ಕೊಲಾರದಲ್ಲಿ ರೈತ ಹುತಾತ್ಮ ದಿನಾಚರಣೆಯ ಪ್ರಯುಕ್ತ ತಹಶೀಲ್ದಾರ್ ಕಚೇರಿ ಮುಂದೆ ಉಚಿತ ತರಕಾರಿ ಹಂಚಿ ಹೋರಾಟದ ದಿನ ಆಚರಿಸಿ ರೈತ ವಿರೋದಿ ಕಾಯ್ದೆಗಳನ್ನು ಕೈಬಿಡಬೇಕೆಂದು ರೈತ ಸಂಘದಿಂದ ಆಗ್ರಹ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ ,ಜು.21: 40 ನೇ ರೈತ ಹುತಾತ್ಮ ದಿನಾಚರಣೆಯ ಪ್ರಯುಕ್ತ ತಹಶೀಲ್ದಾರ್ ಕಚೇರಿ ಮುಂದೆ ಉಚಿತ ತರಕಾರಿ ಹಂಚುವ ಮುಖಾಂತರ ರೈತ ಸಂಘದಿಂದ ಈ ದಿನವನ್ನು ಹೋರಾಟದ ದಿನವಾಗಿ ಆಚರಣೆ ಮಾಡಿ ರೈತ ವಿರೋದಿ ಕಾಯ್ದೆಗಳನ್ನು ಕೈಬಿಡಬೇಕೆಂದು ಕಂದಾಯ ಮಂತ್ರಿಗಳಿಗೆ ತಹಶೀಲ್ದಾರ್‍ರವರ ಮುಖಾಂತರ ಮನವಿ ನೀಡಿ ಅಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ದೇಶಕ್ಕೆ ಸ್ವಾತಂತ್ಯ ಬಂದು 7 ದಶಕಗಳು ಕಳೆದರೂ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಬೆಳೆಯುವ ಬೆಳೆಗೆ ಬೆಲೆ ನಿಗದಿ ಮಾಡುವ ತಾಕತ್ತು ಬಂದಿಲ್ಲ, ತನ್ನ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ವಿರುದ್ದ ಹೋರಾಟ ಮಾಡಿದರೆ ಗೋಲಿಬಾರ್ ಎಂಬ ಪೋಲಿಸ್ ಅಸ್ತ್ರವನ್ನು ಉಪಯೋಗಿಸುತ್ತಾರೆ. ಈ ದಿನ ರೈತರಿಗೆ ಆತ್ಮ ಸ್ತೈರ್ಯ ಹಾಗೂ ಹೋರಾಟದ ಕಿಚ್ಚು ಹುಟ್ಟಿಸಿದ ದಿನವಾದ 1980ರ ನರಗುಂದ ನವಲಗುಂದ ರೈತ ಬಂಡಾಯವೆದ್ದ ರೈತರ ಮೇಲೆ ಗುಂಡು ಹಾರಿಸಿ 147 ರೈತರನ್ನು ಹುತಾತ್ಮ ಮಾಡಿದ ಸರ್ಕಾರಗಳ ರೈತ ವಿರೋದಿ ದೋರಣೆಗೆ ಇಡೀ ದೇಶವೇ ಬೆಚ್ಚಿಬಿದ್ದಿತು ಅಂದಿನ ಹೋರಾಟವೇ ಇಂದಿಗೂ ರೈತರಿಗೆ ಸ್ಪೂರ್ತಿಯಾಗಿದೆ. ಆಳುವ ಸರ್ಕಾರಗಳು ರೈತರಿಗೆ ಅನುಕೂಲವಾಗುವ ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆ, ನೀಡುವುದನ್ನು ಮರೆತು ರೈತ ವಿರೋದಿ ದೋರಣೆಗಳನ್ನು ಅನುಸರಿಸುತ್ತಿದೆಂದು ರೈತ ವಿರೋದಿ ದೋರಣೆಗಳನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು
ಜಿಲ್ಲಾದ್ಯಕ್ಷೆ ಎ.ನಳಿನಿ ಗೌಡ ಮಾತನಾಡಿ ರಾಜ್ಯದಲ್ಲಿ 87 ಲಕ್ಷ ರೈತ ಕುಟುಂಬಗಳಿವೆ ಸರಾಸರಿ 3 ಎಕರೆ ಜಮೀನನ್ನು ಒಂದು ಕುಟುಂಬ ಹೊಂದಿರಬಹುದು 4 ಕೋಟಿ ರೈತರು ಬೇಸಾಯ ನಡೆಸುತ್ತಿದ್ದಾರೆ. ಇದೀಗ ಇಡೀ ರೈತ ಸಮುದಾಯವನ್ನು ನಾಶ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ರೈತರು ಬೀದಿ ಪಾಲಾಗುವ ಜೊತೆಗೆ ಕಾರ್ಪೋರೇಟ್ ಕಂಪನಿಗಳ ಬಾಗಿಲು ಕಾಯುವ ಸ್ಥಿತಿ ನಿರ್ಮಾಣ ಮಾಡುವ ಜೊತೆಗೆ ಆಹಾರ ಸ್ವಾವಲಂಭನೆ ನಾಶವಾಗಿ ಬಿ.ಜೆ.ಪಿ ಸರ್ಕಾರದ ಆಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳುವ ಕಾಯ್ದೆಯನ್ನು ಜಾರಿಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸುವ ಜೊತೆಗೆ ಸರ್ಕಾರಗಳಿಗೆ ರೈತರ ಮೇಲೆ ಕಾಳಜಿ ಇದ್ದರೆ ಕೂಡಲೇ ಕೃಷಿ ಆದಾರಿತ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತ ವಿರೋದಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಇಲ್ಲವಾದರೆ ಗ್ರಾಮೀಣ ಪ್ರದೇಶದ ಮಟ್ಟದಲ್ಲಿ ರೈತರನ್ನು ಸಂಘಟಿಸಿ ಸರ್ಕಾರದ ವಿರುದ್ದ ಕೃಷಿ ಭೂಮಿ ಉಳಿವಿಗಾಗಿ ಬಾರ್ ಕೋಲ್ ಚಳುವಳಿ ಮಾಡುವ ಎಚ್ಚರಿಕೆಯನ್ನು ನೀಡಿದರು.
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಐ.ಎ.ಎಸ್, ಐಪಿಎಸ್, ಕೆ,ಎ,ಎಸ್, ಈ ಅಧಿಕಾರಿಗಳು ರಾಜಕೀಯ ನಾಯಕರು ಹೇಳಿದಂತೆ ಕೆಲಸ ಮಾಡದೇ ಜನ ಸಾಮಾನ್ಯರ ಕೆಲಸ ಮಾಡಿದರೆ ಆ ಜಿಲ್ಲೆಯ ಜನರು ನೆಮ್ಮದಿಯಿಂದ ಬದುಕುಲು ಸಾಧ್ಯ ರೈತರನ್ನು ಬೀಜ, ಗೊಬ್ಬರ, ಮಾರುಕಟ್ಟೆ,ಸರ್ಕಾರಿ ಕಛೇರಿಗಳಲ್ಲಿ ಶೋಷಣೆ ಸರ್ಕಾರಗಳ ದಿನನಿತ್ಯದ ಕೆಲಸವಾಗಿದೆ. ರೈತರ ಶೋಷಣೆ ಇದೇ ರೀತಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮುಂದುವರೆಸಿದರೆ ಅನ್ನಕ್ಕಾಗಿ ಪರದೇಶಗಳ ಮುಂದೆ ಕೈ ಚಾಚಬೇಕಾಗುತ್ತದೆಂದು ಎಚ್ಚರಿಸಿದರು.

ತಹಶೀಲ್ದಾರ್ ಶೋಬಿತ ಮಾತನಾಡಿ ನವಲಗುಂದದಲ್ಲಿನ ರೈತರ ಕಷ್ಟಗಳನ್ನು ಸ್ವತಂ ನಾನು ತಹಶೀಲ್ದಾರ್ ಆಗಿ ಕೆಲಸ ಮಾಡಬೇಕಾದಾಗ ಕಂಡಿರುವೆ , ಆಗಾಗಿ ನಿಮ್ಮ ನ್ಯಾಯಯುತ ಹೋರಾಟಗಳಾಗಲಿ ನಿಮ್ಮ ಈ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.

ಈ ಹೋರಾಟದಲ್ಲಿ ಬಂಗವಾದಿ ನಾಗರಾಜ್‍ಗೌಡ, ಹುಲ್ಕೂರ್ ಹರಿಕುಮಾರ್, ಈಕಂಬಳ್ಲಿ ಮಂಜುನಾಥ್, ಪಾರುಕ್‍ಪಾಷ, ವಿಜಯಪಾಲ್, ತಿಮ್ಮಣ್ಣ, ನಾಗೇಶ್, ವೆಂಕಟೇಶಪ್ಪ, ವಕ್ಕಲೆರಿ ಹನುಮಯ್ಯ, ನವೀನ್, ಶಿವ ಸುಪ್ರೀಂಚಲ, ವಡ್ಡಹಳ್ಳಿ ಮಂಜುನಾಥ್, ಗಣೇಶ್, ಕ್ಯಾಸಂಬಳ್ಳಿ ಪ್ರತಾಪ್, ಜಗದೀಶ್, ಐತಾಂಡಹಳ್ಳಿ ಅಮರೀಶ್, ಮಂಜುನಾಥ್, ಅನುಶ್ರೀ, ನಳಿನಿ, ಮಂಜುಳಾ, ಕಾವ್ಯಾಂಜಲಿ, ಮೀಸೆ ವೆಂಕಟೇಶಪ್ಪ, ಎಲ್ಲಾ ತಾಲ್ಲೂಕು ಪದಾದಿಕಾರಿಗಳಿದ್ದರು.