ಕೋಲಾರದಲ್ಲಿ ಮರಕ್ಕೆ ವಿಷವಿಟ್ಟುಕೊಲ್ಲುವ ಪ್ರಯತ್ನದ ಪ್ರಕರಣ ವರ್ಷವಾಗಿದ್ದರೂ, ಎಫ್.ಐ.ಆರ್ ದಾಖಲಿಸುವ ಶಾಸ್ತ್ರ ಮಾತ್ರ ಇನ್ನಾವುದೇ ಕ್ರಮಗೊಳ್ಳದಿರುವುದು ಅರಣ್ಯ ಇಲಾಖೆಯ ನಿರ್ಲಕ್ಷ್ಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

 

ಕೋಲಾರದಲ್ಲಿ ಮರಕ್ಕೆ ವಿಷವಿಟ್ಟುಕೊಲ್ಲುವ ಪ್ರಯತ್ನದ ಪ್ರಕರಣ ವರ್ಷವಾಗಿದ್ದರೂ, ಎಫ್.ಐ.ಆರ್ ದಾಖಲಿಸುವ ಶಾಸ್ತ್ರ ಮಾತ್ರ ಇನ್ನಾವುದೇ ಕ್ರಮಗೊಳ್ಳದಿರುವುದು ಅರಣ್ಯ ಇಲಾಖೆಯ ನಿರ್ಲಕ್ಷ್ಯ

 

 

ಕೋಲಾರ:ನಗರದಲ್ಲಿ ನಡೆದಿದ್ದ ಮರಕ್ಕೆ ವಿಷವಿಟ್ಟುಕೊಲ್ಲುವ ಪ್ರಯತ್ನದ ಪ್ರಕರಣಕ್ಕೆ ಇದೀಗ ಒಂದು ವರ್ಷವಾಗಿದ್ದರೂ, ಎಫ್.ಐ.ಆರ್ ದಾಖಲಿಸುವ ಶಾಸ್ತ್ರಆಗಿದ್ದು ಬಿಟ್ಟರೆ, ಬೇರೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಕಾರ್ಯ ಆಗದಿರುವುದು ಅರಣ್ಯ ಇಲಾಖೆಯ ನಿರ್ಲಕ್ಷ್ಯಎದ್ದುಕಾಣುತ್ತಿದೆ.

ನಗರದ ಗೌರಿಪೇಟೆಯ 5 ನೇ ರಸ್ತೆಯಲ್ಲಿರುವ ಗುಲ್‍ಮೋಹೋರ್ ಮರದ ಬುಡಕ್ಕೆ ರಾಸಾಯನಿಕ-ವಿಷ ಪ್ರಾಶಾನ ಮಾಡುವ ಮೂಲಕ ಮರಗಳನ್ನು ಒಣಗುವಂತೆ ಮಾಡಿ ನಾಶಪಡಿಸುವ ಹೀನಾಯ ಕೃತ್ಯ ನಡೆದಿತ್ತು.
ಮರದ ಎಲೆಗಳು ಉದುರಿ ಕಸವಾಗುತ್ತದೆ ಎಂಬುವುದಕ್ಕೊ? ಇಲ್ಲವೇ ತಮ್ಮ ಮನೆಯ ಕೃತಕ ಅಲಂಕಾರಕ್ಕೆ ಅಡ್ಡಿಯಾಗುತ್ತದೊ? ಎಂಬ ಕಾರಣಕ್ಕೊ ತಿಳಿಯದಾಗಿದೆ. ಇಲ್ಲಿನ ಮರದ ಬುಡದಲ್ಲಿ ಗಡಾರಿ ಮೂಲಕ ರಂದ್ರಗಳನ್ನು ಮಾಡಿ ಅದರಲ್ಲಿ ಕಳೆನಾಶಕ ವಿಷಮಿಶ್ರಿತ ರಾಸಾಯನಿಕ ಹಾಗೂ ಇದರೊಂದಿU ÉರಾಸಾಯನಿP Àಗೊಬ್ಬರವಾದ ಅತಿಹೆಚ್ಚು ಯೂರಿಯ ಮಿಶ್ರಿತ ನೀರನ್ನು ರಂದ್ರಗಳು ಹಾಗೂ ಬುಡದಲ್ಲಿ ಹಾಕಲಾಗಿತ್ತು.
ವಿಷಮಿಶ್ರಿತ ಕಳೆನಾಶಕ ರಾಸಾಯನಿಕ ಹಾಗೂ ಯೂರಿಯ ಮಿಶ್ರಿತ ದ್ರಾವಣವನ್ನು ಮರದ ಬೇರುಗಳು ಸಹಜವಾಗಿಯೆ ಹೀರಿಸಿ ಕೊಳ್ಳುವುದರಿಂದ, ಮರಕ್ಕೆ ರಾಸಾಯನಿಕ ಹರಡಿ ಮರದ ಜೀವಂತಿಕೆಯನ್ನು ಹಾಳುಮಾಡುವ ಮೂಲಕ ಮರ ಬಾಡಿಒಣಗುವಂತೆ ಮಾಡಲಾಗಿತ್ತು.
ಮರಕ್ಕೆ ವಿಷವಿಟ್ಟ ಪ್ರಕರಣ ಪತ್ರಿಕೆಗಳಲ್ಲಿ ಚಿತ್ರ ಸಮೇತ ಸುದ್ದಿ ಬಂದಾಗ, ಅರಣ್ಯಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದ ಮೇರೆಗೆ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಲೋಕೇಶ್‍ಅವರು ಸ್ಥಳಕ್ಕೆ ಆಗಮಿಸಿ, ಮರದ ಬುಡ ಪರಿಶೀಲಿಸಿ ಮಹಜರು ಮಾಡಿಕೊಂಡ ವರದಿಯಂತೆ ಎಫ್.ಐ.ಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಒಂದುಕಾರ್ಯಆಗಿದ್ದು ಬಿಟ್ಟರೆ ಹೀಗೆ ಒಂದು ವರ್ಷವಾದರೂ ಸಹ ಆರೋಪಿಯ ವಿಚಾರಣೆ, ವಶ, ದಂಡ, ಗಿಡಗಳನ್ನು ನೆಡಿಸುವ ಇಲ್ಲವೇÀ ಇಲಾಖೆಯ ಅಧಿಕಾರದ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಯಾವುದೇರೀತಿಯ, ಕ್ರಮಗಳನ್ನು ಕೈಗೊಳ್ಳದಿರುವುದು ಅಧಿಕಾರಿಗಳ ಬೇಜಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಬಗ್ಗೆ ವಿಚಾರಿಸಲು ಉಪ ಅರಣ್ಯ ಸಂರಕ್ಷಕ (ಡಿ.ಸಿ.ಎಫ್) ಚಕ್ರಪಾಣಿ, ವಲಯ ಅರಣ್ಯ ಸಂರಕ್ಷಕ ಸುರೇಶ್‍ಬಾಬು ಅವರಿಂದ ಸಮರ್ಪಕ ಉತ್ತರ ಹಾಗೂ ಸೂಕ್ತಕ್ರಮದ ಬಗ್ಗೆ ಮಾಹಿತಿ ಸಿಗಲಿಲ್ಲ. ಇನ್ನಾದರೂ ಪ್ರಕರಣದ ಮುಂದಿನ ಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳುತ್ತಾರೋ…? ಇಲ್ಲವೇ ಕೈ ಬಿಡುತ್ತಾರೋ…? ಕಾದು ನೋಡಬೇಕಿದೆ.