ಕೋಲಾರ:ವಿದೇಶಿ ಅಧ್ಯಯನ ತಂಡದಿಂದ ಸೀಸಂದ್ರದ ಪಾಲಿ ಹೌಸ್ ವೀಕ್ಷಣೆ

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

ಕೋಲಾರ:ವಿದೇಶಿ ಅಧ್ಯಯನ ತಂಡದಿಂದ ಸೀಸಂದ್ರದ ಪಾಲಿ ಹೌಸ್ ವೀಕ್ಷಣೆ

ಕೋಲಾರ: ಆ್ಯಪ್ರೋ ಏಷಿಯನ್ ಮತ್ತು ಲ್ಯಾಟಿನ್ ಅಮೇರಿಕಾದ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ 28 ಅಧಿಕಾರಿಗಳು ಕೋಲಾರ ಜಿಲ್ಲೆಯ  ಸೀಸಂದ್ರ ಗ್ರಾಮದ  ರೈತ ನಾರಾಯಣಪ್ಪ ನವರ ಪಾಲಿ ಹೌಸ್‍ಗೆ ಭೇಟಿ ನೀಡಿದರು.  

ರೈತ ನಾರಾಯಣ್ಪನವರು ವಿದೇಶಿ ಅಧ್ಯಯನ ತಂಡಕ್ಕೆ ಮಾಹಿತಿ ನೀಡುತ್ತಾ, ಈ ಸೌತೆಕಾಯಿಯು ಯೂರೋಪಿಯನ್ ತಳಿಗೆ ಸೇರಿದ್ದು, ಇದನ್ನು ಎಪಿಎಂಸಿ ಮೂಲಕ ಮಾರಾಟ ಮಾಡಲಾಗುವುದು. ದೊಡ್ಡ ದೊಡ್ಡ ಪಂಚತಾರಾ ಹೋಟೆಲ್‍ಗಳಲ್ಲಿ ಇದನ್ನು ಬಳಸುತ್ತಾರೆ. ಈ ಬೆಳೆಯನ್ನು ಬೆಳೆಯುವುದರಿಂದ ಉತ್ತಮವಾದ ಆದಾಯ ಗಳಿಸಬಹುದು ಎಂದ ಅವರು ತಮ್ಮ ಪಾಲಿಹೌಸ್ 4000 ಚದರ ಮೀಟರ್‍ನಲ್ಲಿ ಬೆಳೆದಿದ್ದ ಸೌತೆಕಾಯಿ ಹಾಗೂ ಬೂದುಗುಂಬಳ ಬೆಳೆಯ  ಸಂಬಂಧಪಟ್ಟ ತಂತ್ರಜ್ಞಾನದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. 

ಇದರ ಬಗ್ಗೆ ಆ್ಯಪ್ರೋ ಏಷಿಯನ್ ಮತ್ತು ಲ್ಯಾಟಿನ್ ಅಮೇರಿಕಾದ ಗ್ರಾಮೀಣ ಅಭಿವೃದ್ಧಿ ತಂಡವು ಮೆಚ್ಚುಗೆ ವ್ಯಕ್ತಪಡಿಸಿತು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ ಎಸ್ ವೆಂಕಟೇಶ್. ಉಪಕಾರ್ಯದರ್ಶಿಗಳಾದ ಸಂಜೀವಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.