ಕೋಲಾರ: ಕಾಡುಪ್ರಾಣಿಗಳು ಹಾವಳಿಗೆ ಶಾಶ್ವತ ಪರಿಹಾರ ಬೇಕು ರೈತ ಸಂಘ  

ವರದಿ:ಶಬ್ಬೀರ್ ಅಹ್ಮದ್

ಕೋಲಾರ: ಕಾಡುಪ್ರಾಣಿಗಳು ಹಾವಳಿಗೆ ಶಾಶ್ವತ ಪರಿಹಾರ ಬೇಕು ರೈತ ಸಂಘ  

ಕೋಲಾರ,ಮೇ.04: ಕಾಡುಪ್ರಾಣಿಗಳು ಹಾವಳಿಗೆ ಶಾಶ್ವತ ಪರಿಹಾರ ಹುಡಕಬೇಕು ಹಾಗೂ ಬೆಳೆ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಅರಣ್ಯ ಇಲಾಖೆ ಮ್ಯಾನೇಜರ್ ಪುರುಷೋತ್ತಮ್‍ರವರಿಗೆ ಮನವಿ ನೀಡಿ ಅಗ್ರಹಿಸಲಾಯಿತು.

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒಂದು ಕಡೆ ಬೀಕರವಾದ ಬರಗಾಲ ಮತ್ತೊಂದೆಡೆ ಆಲಿಕಲ್ಲು ಮಳೆ ಮತ್ತು ಬಿರುಗಾಳಿಗೆ ಬೆಳೆ ನಾಶವಾಗಿ ಸಂಕಷ್ಟದಲ್ಲಿರುವ ರೈತರಿಗೆ ಕಾಡು ಪ್ರಾಣಿಗಳ ಹಾವಳಿಗೆ ಇರುವ ಬೆಳೆಗಳು ಸಂಪೂರ್ಣವಾಗಿ ನಾಶವಾಗಿ ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದರೂ ಸರ್ಕಾರಗಳ ನಿರ್ಲಕ್ಷೆಯಿಂದ ಕೃಷಿ ಕ್ಷೇತ್ರ ದೀನೇ ದೀನೇ ಅವನತಿಯತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ಮನುಷ್ಯನ ದುರಾಸೆಗೆ ದಿನೇ ದಿನೇ ಪರಿಸರ ನಾಶವಾಗುತ್ತಿದೆ. ಒಂದು ಕಡೆ ಪರಿಸರ ನಾಶವಾದರೆ, ಮತ್ತೊಂದು ಕಡೆ ಕಾಡುಗಳಲ್ಲಿದ್ದ ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ರೈತರ ಬೆಳೆಗಳತ್ತ ಮುಖ ಮಾಡುತ್ತಿವೆ. ಬೀಕರವಾದ ಬರಗಾಲದ ಜೊತೆಗೆ ಮಳೆ ಇಲ್ಲದೆ ತತ್ತರಿಸಿ ಖಾಸಗಿ ಸಾಲಾ ಮಾಡಿ ಕೊಳವೆ ಬಾವಿಯನ್ನು ಕೊರೆಸಿ ತನ್ನ ಸ್ವಾಬಿಮಾನದ ಬದುಕಿಗಾಗಿ ರೈತ ಕಷ್ಟಾಪಟ್ಟು ಬೆಳೆದಂತಹ ಬೆಳೆ ಇಂದು ತಮ್ಮ ಕಣ್ಣುಮುಂದೆಯೇ ಕೈಗೆ ಬಂದ ಬೆಳೆ ಕಾಡುಪ್ರಾಣಿಗಳ ಹಾವಳಿಗೆ ನಾಶವಾಗುತ್ತಿದೆ. ಆದರೆ ಕಾಡುಪ್ರಾಣಿಗಳ ಸಮಸ್ಯೆ ಒಂದು ದಿನದ ಸಮಸ್ಯೆಯಲ್ಲ ಸುಮಾರು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಸರ್ಕಾರದಿಂದ ಅರಣ್ಯ ಸಂರಕ್ಷಣೆಗೆ ಮತ್ತು ಕಾಡು ಪ್ರಾಣಿಗಳ ಹಾವಳಿಗೆ ಕೋಟ್ಯಾಂತರ ಹಣ ಬಿಡುಗಡೆಯಾಗುತ್ತಿದೆ. ಆದರೆ ಇದುವರೆವಿಗೂ ಶಾಶ್ವತವಾದ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿರುವುದಕ್ಕೆ ಕಾರಣ ತಿಳಿಯದೆ ರೈತರು ಆಕ್ರೋಷವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದಡೆ ಹೋದಪುಟ್ಟ ಬಂದಪುಟ್ಟ ಎಂಬಂತೆ ನಾಶವಾದ ರೈತರ ಬೆಳೆಗಳಿಗೆ ಸೂಕ್ತವಾದ ಪರಿಹಾರವನ್ನು ಸಹ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬೆಳೆ ಸಮೀಕ್ಷೆ ಮಾಡದೆ ಪರಿಹಾರವನ್ನು ಸಹ ನೀಡುತ್ತಿಲ್ಲ. ಸರ್ಕಾರದಿಂದ 5 ಲಕ್ಷ ಮಂಜೂರಾದರೆ ರೈತರಿಗೆ 2ಲಕ್ಷ ಕೊಟ್ಟ ಕೈ ತೊಳೆದುಕೊಳ್ಳುತ್ತಿದ್ದಾರೆ. ಬರಗಾಲದಲ್ಲಿ ಕಷ್ಟಾಪಟ್ಟು ಬೆಳೆದ ಬೆಳೆಗಳಿಗೆ ಇಂದು ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಇದ್ದರೂ ಅದಕ್ಕೆತಕ್ಕಂತೆ ಪರಿಹಾರ ನೀಡುತ್ತಿಲ್ಲ. ಸಂಬಂದಪಟ್ಟ ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿಯಿದ್ದರೆ ಕೂಡಲೇ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಜೊತೆಗೆ ತೀವ್ರವಾದ ಬರಗಾಲದಲ್ಲಿ ನಾಶವಾಗಿರುವ ರೈತರ ಬೆಳೆಗಳಿಗೆ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡಬೇಕೆಂದು ಅಗ್ರಹಿಸಿದರು.
ಮನವಿ ಸ್ವೀಕರಿಸಿದ ಪುರುಷೋತ್ತಮ್‍ರವರು ಮಾತನಾಡಿ ನಿಮ್ಮ ಈ ಮನವಿಯನ್ನು ಮೇಲಾಧಿಕಾರಿಗಳಿಗೆ ತಲುಪಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಿ ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ. ನಳಿನಿಗೌಡ, ಪವಿತ್ರ, ಕೆಂಬೋಡಿ ಕೃಷ್ಣೇಗೌಡ, ನರಸಾಪುರ ಪುರುಷೋತ್ತಮ್, ಈಕಾಂಬಳ್ಳಿ ಮಂಜು, ಹೊಸಹಳ್ಳಿ ಚಂದ್ರಪ್ಪ, ಮುಂತಾದವರಿದ್ದರು.