ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಕೋಲಾರ:2019ರ ಬಿತ್ತನೆ ಬೀಜಗಳ ಮಸೂದೆ ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ಕೃಷಿ ಹಾಗೂ ರೈತರ ಮೇಲೆ ಆಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಮಸೂದೆಯನ್ನು ಅಂಗೀಕಾರ ಮಾಡಬೇಕು
ಕೋಲಾರ,ಡಿ.14: 2019ರ ಬಿತ್ತನೆ ಬೀಜಗಳ ಮಸೂದೆ ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ಕೃಷಿ ಹಾಗೂ ರೈತರ ಮೇಲೆ ಆಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಮಸೂದೆಯನ್ನು ಅಂಗೀಕಾರ ಮಾಡಬೇಕು ಜೊತೆಗೆ ಏಷ್ಯಾದಲ್ಲೇ 2 ನೇ ಅತಿ ದೊಡ್ಡ ಟಮೋಟೋ ಮಾರುಕಟ್ಟೆಗೆ 40 ಎಕರೆ ಮಂಜೂರು ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಮಂತ್ರಿ ಹೆಚ್. ನಾಗೇಶ್ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ರೈತನೇ ದೇಶದ ಬೆನ್ನೆಲಬು ಆಹಾರ ಭದ್ರತೆಯ ಪ್ರಮುಖ ಮಾನವ ಯಂತ್ರವಾಗಿ ಕೆಲಸ ಮಾಡುವ ಕೃಷಿ ಪ್ರಧಾನವಾದ ಭಾರತದಲ್ಲಿ ರೈತರನ್ನು ದೀನೇ ದೀನೇ ರೈತರ ಹೆಸರೇಳಿಕೊಮಡು ಅಧಿಕಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೆನ್ನನ್ನು ಮುರಿದು ಕೃಷಿ ಕ್ಷೇತ್ರವನ್ನು ದೀನೇ ದೀನೇ ಅವೈಜ್ಞಾನಿಕ ನೀತಿಗಳನ್ನು ಜಾರಿಗೆ ತಂದು ಖಾಸಗಿ ಕಾರ್ಪೋರೇಟ್ ಕಂಪನಿಗಳಿಗೆ ಅಡವಿಡುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಮಾರಕವಾಗುವ ಖಾಸಗಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಆದೇಶಗಳನ್ನು ಜಾರಿ ಮಾಡುವ ಮೊದಲು ರೈತ ಕುಲವನ್ನು ಗಮದಲ್ಲಿಟ್ಟುಕೊಳ್ಳುತ್ತಿಲ್ಲ ಈಗಾಗಲೇ ಖಾಸಗಿ ಒಡೆತನದ ಬಿತ್ತನೆ ಬೀಜ, ಔಷದಿಗಳ ನಕಲಿ ಹಾವಳಿ ಹಾಗೂ ಸಮರ್ಪಕವಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಬೆಳೆದ ಬೆಳೆಗೆ ಸೂಕ್ತವಾದ ಬೆಲೆಯಿಲ್ಲದೆ ಖಾಸಗಿ ಸಾಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಕ್ಷಣೆಗೆ ಬರಬೇಕಾದ ಸರ್ಕಾರಗಳು ರೈತ ವಿರೋದಿ ದೋರಣೆಯನ್ನು ಅನುಸರಿಸಲು ಹೊರಟಿರುವ ರೈತ ವಿರೋದಿ ದೋರಣೆಯಲ್ಲಿ ಪ್ರಮುಖವಾದ ರೈತ ಬೀಜ ಸ್ವಾತಂತ್ರ್ಯ ಕಿತ್ತುಕೊಳ್ಳವ ಆದೇಶವಾದ ಬಿತ್ತನೆ ಬೀಜಗಳ ಮಸೂದೆ ರೈತರಿಗೆ ಮಾರಕವಾಗಿ ಖಾಸಗಿ ಕಂಪನಿಗಳಿಗೆ ವರದಾನವಾಗಲಿದೆ. ಅದರಲ್ಲೂ ವಂಶಪರಂಪರೆಯಾದ ತಳಿಗಳು ರಾತ್ರೋರಾತ್ರಿ ಕೃಷಿ ತಂತ್ರಜ್ಞಾನರ ಕೈ ಸೇರಿ ತಮ್ಮ ಬೀಜ ಸ್ವಾತಂತ್ರ್ಯ ಕಳೆದುಕೊಳ್ಳುವ ಜೊತೆಗೆ ಪ್ರತಿಯೊಂದಕ್ಕೂ ಸಂಬಂದಪಟ್ಟ ಇಲಾಖೆಯಗಳಿಂದ ನೊಂದಣಿ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿಯ ಜೊತೆಗೆ ಬೀಜ ಮಸೂದೆಯ ಮೇಲೆ ಹಿಡಿತ ಹೊಂದಿರುವ ಖಾಸಗಿ ಕಂಪನಿಗಳ ಮಾಲೀಕರ ತಾಳಕ್ಕೆ ತಕ್ಕಂತೆ ರೈತರು ಕುಣಿಯಬೇಕಾಗುತ್ತದೆ. ನೊಂದಣಿ ಇಲ್ಲದೆ ಯಾವುದೇ ಬಿತ್ತನೆ ಬೀಜದಿಂದ ಬೆಳೆ ಬೆಳೆದು ನಷ್ಟವಾದರೂ ಪರಿಹಾರ ಕೇಳುವ ಸಂಪೂರ್ಣ ಅಧಿಕಾರವನ್ನು ಕಳೆದುಕೊಂಡು ಕಂಪನಿಗಳ ಕೈಚಾಚ ಬೇಕಾದ ಪರಿಸ್ಥಿತಿ ರೈತರಿಗೆ ಸರ್ಕಾರಗಳು ನೀಡುತ್ತಿದ್ದಾರೆ ಆರೋಪಿಸಿದರು.
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಏಷ್ಯಾದಲ್ಲೇ 2 ನೇ ಅತಿ ದೊಡ್ಡ ಮಾರುಕಟ್ಟೆ ಎಂದು ಪ್ರಸಿದ್ದಿ ಪಡೆದಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಗುರುತಿಸಿರುವ ಚೆಲುವನಹಳ್ಳಿಯ ಜಮೀನನ್ನು ಮಂಜೂರು ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಬೇಕೆಂದು ಹಾಗೂ ಬೀಜ ಕಾಯ್ದೆಯ ಬಗ್ಗೆ ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ಚರ್ಚೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ನಾಗೇಶ್ರವರು ರೈತ ಕುಲಕ್ಕೆ ಮಾರಕವಾಗುವ ಕಾರ್ಪೋರೇಟ್ ಕಂಪನಿಗಳಿಗೆ ವರದಾನ ವಾಗುವ 2019ರ ಬಿತ್ತನೆ ಬೀಜ ಮಸೂದೆಯನ್ನು ಬಗ್ಗೆ ಹಾಗೂ ಮಾರುಕಟ್ಟೆ ಸ್ಥಳದ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ನಳಿನಿ.ಎ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ವಕ್ಕಲೇರಿ ಹನುಮಯ್ಯ, ವಡಗೂರು ಮಂಜು, ಮಂಗಸಂದ್ರ ತಿಮ್ಮಣ್ಣ, ಸುಪ್ರೀಂಚಲ, ಸುಧಾಕರ್, ಪುತ್ತೇರಿ ರಾಜು, ಮಂಜುನಾಥ್, ಅನಿಲ್ ಮುಂತಾದವರಿದ್ದರು.