ಕೋಲಾರದ 400 ಮಂದಿ ತ್ರಿಲಿಂಗಿ ಸಮುದಾಯದವರಿಗೆ ಬೆಂಗಳೂರು ಯು.ಎಸ್.ಟಿ ಗ್ಲೋಬಲ್ ಕಂಪನಿಯಿಂದ ಆಹಾರದ ಕಿಟ್ ವಿತರಣೆ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ಸಾಮಾಜಿಕ ಹೊಣೆಗಾರಿಕೆ ಸೇವಾ ಅಡಿಯಲ್ಲಿ ಬೆಂಗಳೂರಿನ ಯು.ಎಸ್.ಟಿ ಗ್ಲೋಬಲ್ ಕಂಪನಿ ವತಿಯಿಂದ ಕೋಲಾರದ 400 ಮಂದಿ ತ್ರಿಲಿಂಗಿ ಸಮುದಾಯದವರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.
ಕೊರೊನ ಸಂಕಷ್ಟದಲ್ಲಿ ಸುಮಾರು ಆರು ತಿಂಗಳಿನಿಂದ ಜೀವನೋಪಾಯಕ್ಕಾಗಿ ಪರಿತಪ್ಪಿಸುತ್ತಿದ್ದ ಈ ನಿರ್ಲಕ್ಷಿತ ಸಮುದಾಯದ ಬವಣೆಯನ್ನು ಅರಿತ ಯು.ಎಸ್.ಟಿ. ಗ್ಲೋಬಿಲ್ ಐ.ಟಿಕಂಪನಿಯು, ಈ ರೀತಿ ಸಹಾಯ ಹಸ್ತ ಚಾಚುವ ಮೂಲಕ ಒಂದು ತಿಂಗಳಿಗಾಗುವಷ್ಟು ವಿವಿಧ ಪದಾರ್ಥಗಳ ದಿನಸಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಯು.ಎಸ್.ಟಿ.ಗ್ಲೋಬಲ್ ಕಂಪನಿಯ ಸಿ.ಎಸ್.ಆರ್. ವಿಭಾಗದ ಸ್ಮಿತ, ಲತಾ,ವಿಶ್ವಾಸ್,ಅರವಿಂದ್,ಶಿವಕುಮಾರ್ ಹಾಗೂ ಸಂಗಮ ಮತ್ತು ಸಮ್ಮಿಲನ ಸಂಸ್ಥೆಯ ಪ್ರತಿನಿಧಿ ಅಶ್ವಿನಿ ರಾಜನ್ ಹಾಜರಿದ್ದರು.