ಕೋಲಾರ ತಾಲ್ಲೂಕು ಕಚೇರಿಯನ್ನು ಕಾರ್ಪೋರೇಟ್ ಹಾಗೂ ರಿಯಲ್ ಎಸ್ಟೇಟ್‍ರಿಗೆ ಮೊದಲ ಆದ್ಯತೆ ನೀಡುವುದಕ್ಕೆ ರೈತ ಸಂಘ ಜಾನುವಾರುಗಳ ಸಮೇತ ಹೋರಾಟ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ ತಾಲ್ಲೂಕು ಕಚೇರಿಯನ್ನು ಕಾರ್ಪೋರೇಟ್ ಹಾಗೂ ರಿಯಲ್ ಎಸ್ಟೇಟ್‍ರಿಗೆ ಮೊದಲ ಆದ್ಯತೆ ನೀಡುವುದಕ್ಕೆ ರೈತ ಸಂಘ  ಜಾನುವಾರುಗಳ ಸಮೇತ ಹೋರಾಟ

ಕೋಲಾರ ಜು. 04: ತಾಲ್ಲೂಕು ಕಚೇರಿಯನ್ನು ಕಾರ್ಪೋರೇಟ್ ಹಾಗೂ ರಿಯಲ್ ಎಸ್ಟೇಟ್‍ರಿಗೆ ಮೊದಲ ಆದ್ಯತೆ ನೀಡುವುದನ್ನು ವಿರೋದಿಸಿ ಹಾಗೂ ರೈತರು ಅರ್ಜಿ ನೀಡಿ 3 ತಿಂಗಳಾದರೂ ಕೆಲಸವಾಗದೆ, ಹೆಜ್ಜೆ ಹೆಜ್ಜೆಗೂ ಲಂಚಾವತಾರ ದಲ್ಲಾಳರ ಹಾವಳಿ ತಾಂಡವಾಡುತ್ತಿದ್ದು, ಪ್ರತಿ ನಿತ್ಯ ರೈತರ ಶೋಷಣೆ ಹಾಗೂ ಅಧಿಕಾರಿಗಳ ಲಂಚಭಾಕತನ ಜಡ್ಡುಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸಿ, ರೆಕಾರ್ಡ್ ರೂಮ್ ಮತ್ತು ನಾಡಕಛೇರಿಗಳಲ್ಲಿನ ಬ್ರಹ್ಮಾಂಡ ಭ್ರಷ್ಟಚಾರಕ್ಕೆ ಕಡಿವಾಣ ಹಾಕಿ, ಜೊತೆಗೆ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುವಂತಾಗಿದೆ. ಕೂಡಲೇ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕಂದಾಯ ಇಲಾಖೆಯ ಶೋಷಣೆ ತಪ್ಪಿಸಬೇಕೆಂದು ರೈತ ಸಂಘದಿಂಧ ತಾಲ್ಲೂಕು ಕಚೇರಿಗೆ ಮುಳ್ಳುಗಿಡಗಳ ಮತ್ತು ಜಾನುವಾರುಗಳ ಸಮೇತ ಹೋರಾಟ ಮಾಡಿ ಶಿರಸ್ತೆದಾರ್, ಸರ್ವೇ ಸೂಪರ್ ವೈಜರ್, ಮತ್ತು ಗ್ರೇಡ್ ತಹಶೀಲ್ದಾರ್‍ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಒಂದು ಕಡೆ ಬೀಕರ ಬರಗಾಲ ಮತ್ತೊಂದೆಡೆ ಲಂಚವಿಲ್ಲದೆ ತಹಸೀಲ್ದಾರ್ ಕಚೇರಿಗೆ ಒಳಗಡೆ ಹೋಗಲು ಸಾಧ್ಯವಿಲ್ಲ ಸಿಬ್ಬಂಧಿಯ ಲಂಚಭಾಕತನ ಮಿತಿಮೀರಿ ಸರ್ವಾಧಿಕಾರಿಗಳಾಗಿದ್ದಾರೆ.ಜವಾನರಿಂದ ಹಿರಿಯ ಅಧಿಕಾರಿಗಳವರೆಗೂ ಹಣಹಣ ಎಂದು ರೈತರ ರಕ್ತ ಹೀರುತ್ತಿದ್ದಾರೆ. ಸರ್ಕಾರಿ ಆಸ್ತಿಯನ್ನು ಈಗಾಗಲೆ ಕೋಟಿಗಳಿಗೆ ದಾಖಲೆ ಸೃಷ್ಟಿ ಮಾಡಿಕೊಂಡು ಮಾರಿಕೊಂಡಿದ್ದಾರೆ. ಗಣೀಕೃತ ಸರ್ವರ್ ರೀಪೇರಿ ಎಂಬ ಹೆಸರಿನಲ್ಲಿ ತಿಂಗಳಾನುಗಟ್ಟಲೆ ರೈತರನ್ನು ಅಲೆದಾಡಿಸುವುದನ್ನು ಗಣೀಕೃತ ಆರ್.ಟಿ.ಸಿ ಯಲ್ಲಿ ಅಧಿಕಾರಿಗಳು ತಪ್ಪು ತಪ್ಪಾಗಿ ನಮೂದಿಸಿದ್ದು, ಇದನ್ನು ಸರಿಪಡಿಸಕೊಳ್ಳಲು ರೈತರು ಕೋರ್ಟ್ ಕಛೇರಿ ಅಲೆಯಬೇಕಾಗಿದ್ದು, ಇದನ್ನು ಮೂಲ ದಾಖಲೆಗಳ ಆದಾರದ ಮೇಲೆ ಸರಿಪಡಿಸಬೇಕಾದ ಅಧಿಕಾರಿಗಳು ಸಾವಿರಗಳ ಲೆಕ್ಕದಲ್ಲಿ ಹಣ ಕೇಳಿ ಸರ್ಕಾರ ಆದೇಶವನ್ನು ಗಾಳಿಗೆ ತೂರಿದ್ದಾರೆ. ಸಕಾಲದಲ್ಲಿ ಅರ್ಜಿ ಸಲ್ಲಿಸಿದÀರೂ ಹಣ ನೀಡದೇ ಹೋದರೆ 3ತಿಂಗಳಾದರೂ ದಾಖಲೆಗಳನ್ನು ಹಾಗೂ ರೈತರ ಸಮಸ್ಯೆಯನ್ನು ಪರಿಹರಿಸದೆ ಕಾಲಹರಣ ಮಾಡಿ ಜೋರಾಗಿ ಮಾತನಾಡಿದರೆ ಅಮಾಯಕರ ಮೇಲೆ ಅಧಿಕಾರಿಗಳು ಗೂಂಡಾವರ್ತನೆ ತೋರುತ್ತಾರೆ. ಕ್ರಯ, ವೀಭಾಗ, ದಾನ, ತಾತ್ಕಾಲಿಕ ಪೋಡಿ, ತಿದ್ದುಪಡಿಗಳಿಗೆ ಶುಲ್ಕ ಪಾವತಿಸಿದರೂ ನಿಗದಿತ ಅವಧಿಯೋಳಗೆ ಕೆಲಸ ಮಾಡದೇ ಅಧಿಕಾರ ದುರುಪಯೋಗವಾಗುತ್ತಿದೆ. ಕÉರೆ, ಗುಂಡು ತೋಪು, ಸರ್ಕಾರಿ ಗೋಮಾಳ, ಹಕ್ಕುದಾರಿ ತೋಪುಗಳಿಗೆ ದಾಖಲೆಗಳನ್ನು ತಿದ್ದಿ ರೆಡಿ ಮಾಡಿ ಕೋಟ್ಯಾಂತರ ರೂ.ಗಳಿಗೆ ಭೂಗಳ್ಳರಿಗೆ ಮತ್ತು ಹಣವಂತರ ಹೆಸರಿಗೆ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರಿ ಆಸ್ತಿಯ ಅರ್ಧ ಭಾಗವನ್ನು ಈಗಾಗಲೆ ಲೂಟಿ ಮಾಡಿ ಉಳಿದ ಭೂಮಿ ಲೂಟಿಯಲ್ಲಿ ನಿರತರಾಗಿ ಕಂದಾಯ ಇಲಾಖೆಯನ್ನು ಭೂಗಳ್ಳರಿಗೆ ಮಾರಾಟ ಮಾಡಿಕೊಂಡಿದ್ದಾರೆ ಮತ್ತು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿ ಹೆಸರು ಮತ್ತು ಅವರು ಮಾಡುವ ಉದ್ಯೋಗದ ಗುರುತಿನ ಚೀಟಿಯನ್ನು ಹಾಕಿಕೊಳ್ಳುವಂತೆ ಸೂಚಿಸಿ ಹಳೆ ದಾಖಲಾತಿ ಕಡತಗಳಲ್ಲಿ ಸುಮಾರು ದಾಖಲೆಗಳೂ ಪುಟಗಟ್ಟಲೇ ಹರಿದು ಹಾಕಿದ್ದು, ಕೆಲವು ಪುಸ್ತಕಗಳನ್ನು ನಾಪತ್ತೆ ಮಾಡಿದ್ದಾರೆ, ದರ್ಖಾಸ್ತು ಮಂಜೂರಾತಿಯಲ್ಲಿ ಅಕ್ರಮಗಳಿಗೆ ಕಾರುಬಾರಾಗಿದೆ. 1ರಿಂದ 5ಗುಂಟೆಯೊಳಗಿನ ಜಮೀನಿಗೆ ಕ್ರಯ ಮಾಡಬಾರದೆಂಬ ಆದೇಶವಿದ್ದರೂ ಇದಕ್ಕೆ ಕೇರೆ ಎನ್ನುತ್ತಿಲ್ಲ ನಾಡ ಕಚೇರಿಗಳು ರೈತರ ರಕ್ತ ಹೀರುವ ಕಚೇರಿಗಳಾಗಿವೆ. ಇನ್ನು ಕಂದಾಯ ಇಲಾಖೆಂiÀiನ್ನು ತಮ್ಮ ಸ್ವಂತ ಆಸ್ತಿಯಂತೆ ಪ್ರತಿಯೊಬ್ಬ ಅಧಿಕಾರಿಯು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂಧು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ತಾಲ್ಲೂಕಿನಾದ್ಯಂತ ನಾಡಕಚೇರಿಗಳು ಲಂಗು ಲಗಾಮು ಇಲ್ಲದೆ ಕಚೇರಿಗಳಾಗಿವೆ ದಲ್ಲಾಳಿಗಳೇ ನಾಡ ಕಚೇರಿಗಳ ಉಪ ತಹಶೀಲ್ದಾರ್‍ಗಳಾಗಿದ್ದಾರೆ. ಶ್ರೀಮಂತರಿಗೆ ರತ್ನಗಂಬಳಿ ಬಡವರಿಗೆ ಮುಳ್ಳಿನ ಹಾದಿಯಾಗಿದೆ ಇದನ್ನು ಕೇಳುವವರು ದಿಕ್ಕಿಲ್ಲದಂತಾಗಿದ್ದಾರೆ. ಮತ್ತೊಂದೆಡೆ ದಿವಂಗತ ಡಿ,ಕೆ ರವಿರವರ ರೈತ ಪರ ಯೋಜನೆಯಾದ ಕಂದಾಯ ಹಾಗೂ ಪೋಡಿ ಅದಾಲತ್ ಮೂಲೆ ಗುಂಪಾಗಿದೆ. ಸಣ್ಣ ಪುಟ್ಟ ತಿದ್ದುಪಡಿ ಮತ್ತು ಪಿ ನಂ ರದ್ದುಮಾಡಲು ಬರಗಾಲದಲ್ಲೂ ಗ್ರಾಮೀಣ ಪ್ರದೇಶದ ಜನ ಕೆಲಸ ಬಿಟ್ಟು, ತಾಲ್ಲೂಕು ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿಯಿದೆ. ರಿಯಲ್ ಎಸ್ಟೇಟ್ ಹಾಗೂ ದಲ್ಲಾಳಿಗಳಿಂದ ತುಂಬಿ ತುಳುಕುತ್ತಿರುವ ತಾಲ್ಲೂಕು ಕಚೇರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ತಾಲ್ಲೂಕಿನಾದ್ಯಾಂತ ಪ್ರಭಾವಿ ವ್ಯಕ್ತಿಗಳು ವಶಪಡಿಸಿಕೊಂಡಿರುವ ಕೆರೆ, ಗೋಮಾಳ, ಗುಂಡು ತೋಪು, ಹುಲ್ಲುಬನ್ನಿ ಜಮೀನನ್ನು ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನಿನ ಮುಖಾಂತರ ತೆರವುಗೊಳಿಸಬೇಕು. ಹಾಗೂ ಜಡ್ಡುಗಟ್ಟಿರುವ ನಾಡಕಚೇರಿಗಳನ್ನು ಸರಿಪಡಿಸಬೇಕು. ಹಾಗೂ ಕಂದಾಯ ಮತ್ತು ಪೋಡಿ ಅದಾಲತ್ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾರಿಗೆ ತರಬೇಕು. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್. ಐ ಮತ್ತು ವಿ.ಎ ಗಳು ನಗರಗಳಲ್ಲಿ ವಾಸ್ತವ ಹೂಡುತ್ತಿದ್ದು, ಕೂಡಲೇ ಅವರನ್ನು ಹಳ್ಳಿಗಳಲ್ಲಿ ಜನಸಾಮಾನ್ಯರ ಕೆಲಸ ಮಾಡಲು ಆದೇಶ ಮಾಡಬೇಕು ಹಾಗೂ ತಾಲ್ಲೂಕು ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಅಗ್ರಹಿಸಿದರು.
ಮನವಿ ಸ್ವೀಕರಿಸಿದ ಉಪ ವೀಭಾಗಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಚಂದ್ರಕಾಂತಮ್ಮರವರು ತಾಲ್ಲೂಕು ಕಚೇರಿಯ ಅವ್ಯವಸ್ಥೆಯ ವಿರುದ್ದ ಸುಮಾರು ದೂರುಗಳು ಬಂದಿವೆ. ಇದರ ವಿರುದ್ದ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇವೆ. ಎಂದು ಭರವಸೆ ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷೆ ಎ.ನಳಿನಿ, ರೋಜ, ವಕ್ಕಲೇರಿ ಹನುಮಯ್ಯ, ಈಕಂಬಳ್ಳಿ ಮಂಜುನಾಥ್, ರಂಜಿತ್ ಕುಮಾರ್, ಸಾಗರ್, ಆನಂದರೆಡ್ಡಿ, ಸುಪ್ರೀಂಚಲ, ಪುರುಷೋತ್ತಮ್, ಮಂಗಸಂದ್ರ ನಾಗೇಶ್, ವೆಂಕಟೇಶಪ್ಪ, ಕ್ಯಾಸಂಬಳ್ಳಿ ಪ್ರತಾಪ್, ಮೀಸೆ ವೆಂಕಟೇಶಪ್ಪ, ರೆಡ್ಡಿ,ಆಂಬ್ಲಿಕಲ್ ಮಂಜುನಾಥ್, ಮುಂತಾದವರಿದ್ದರು.