ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿ ವರ್ಷ ಸಾಹಿತ್ಯ ಕಾರ್ಯಕ್ರಮಕ್ಕಾಗಿ 1 ಲಕ್ಷ ರೂ ದತ್ತಿ ನಿಧಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ,ಸೆ.5: ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿ ವರ್ಷ ಸಾಹಿತ್ಯ ಕಾರ್ಯಕ್ರಮ ನಡೆಯಲು ಒಂದು ಲಕ್ಷರೂಗಳ ದತ್ತಿಯನ್ನು ದಿವಂಗತ ವಿಜಯಮ್ಮ – ನಿವೃತ್ತ ಶಿರಸ್ತೇದಾರ್ ದಿವಂಗತ ಕಡಗಟ್ಟೂರು ಇ.ಕೃಷ್ಣಪ್ಪ ರವರ ಸ್ಮರಣೆಯ ದತ್ತಿ ನಿಡಲಾಯಿತು.
ಇವರ ಮಕ್ಕಳಾದ ಪ್ರೇಮನಾಗಾನಂದ, ಸೋಮಶೇಖರ್, ವಿಜಯಕುಮಾರ್ ರವರು ಕೋಲಾರ ಜಿಲ್ಲೆಯ ಯುವ ಸಾಹಿತಿಗಳಿಗೆ (ವಯೋಮಿತಿ ನಲವತ್ತು ವರ್ಷಗಳೊಳಗೆ) ಪ್ರೋತ್ಸಾಹಿಸಲು ಒಂದು ಲಕ್ಷರೂಗಳ ದತ್ತಿಯನ್ನಿಡಲಾಗಿದ್ದು, ಪ್ರತಿವರ್ಷವೂ ಜಿಲ್ಲೆಯ ಒಬ್ಬ ಯುವ ಸಾಹಿತಿಯನ್ನು “ಸಾಹಿತ್ಯ ಕಣ್ಮಣಿ” ಬಿರುದನ್ನು ನೀಡಿ ಗೌರವಿಸುವುದು. ಆ ಸಾಹಿತಿಯ ಸಾಹಿತ್ಯ ಕೃಷಿ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುವುದು ಇದು ದಾನಿಗಳ ಆಶಯವಾಗಿದೆ.
ನನ್ನ ಅವಧಿಯಲ್ಲಿ ಒಂದು ಲಕ್ಷರೂಗಳ ಮೂರು ದತ್ತಿನ್ನಿಡಲಾಗಿದೆ. ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮನು ಬಳಿಗಾರ್ ರವರಿಗೆ ದತ್ತಿ ಹಣದ ಚೆಕ್ ನೀಡಲಾಯಿತು. ಈ ಸಂಧರ್ಭದಲ್ಲಿ ಕೇಂದ್ರ ಗೌರವ ಕಾರ್ಯದರ್ಶಿ ವ.ಚ ಚನ್ನೇಗೌಡ, ಜಿಲ್ಲಾ ಗೌರವ ಕಾರ್ಯದರ್ಶಿ ಆರ್.ಎಂ ವೆಂಕಟಸ್ವಾಮಿ, ಗೌರವ ಕೋಶಾಧ್ಯಕ್ಷರಾದ ರತ್ನಪ್ಪ ಮೇಲಾಗಾಣಿ ಉಪಸ್ಥಿತರಿದ್ದರು.