ಕೋಲಾರ ಜಿಲ್ಲಾಧ್ಯಂತ ಕೆರೆಗಳಲ್ಲಿರುವ ಜಾಲಿ ಮತ್ತು ನೀಲಗಿರಿಯನ್ನು ತೆರವಿಗೆ- ಚೆಕ್ ಡ್ಯಾಂಮ್‍ಗಳಲ್ಲಿ ಆಗಿರುವ ಹಗರಣಗಳ ತನಿಖೆಕೆಗೆ ರೈತಸಂಘದಿಂದ ಒತ್ತಾಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಕೋಲಾರ ಜಿಲ್ಲಾಧ್ಯಂತ ಕೆರೆಗಳಲ್ಲಿರುವ ಜಾಲಿ ಮತ್ತು ನೀಲಗಿರಿಯನ್ನು ತೆರವಿಗೆ- ಚೆಕ್ ಡ್ಯಾಂಮ್‍ಗಳಲ್ಲಿ ಆಗಿರುವ ಹಗರಣಗಳ ತನಿಖೆಕೆಗೆ ರೈತಸಂಘದಿಂದ ಒತ್ತಾಯ

 

ಕೋಲಾರ ಅ-30 ಜಿಲ್ಲಾಧ್ಯಂತ ಕೆರೆಗಳಲ್ಲಿರುವ ಜಾಲಿ ಮತ್ತು ನೀಲಗಿರಿಯನ್ನು ತೆರವುಗೊಳಿಸಿ ಚೆಕ್ ಡ್ಯಾಂಮ್‍ಗಳಲ್ಲಿ ಆಗಿರುವ ಹಗರಣಗಳನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ರೈತಸಂಘದಿಂದ ನೀಲಗಿರಿ ಮತ್ತು ಜಾಲಿ ಗಿಡಗಳ ಸಮೇತ ಸಣ್ಣ ನೀರಾವರಿ ಇಲಾಖೆ ಮುಂದೆ ಹೋರಾಟ ಮಾಡಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಇಂಜಿನಿಯರ್ ಆನಂದ್‍ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ನಾರಾಯಣಗೌಡ ರಾಜ್ಯದಲ್ಲಿಯೇ ಅತೀ ಹೆಚ್ಚು ಕೆರೆಗಳು ಹೊಂದಿ ಕೆರೆಗಳ ರವರು ಎಂದೇ ಹೆಸರು ಪಡೆದಿರುವ ಜಿಲ್ಲೆಯಲ್ಲಿ 2800 ಕೆರೆಗಳಿದ್ದು ಇಂದು ಆ ಕೆರೆಗಳನ್ನು ಕಳೆದು ಹೋಗಿವೆ ಹುಡುಕಿಕೊಡಿ ಎಂದು ಸಂಬಂದಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕಾದ ಪರಿಸ್ಥಿತಿ ಬಂದಿದೆ. ಸಂಬಂದಪಟ್ಟ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಇದ್ದು ಇಲ್ಲದಂತಾಗಿದ್ದಾರೆ. ಕೆರೆಗಳು ಸಂಪೂರ್ಣವಾಗಿ ಜಾಲಿ ಹಾಗೂ ನೀಲಗಿರಿಯಿಂದ ತುಂಬಿ ಹಾಳಾಗುವ ಜೊತೆಗೆ ಸಂಪೂರ್ಣವಾಗಿ ಒತ್ತುವರಿಯಿಂದ ಕೆರೆಗಳ ಚಿತ್ರಣವೇ ಬದಲಾಗಿದ್ದರೂ ಅದನ್ನು ರಕ್ಷಣೆ ಮಾಡಬೇಕಾದ ಅದಿಕಾರಿಗಳು ಸರ್ಕಾರದಿಂದ ಬರುವ ಕೋಟ್ಯಾಂತರ ರೂಪಾಯಿ ಅಭಿವೃದ್ದಿ ಹಣವನ್ನು ಟೆಂಡರ್‍ದಾರರು ಮತ್ತು ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಹಗಲು ದರೋಡೆ ಮಾಡುತ್ತಿರುವ ಜೊತೆಗೆ ಕೆರೆಗಳನ್ನು ರಕ್ಷಣೆ ಮಾಡದ ಜಿಲ್ಲಾಡಳಿತ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.


ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಪೂರ್ವಜರು ದೇವರಂತೆ ಕೆರೆಗಳನ್ನು ದೇವಾಲಯಗಳಂತೆ ಕಾಪಾಡಿಕೊಂಡು ಬಂದಿದ್ದಂತಹ ಕೆರೆಗಳು ಇಂದು ಜನರ ದುರಾಸೆ ಹಾಗೂ ಆಧುನಿಕತೆ ಜೀವನಕ್ಕೆ ಬಲಿಯಾಗಿ ಮುಂದಿನ ಪೀಳಿಗೆಗೆ ಕೋಲಾರ ಜಿಲ್ಲೆಯಲ್ಲಿ ಕೆರೆಗಳು ಈ ರೀತಿ ಇದ್ದವು ಎಂದು ಛಾಯಾಚಿತ್ರದ ಮುಖಾಂತರ ತೋರಿಸುವ ಪರಿಸ್ಥಿತಿ ಬರುತ್ತದೆ. ಸುರಿಯುತ್ತಿರುವ ಅಲ್ಪ ಸ್ವಲ್ಪ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಅಭಿವೃದ್ದಿ ಪಡಿಸಲು ಸರ್ಕಾರ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಚೆಕ್‍ಡ್ಯಾಂಗಳ ನಿರ್ಮಾಣಕ್ಕೆ ಬಿಡುಗಡೆ ಮಾಡುತ್ತಿದ್ದರೆ ಅದರಲ್ಲೂ ಟೆಂಡರ್‍ದಾರರು ನಿರ್ಮಿಸುತ್ತಿರುವ ಚೆಕ್‍ಡ್ಯಾಂಗಳ ಕಾಮಗಾರಿ ಸಂಪೂರ್ಣವಾಗಿ ಕಳಪೆಗುಣಮಟ್ಟದಿಂದ ಕೂಡಿರುವ ಜೊತೆಗೆ ಅವಶ್ಯಕತೆ ಇಲ್ಲದ ಸ್ಥಳಗಳಲ್ಲಿ ಬೇಕಾಬಿಟ್ಟಿ ಚೆಕ್‍ಡ್ಯಾಂಗಳನ್ನು ನಿರ್ಮಾಣ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಅವರ ಬಿಲ್ಲುಗಳಿಗೆ ಸಹಿಗಳನ್ನು ಮಾಡಿ ಅದರಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದರು ಸಂಬಂದಪಟ್ಟ ಅಧಿಕಾರಿಗಳು ಮೌನವಾಗಿದ್ದಾರೆ ಹಿರಿಯ ಅಧಿಕಾರಿಗಳಿಗೆ ಕೆರೆಗಳನ್ನು ಹಾಗೂ ಜಿಲ್ಲೆಯ ಅಂರ್ಜಲವನ್ನು ಕಾಪಾಡಲು ಮನಸ್ಸಿದ್ದರೆ ಜಿಲ್ಲೆಯ ಜೀವನಾಡಿಯಾಗಿರುವ ಕೆರೆಗಳನ್ನು ಅಭಿವೃದ್ದಿ ಪಡಿಸುವ ಜೊತೆಗೆ ಜಾಲಿ ಹಾಗೂ ನೀಲಗಿರಿ ಮರಗಳನ್ನು ತೆರವುಗೊಳಿಸಬೇಕು ಹಾಗೂ ಚೆಕ್‍ಡ್ಯಾಂಗಳಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಿ ಟೆಂಡರ್‍ದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇಂಜಿನಿಯರ್ ಆನಂದ್‍ರವರು ಕೆರಗಳಲ್ಲಿನ ಜಾಲಿ ಹಾಗೂ ನೀಲಗಿರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸರ್ಕಾರದ ಅನುದಾನ ಬಂದಿರುವುದು ನಿಜ ಆದರ ಹಿಂದೆ ಇದ್ದ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಬಳಸದೇ ಭ್ರಷ್ಟಾಚಾರ ಎಸಗಿರುವವರ ವಿರುದ್ದ ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಅದರ ಜೊತೆಗೆ ಚೆಕ್ ಡ್ಯಾಂಗಳ ಅವ್ಯವಹಾರವನ್ನು ಸೂಕ್ತಅಧಿಕಾರಿಗಳಿಂದ ತನಿಖೆ ನಡೆಸಿ ಟೆಂಡರ್ ದಾರರು ಮತ್ತು ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ , ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಪುತ್ತೇರಿ ರಾಜು , ಮುದುವಾಡಿ ಚಂದ್ರಪ್ಪ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಸುಪ್ರೀಮ್ ಚಲ , ಮೀಸೆ ವೆಂಕಟೇಶಪ್ಪ, ಸಹದೇವಣ್ಣ, ಮುಂತಾದವರಿದ್ದರು.