ಕೋಲಾರ  ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಟಮಕ ನಮ್ಮ ಸಂಸ್ಥೆಯು ಜಿಲ್ಲಾ ಆರೋಗ್ಯ ಪ್ರಾಧಿಕಾರ ಸಹಕಾರದೊಂದಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆ :ದೇವರಾಜ್‍ಅರಸ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಕೋಲಾರ  ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಟಮಕ ನಮ್ಮ ಸಂಸ್ಥೆಯು ಜಿಲ್ಲಾ ಆರೋಗ್ಯ ಪ್ರಾಧಿಕಾರ ಸಹಕಾರದೊಂದಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆ :ದೇವರಾಜ್‍ಅರಸ್ 

 

 

 

 

ಕೋಲಾರ : ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಟಮಕ ನಮ್ಮ ಸಂಸ್ಥೆಯು ಜಿಲ್ಲಾ ಆರೋಗ್ಯ ಪ್ರಾಧಿಕಾರ ಸಹಕಾರದೊಂದಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಸಕ್ರಿಯವಾಗಿ ಸಲ್ಲಿಸುವುದರ ಜೊತೆಗೆ ಅಗತ್ಯವುಳ್ಳ ಎಲ್ಲಾತುರ್ತು ಪರಿಸ್ಥಿಗಳನ್ನು ನಿಬಾಯಿಸುವಲ್ಲಿ ಮುಂಚೂಣಿಯಲ್ಲಿರುತ್ತದೆ. ಇದರಡಿಯಲ್ಲಿಎಲ್ಲಾ ರೀತಿಯ ತೀವ್ರ ಉಸಿರಾಟದ ಕಾಯಿಲೆಯ ರೋಗಿಗಳಿಗೆ (sssSಂಖI) ವಿಶೇಷ ತಜ್ಞರಿಂದ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತಿರುತ್ತೆ.
ಇತ್ತೀಚೆಗೆ ನಮ್ಮ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದ ಕೋವಿಡ್-19 ಸೋಂಕಿನ ಇಬ್ಬರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಅವರನ್ನು ಸಂರ್ಪೂಣವಾಗಿ ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದು ಸದರಿ ರೋಗಿಗಳನ್ನು ದಿನಾಂಕ:03.06.2020 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆಂದು ತಿಳಿಸಲು ಸಂತೋಷವಾಗಿರುತ್ತೆ.

ಇದರೊಂದಿಗೆ ಮತ್ತೊಂದು ಕೋವಿಡ್-19 ಧನಾತ್ಮಕ ರೋಗಿಯು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯವೂ ಸಹ ಸುಧಾರಿಸುತ್ತಿದೆ.ನಮ್ಮ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಕೆಯ ಮೂರು ಪ್ರತ್ಯೆಕ ಕೋಣೆಗಳಿದ್ದು ಇದರೊಂದಿಗೆ ಋಣಾತ್ಮಕ ಒತ್ತಡದ ವಿಧಾನದೊಂದಿಗೆ ತೀವ್ರ ಸ್ವರೂಪದ ಖಾಯಿಲೆಯ ರೋಗಿಗಳಿಗೆ ದಿನನಿತ್ಯ ಚಿಕಿತ್ಸಾ ವ್ಯವಸ್ಥೆಯನ್ನು ಹಲವಾರು ತಿಂಗಳುಗಳಿಂದ ಮಾಡಿಕೊಂಡು ಬರಲಾಗುತ್ತಿರುತ್ತೆ. ಇದರೊಂದಿಗೆ ತೀವ್ರ ಉಸಿರಾಟದ ತೊಂದರೆಯಿಂದ (sssSಂಖI) ನರಳುತ್ತಿರುವ ರೋಗಿಗಳಿಗೆ ಅಗತ್ಯವುಳ್ಳ ಆಮ್ಲಜನಕ ಮತ್ತು ಇತರೆಯ ಸೌಲಭ್ಯಗಳೊಂದಿಗೆ ಪ್ರತ್ಯೇಕವಾದ ವಾರ್ಡಗಳನ್ನು ನಿಗದಿಪಡಿಸಲಾಗಿರುತ್ತದೆ. ಜೊತೆಗೆ ವಯಸ್ಕರಿಗೆ ಮೂರು ಪ್ರತ್ಯೇಕ ಕೊಠಡಿಗಳು ಮತ್ತು ಮಕ್ಕಳಿಗೆ ನಾಲ್ಕು ಪ್ರತ್ಯೇಕ ಸುಸಜ್ಜಿತ ಕೊಠಡಿಗಳ ವ್ಯವಸ್ಥೆಯನ್ನು ಮಾಡಲಾಗಿರುತ್ತೆ. ಇದರೊಂದಿಗೆ ಆಸ್ಪತ್ರೆಯ ನಾಲ್ಕನೆ ಮಹಡಿಯಲ್ಲಿರುವ ಸಂಪೂರ್ಣ ಒಳರೋಗಿಯ ವಿಭಾಗವನ್ನು ಕೋಲಾರ ಜಿಲ್ಲೆಯ ಹೆಚ್ಚುವರಿ ಶಂಕಿತ ಕೋವಿಡ್-19 ಸೊಂಕಿನ ರೋಗಿಗಳ ದಿಗ್ಭಂದನಕ್ಕಾಗಿ ಕಾದಿರಿಸಲಾಗಿದೆ. ನಮ್ಮಲ್ಲಿ ವೈಧ್ಯಕೀಯ ತಜ್ಞರು, ಮಕ್ಕಳ ತಙ್ಞರು, ಶ್ವಾಶಕೋಶ ಕಾಯಿಲೆಗಳ ಚಿಕಿತ್ಸಾತಜ್ಞರು, ತೀವ್ರನಿಘಾ ಚಿಕಿತ್ಸಾ ತಜ್ಞರು, ಕಿವಿ, ಮೂಗು ಮತ್ತು ಗಂಟಲು ತಜ್ಞರು, ನುರಿತ ಶುಶ್ರೂಷಕರು ಮತ್ತು ಸ್ವಚ್ಚತಾ ಸಿಬ್ಬಂದಿಯ ತಂಡವಿದ್ದು ಅವರೆಲ್ಲರೂ ಸದಾ ತೀವ್ರ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಚಿಕಿತ್ಸಾ ಸೇವೆಯಲ್ಲಿ ತೊಡಗಿರುತ್ತಾರೆ. ನಮ್ಮಆಸ್ಪತ್ರೆಯು ಎನ್.ಎ.ಬಿ.ಎಲ್ ಮಾನ್ಯತೆಯ ಅಡಿಯಲ್ಲಿ ಕೋವಿಡ್-19 ಮತ್ತು ಎಚ್1 ಎನ್1 ತಪಾಸಣೆ ಮಾಡಿ ಆರಂಭದಲ್ಲೆ ಖಾಯಿಲೆಯ ಸೋಂಕನ್ನು ಗುರ್ತಿಸಿ ಸೂಕ್ತ ಚಿಕಿತ್ಸೆ ನೀಡಲು ಆರ್.ಟಿ.-ಪಿಸಿಅರ್ ಪರೀಕ್ಷೆಯ ಕೇಂದ್ರವೊಂದನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆಯೆಂದು ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈಧ್ಯಕೀಯ ಅಧೀಕ್ಷಕರು ಹಾಗೂ ಶ್ರೀ ದೇವರಾಜ್‍ಅರಸ್ ವೈದ್ಯಕೀಯ ಉನ್ನತ ಮಹಾ ವಿಧ್ಯಾಲಯದ ಪ್ರಾಂಶುಪಾಲರು ತಿಳಿಸಿರುತ್ತಾರೆ.