ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಕೋಲಾರದಲ್ಲಿ ಕೊರೆಂಗಾವ್ ವಿಜಯೋತ್ಸವ ಆಚರಣೆ
ಕೋಲಾರ : ಸ್ವಾಬಿಮಾನಕ್ಕಾಗಿ ಅಸಮಾನತೆಯ ವಿರುದ್ಧ ದಂಗೆ ಎದ್ದಂತಹ ಕೊರೆಗಾಂವ್ ಯುದ್ದ 500 ಜನ ಮಹರ್ ಸೈನಿಕರು ಹಾಗೂ 30,000 ಪೇಶ್ವೆಗಳ ನಡುವೆ ನಡೆದಂತಹ ಮೊದಲ ಸಿಪಾಯಿ ದಂಗೆ ಎಂತಲೇ ಹೇಳಬಹುದಾದ ಈ ವಿಜಯೋತ್ಸವ ನೆನಪಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಸಿ. ವಿಭಾಗದ ಅಧ್ಯಕ್ಷ ಜಯದೇವ್ ತಿಳಿಸಿದರು.
ಜನವರಿ 1ರಂದು ಕೋಲಾರ ನಗರದ ನಚಿಕೇತನ ನಿಲಯದಲ್ಲಿ 202 ನೇ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಪ್ರಯುಕ್ತ ಯುವಸೇನೆ ಕರುನಾಡು ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ದೇಶಕ್ಕಾಗಿ ಹೋರಾಟ ಮಾಡಿ ನಿವೃತ್ತಿ ಹೊಂದಿದ ವೀರ ಯೋಧರಿಗೆ ಬಾಬಾಸಾಹೇಬ್ ಅಂಬೇಡ್ಕರ್ ರವರ ಪುತ್ತಳಿ ಮುಂದೆ ಸನ್ಮಾನಿಸಿದ ಸಂದರ್ಭದಲಿ ಮಾತನಾಡಿದರು.
ಕೊರೆಗಾಂವ್ ಯುದ್ದದಲ್ಲಿ ಮಡಿದ 23 ಜನ ಮಹಾರ್ ಸೈನಿಕರಿಗೆ 3 ನಿಮಿಷ ಮೌನಾಚರಣೆಯನ್ನು ಮಾಡಿದ ಸಂದರ್ಭದಲ್ಲಿ ಮಾಜಿ ಸೈನಿಕರಾದ ಗಾಂಧಿನಗರ ವೆಂಕಟೇಶ್, ಆಪರೇಷನ್ ವಿಜಯ್ ಮಿಡಲಿಸ್ಟ್ ಕಾರ್ಕಿಲ್ ಆರ್.ಎಂ.ರಾಮಯ್ಯ, ಇನ್ಸ್‍ಪೆಕ್ಟರ್ ಇಬ್ರಾಹಿಂ ಖಾನ್, ಕೃಷ್ಣಪ್ಪ, ರಾಮು ರವರುಗಳನ್ನು ಸನ್ಮಾಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಗಣೇಶ್, ಡಿ.ಎಸ್.ಎಸ್.ರಾಜಕುಮಾರ್, ಯುವಸೇನೆ ಕರುನಾಡು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಚಿನ್ನಾಪುರ ಅನಿಲ್ ಕುಮಾರ್, ರಾಜ್ಯಾಧ್ಯಕ್ಷ ಯುವಸೇನೆ ಕಲ್ಯಾಣ್ ಕುಮಾರ್, ರಾಜ್ಯ ಉಪಾಧ್ಯಕ್ಷ ಗಾಂದೀನಗರ್ ಪ್ರದೀಪ್, ತಾಲ್ಲೂಕು ಅಧ್ಯಕ್ಷರಾದ ಈ ಕಂಬಳ್ಳಿ ಮಂಜುನಾಥ, ವೇಮಗಲ್ ಹೋಬಳಿ ಘಟಕದ ಅಧ್ಯಕ್ಷ ಅನಂತ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವರಾಜ್ ಹಾಗೂ ಸಂಘಟನೆಯ ಮುಖಂಡರು ಹಾಜರಿದ್ದರು.