ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ – ಗುಣಮಟ್ಟದ ಔಷದಿಯನ್ನು ಉಚಿತವಾಗಿ ನೀಡಿ ರೈತಸಂಘದಿಂದ ತೋಟಗಾರಿಕೆ ಇಲಾಖೆಯ ಮುಂದೆ ಹೋರಾಟ.
ಕೋಲಾರ: ಜಡಿ ಮಳೆಯಿಂದ ಟೋಮೊಟೋ ಮತ್ತು ಆಲೂಗಡ್ಡೆ ಬೆಳೆಯನ್ನು ಕಾಡುತ್ತಿರುವ ಅಂಗಮಾರಿ ರೋಗಕ್ಕೆ ಗುಣಮಟ್ಟದ ಔಷದಿಯನ್ನು ಉಚಿತವಾಗಿ ನೀಡಿ, ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಬೇಕೆಂದು ರೈತಸಂಘದಿಂದ ರೋಗದ ಬೆಳೆ ಸಮೇತ ತೋಟಗಾರಿಕೆ ಇಲಾಖೆಯ ಮುಂದೆ ಹೋರಾಟ ಮಾಡಿ ಒತ್ತಾಯಿಸಿಲಾಯಿತು. ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಹೆಚ್ಚಾಗಿ ಅಂಗಮಾರಿ ರೋಗ ಬರುತ್ತಿದ್ದರೂ ಆ ರೋಗಕ್ಕೆ ಗುಣಮಟ್ಟದ ಔಷದಿ ನೀಡುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆ ಒಂದು ಕಡೆ ಊಜಿ ನೊಣದಿಂದ ತತ್ತರಿಸಿದ್ದ ರೈತರಿಗೆ ಜಿಲ್ಲಾದ್ಯಾಂತ ಇತ್ತೀಚೆಗೆ ಸುರಿಯುತ್ತಿರುವ ಜಡಿ ಮಳೆಯಿಂದ ಟೊಮೋಟೋ ಮತ್ತು ಆಲೂಗಡ್ಡೆ ಬೆಳೆಗಳಿಗೆ ಪ್ರತಿ ವರ್ಷ ಕಾಡುವ ಅಂಗಮಾರಿ ರೋಗಕ್ಕೆ ಗುಣಮಟ್ಟದ ಔಷದಿಯನ್ನು ನೀಡಲು ಸಂಬಂಧಪಟ್ಟ ಇಲಾಖೆಗಳು ವಿಪಲವಾಗುತ್ತಿವೆ.
ಸಮೃದ್ದವಾಗಿ ಬಂದಿದ್ದ ಟೊಮೋಟೊ ಬೆಳೆಗೆ ಇತ್ತಿಚೆಗೆ ರೈತರನ್ನು ನಿದ್ದೆಗೆಡಿಸಿದ್ದ ಊಜಿ ನೊಣದಿಂದ ತತ್ತರಿಸಿ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ಖಾಸಗಿ ಸಾಲಕ್ಕೆ ಸಿಲುಕಿ ಒದ್ದಾಡಿ ಮತ್ತೆ ಚಲ ಬಿಡದೆ ಬೆಳೆದ ಆಲೂಗಡ್ಡೆ ಮತ್ತು ಟೊಮೋಟೊಗೆ ಅಂಗಮಾರಿ ರೋಗ ನೋಡಿ ಔಷದಿಗಾಗಿ ಮನೆಯಲ್ಲಿನ ಹೆಂಡತಿ ಮಕ್ಕಳ ಒಡವೆಗಳನ್ನು ಗಿರವಿ ಅಂಗಡಿಗಳಲ್ಲಿ ಅಡವಿಟ್ಟು, ಔಷದಿ ಅಂಗಡಿಗಳಿಗೆ ಸುರಿಯುತ್ತಿದ್ದರೂ ಗುಣಮಟ್ಟದ ಔಷಧಿ ಇಲ್ಲದೆ, ರೋಗ ನಿಯಂತ್ರಣಕ್ಕೆ ಬಾರದೆ ರೈತರು ತತ್ತರಿಸುತ್ತಿದ್ದರೂ ಇಲಾಖೆಯ ಅಧಿಕಾರಿಗಳು ನೆಪ ಮಾತ್ರಕ್ಕೆ ಅಂಗಮಾರಿ ರೋಗಕ್ಕೆ ಔಷದಿಗಳು ಸಬ್ಸಿಡಿ ದರದಲ್ಲಿ ದೊರೆಯುತ್ತವೆಂದು ಪತ್ರಿಕಾ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.
ಪತ್ರಿಕಾ ಹೇಳಿಕೆ ನೋಡಿ ಸಂಬಂಧಪಟ್ಟ ಇಲಾಖೆಯ ಬಳಿ ಹೋದರೆ ಅಧಿಕಾರಿಗಳೇ ನಾಪತ್ತೆಯ ಜೊತೆಗೆ ಯಾವುದೇ ಔಷದಿಯಿಲ್ಲ ನಿಮಗೆ ಬೇಕಾದರೆ ಸರ್ಕಾರದಿಂದ ತರಿಸಿಕೊಡುತ್ತೇವೆ. ಬುಕ್ ಮಾಡಿ ಎಂದು ಬೇಜವಬ್ದಾರಿಯಿಂದ ಹೇಳುವ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಪ್ರತಿ ವರ್ಷ ಈ ರೋಗ ಬರುತ್ತಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಔಷದಿಗಳು ನೀಡಲು ನಮಗೆ ಅನುಧಾನದ ಕೊರತೆ ಇದೆ. ಅನುಧಾನ ಬಂದರೆ ತರಿಸಿ ಕೊಡುತ್ತೇವೆಂದು ಬೇಜವಬ್ದಾರಿಯಿಂದ ಹೇಳುವ ಜೊತೆಗೆ ಇನ್ನೂ ಈ ರೋಗವನ್ನೇ ಬಂಡವಾಳವಾಗಿಸಿಕೊಳ್ಳುವ ಔಷಧಿ ಅಂಗಡಿ ಮಾಲೀಕರು ರೈತರ ಅಮಾಯಕತನವನ್ನು ಉಪಯೋಗಿಸಿಕೊಂಡು ಅವರಿಗೆ ಇಷ್ಟ ಬಂದ ಹತ್ತಾರು ಔಷದಿಗಳನ್ನು ನೀಡಿ ಆ ಔಷದಿಗಳನ್ನು ಹತ್ತಾರು ಬಾರಿ ಸಿಂಪರಣೆ ಮಾಡಿದರು ರೋಗ ನಿಯಂತ್ರಣಕ್ಕೆ ಬಾರದೆ ಅಂಗಡಿ ಮಾಲೀಕರು ರೈತರ ಮರಣ ಶಾಸನ ಬರೆಯುತ್ತಿದ್ದರೂ ಇದರ ಬಗ್ಗೆ ಕ್ರಮ ಕೈಗೊಳ್ಳದ ರೋಗಕ್ಕೆ ಉತ್ತಮ ಔಷದಿ ನೀಡಿ ರೈತರಿಗೆ ಜಾಗೃತಿ ಮೂಡಿಸದ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿಯಿದ್ದರೆ ಅಂಗಮಾರಿ ರೋಗಕ್ಕೆ ಬೇಕಾಗುವ ಔಷದಿಗಳನ್ನು ಸರ್ಕಾರದಿಂದ ಉಚಿತವಾಗಿ ತರಿಸಿಕೊಟ್ಟು ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ಜೊತೆಗೆ ಎಲ್ಲಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಈ ರೋಗದ ಬಗ್ಗೆ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಬೇಕು ಹಾಗೂ ರೋಗದಿಂದ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ನೊಂದ ರೈತರ ಪರವಾಗಿ ಅಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ನಿರ್ದೇಶಕರಾದ ಶಿವಾರೆಡ್ಡಿರವರು ಟೋಮೊಟೋ ಮತ್ತು ಅಲೂಗಡ್ಡೆ ಬೆಳೆಗೆ ಬಂದಿರುವ ಅಂಗಮಾರಿ ರೋಗಕ್ಕೆ ಇಲಾಖೆಯಿಂದ ಔಷದಿಗಳನ್ನು ನೀಡಲು ಅನುಧಾನದ ಕೊರತೆಯಿದೆ ಅನುಧಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಈ ರೋಗದ ಬಗ್ಗೆ ಕರ ಪತ್ರದ ಮುಖಾಂತರ ರೈತರಿಗೆ ಜಾಗೃತಿ ಮೂಡಿಸಿ, ಪರಿಹಾರದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಿಳಿಸುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ತೆರ್ನಹಳ್ಳಿ ಆಂಜಿನಪ್ಪ, ಸಹದೇವಪ್ಪ, ನಿರಂಜನ್, ಕಿಶೋರ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮೀಸೆ ವೆಂಕಟೇಶಪ್ಪ, ಈಕಂಬಳ್ಳಿ ಮಂಜುನಾಥ್, ಕೇಶವ, ಮಂಜುನಾಥ್, ರಮೇಶ್, ಸುಪ್ರೀಂಚಲ, ಸುಧಾಕರ್, ನವೀನ್, .ಶಿವು, ಅನಿಲ್‍ಕುಮಾರ್, ಅಕ್ಷಯ್, ಪುನಿತ್, ರೆಡ್ಡಿ ಮುಂತಾದವರಿದ್ದರು.