವಿಚಾರಕರಾದ ಅರುಣ್ ಕುಮಾರ್ , ಆಶಾಕಾರ್ಯಕರ್ತೆ ಶ್ರೀಮತಿ ಪಾರ್ವತಮ್ಮ , ನೆಲವಂಕಿ ವಲಯದ ಎಲ್ಲಾ ಸೇವಾಪ್ರತಿನಿಧಿಗಳು, ಹಾಗೂ ಸ್ವ-ಸಹಾಯ ಸಂಘದ ಸದಸ್ಯರುಉಪಸ್ಥಿತರಿದ್ದರು.