ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ ಜಿಲ್ಲೆಯಲ್ಲಿಯೇ ಕರೋನಾ ಪರೀಕ್ಷಾ ಕೇಂದ್ರ ಸ್ಥಾಪನೆ – ಹೆಚ್.ನಾಗೇಶ್
ಕೋಲಾರ ; ಕೋಲಾರ ಜಿಲ್ಲೆಯಲ್ಲಿಯೇ ಕರೋನಾ ವೈರಸ್ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಇನ್ನು ಮುಂದೆ ಕೋವಿಡ್-19 ಪರೀಕ್ಷೆಯನ್ನು ಜಿಲ್ಲೆಯಲ್ಲಿಯೇ ಮಾಡಿ ಪಲಿತಾಂಶ ಪಡೆಯಬಹುದಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ ಅವರು ತಿಳಿಸಿದರು .
ಇಂದು ಎಸ್ ಎನ್ ಆರ್ ಆಸ್ಪತ್ರೆಯ ಅವರಣದಲ್ಲಿರುವ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ಈ ಹಿಂದೆ ಕರೋನಾ ಪರೀಕ್ಷೆಗಾಗಿ ಸ್ಯಾಂಪಲ್ ತೆಗೆದು ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಮುಖ್ಯಮಂತ್ರಿಗಳ ಜೊತೆ ಜಿಲ್ಲಾಧಿಕಾರಿಗಳು ಹಾಗೂ ನಾನು ವಿಡಿಯೋ ಕಾನ್ಪ್‍ರೆನ್ಸ್ ಮೂಲಕ ಚರ್ಚೆ ನಡೆಸಿ, ಜಿಲ್ಲೆಗೆ ಕರೋನಾ ಪರೀಕ್ಷಾ ಕೇಂದ್ರವನ್ನು ನೀಡಬೇಕು ಎಂದು ಮನವಿ ಮಾಡಿದ್ದೆವು. ಅದರ ಪ್ರತಿಫಲವಾಗಿ ಇಂದು ನಮ್ಮ ಜಿಲ್ಲೆಯಲ್ಲಿ ಕೊರೋನ ವೈರಸ್ ಪರೀಕ್ಷಾ ಕೇಂದ್ರ ಲೋಕಾರ್ಪಣೆಗೊಂಡಿದೆ ಎಂದರು.
ಈ ಲ್ಯಾಬ್‍ನಲ್ಲಿ ಪ್ರತಿ ಗಂಟೆಗೆ 12 ರಂತೆ ಸ್ಯಾಂಪಲ್ ತೆಗೆದು ದಿನಕ್ಕೆ 150 ಸ್ಯಾಂಪಲ್ ಟೆಸ್ಟ್ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 28 ಕರೋನಾ ಪ್ರಕರಣಗಳು ಪಾಸಿಟಿವ್ ಆಗಿದ್ದು, ನೆನ್ನೆಯವರಗೆ 11 ಜನ ಕೊರೋನ ಸೋಂಕಿತರು ಗುಣಮುಖರಾಗಿ ಬಿಡುಗಡೆ ಆಗಿರುತ್ತಾರೆ. ಇನ್ನೂಳಿದ 17 ಜನ ಕೊರೋನ ಸೋಂಕಿತರು ಗುಣಮುಖರಾಗಬೇಕಿದೆ ಎಲ್ಲಾ ಸೋಂಕಿತರು ಗುಣಮುಖರಾಗುತ್ತಾರೆ ಎಂದು ತಿಳಿಸಿದರು.
ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಸಿಬ್ಬಂದಿ, ಕೊರೋನ ವಾರಿಯರ್ಸ್ ತಂಡವು ಉತ್ತಮವಾಗಿ ಕೆಲಸವನ್ನು ನಿರ್ವಸುತ್ತಿದ್ದಾರೆ .ಎಸ್ ಎನ್ ಆರ್ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ರೂಪಿಸಿದ್ದು ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲ ಎಂದರು.
ಜಿಲ್ಲಾಧಿಕಾರಿಗಳಾದ ಸಿ ಸತ್ಯ ಭಾಮ ಅವರು ಮಾತಾನಾಡಿ ಈಗಾಗಲೇ ಕೋವಿಡ್‍ಗೆ 200 ಹಾಸಿಗೆಯುಳ್ಳ ಆಸ್ಪತ್ರೆಯನ್ನು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದು ಇದರಲ್ಲಿ 40 ಹಾಸಿಗೆಗಳು ಐ ಸಿ ಯು ಗೆ ಮೀಸಲಿಟ್ಟಿದ್ದು, ಎಲ್ಲಾ ಕಾರ್ಯಗಳು ಮುಗಿದಿದ್ದು ಅತೀ ಶೀಘ್ರದಲ್ಲೇ ಸೇವೆಗೆ ಸಿಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾದಿಕಾರಿಗಳಾದ ಸೋಮಶೇಖರ್, ತಹಶೀಲ್ದಾರ್‍ರಾದ ಶೋಭಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿಜಯ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಾರಾಯಣಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.