ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ಸೆ.13: ಕೊರೊನ ಸಂಕಷ್ಟದಲ್ಲಿ ಸರ್ಕಾರ ಘೋಷಣೆ ಮಾಡಿದ್ದ ಬೆಳೆ ಪರಿಹಾರವನನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಟೊಮೆಟೊ, ಆಲೂಗಡ್ಡೆ ಬೆಳೆ ಬಾದಿಸುವ ಅಂಗಮಾರಿ ಊಜಿ ನೋಣಕ್ಕೆ ಅವಶ್ಯಕತೆಯಿರುವ ಔಷದಿಯನ್ನು ಉಚಿತವಾಗಿ ನೀಡಬೇಕು ಮತ್ತು ಇಲಾಖೆಯಲ್ಲಿ ನಡೆದಿರುವ ಭ್ರಷ್ಟಚಾರದ ಬಗ್ಗೆ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಲು ಒತ್ತಾಯಿಸಿ ಸೆ.14ರಂದು ಜಿಲ್ಲೆಗೆ ಆಗಮಿಸುತ್ತಿರುವ ತೋಟಗಾರಿಗೆ ಸಚಿವರಿಗೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿ ಭಾನುವಾರ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಸಭೆಯಲ್ಲಿ ಸಚಿವರಿಗೆ ಬೆಳೆ ಸಮೇತ ಮುತ್ತಿಗೆ ಹಾಕಲು ನಿರ್ಣಯಕೈಗೊಂಡರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದೇಶ, ರಾಜ್ಯಾದ್ಯಂತ ಕೊರೊನ ಮಹಾಮಾರಿ ಅವರಿಸಿದ್ದರು, ಇದರಿಂದ ಮಾರ್ಚ್ 18ರಿಂದ ಎರಡು ತಿಂಗಳು ಲಾಕ್ಡೌನ್ ಜಾರಿಯಲ್ಲಿತ್ತು, ಈ ಅವದಿಯಲ್ಲಿ ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು, ಇದರಿಂದ ರೈತರು ಬೆಳೆದಿರುವ ಬೆಳಗಳಿಗೆ ಸಮರ್ಪಕವಾದ ಬೆಲೆ ದೊರೆಯಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲಾಕ್ಡೌನ್ ಸಮಯದಲ್ಲಿ ರೈತರು ಟೊಮೆಟೊ, ಕ್ಯಾಪ್ಸಿಕಂ, ಹೂವು, ಹೂಕೋಸು, ಎಲೆ ಕೋಸು, ಬದನೆಕಾಯಿ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದರು, ಇದಕ್ಕೆ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ಬೆಳೆದ ಬೆಳೆಗಳನ್ನು ತೋಟದಲ್ಲಿಯೇ ನಾಶಪಡಿಸಬೇಕಾಯಿತು ಎಂದರು.
ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಬೆಳೆ ನಷ್ಟ ಪರಿಹಾರ ಘೋಣೆ ಮಾಡಿತು, ಕ್ಯಾಪ್ಸಿಂ, ಟೊಮೆಟೊಗೆ ಹೆಕ್ಟೇರ್ಗೆ 18,000, ಹೂವಿಗೆ 25,000 ಹಾಗೂ ಇತರೆ ಬೆಳೆಗಳಿಗೂ ಪರಿಹಾರ ಘೋಷಣೆ ಮಾಡಿತು, ಆದರೆ ಇಲಾಖೆಯ ಅಧಿಕಾರಿಗಳು ನಡೆಸಿದ ಅವೈಜ್ಞಾನಿಕ ಸಮೀಕ್ಷೆಯಿಂದ ರೈತರು ಪರಿಹಾರದಿಂದ ವಚಂನೆಗೆ ಒಳಗಾಗಿದ್ದಾರೆ, ರೈತರಿಗೆ ದೇವರು ವರ ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎಂಬತಾಗಿದೆ, ಇದರಿಂದ ಸಚಿವರು ಇತ್ತ ಗಮನಹರಿಸಿ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಜಾರಿಗೆ ತಂದಿರುವ ಪಾಲಿ ಹೌಸ್ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ, ಈ ಯೋಜನೆಯಡಿ ಸಣ್ಣ ಅಥವಾ ಮಧ್ಯ ವರ್ಗದ ರೈತರು ಅರ್ಜ ಹಾಕಿಕೊಂಡರೆ ಅವರಿಗೆ ಸೌಕರ್ಯ ದೊರೆಯುವುದಿಲ್ಲ, ಇದು ಏನಿದ್ದರೂ ರಾಜಕೀಯ ಮತ್ತು ಶ್ರೀಮಂತರಿಗೆ ದೊರೆಯುತ್ತದೆ, ಸಾಮಾನ್ಯ ರೈತರು ಕೇಳಿದರೆ ಸರ್ಕಾರದಿಂದ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಾರೆ ಜತೆಗೆ ಸಾಲ ನೀಡಬೇಕಾದ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡುವುದಿಲ್ಲ, ಈ ಯೋಜನೆಯಲ್ಲಿ ನಡೆದಿರುವ ಹಗರಣದ ಬಗ್ಗೆ ತನಿಖೆ ನಡೆಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಯಲು ಸೀಮೆಯ ಲಕ್ಷಾಂತರ ಕುಟುಂಬಗ¼ Àಜೀವನಾಡಿಯಾಗಿರುವ ರೇಷ್ಮೆ ಉದ್ಯಮ ಕೊರೊನ ವೈರಸ್ನಿಂದ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಡಾ.ಬಸವರಾಜನ್ ವರದಿ ಜಾರಿ ಮಾಡಿ ಕೆಸಿಎಂಬಿ ಸಂಸ್ಥೆಯನ್ನು ಪುನಶ್ಚೇತನಗೊಳಿ ಪ್ರತಿ ಕೆಜಿ ಗೂಡಿಗೆ ಸರಾಸರಿ 400ರೂಪಾಯಿ ಬೆಲೆ ನಿಗಧಿ ಮಾಡುವ ಜೊತೆಗೆ ಪ್ರೋತ್ಸಾಹ ಧನ ಪ್ರತಿಕೆಜಿಗೆ ತಾರತಮ್ಯವಿಲ್ಲದೆ 100ರೂಪಾಯಿ ನಿಗಧಿ ಮಾಡಿ ಮಾರುಕಟ್ಟೆಯಲ್ಲಿ ಹಣವನ್ನು ವಿತರಣೆ ಮಾಡಲು ಅವಕಾಶ ಮಾಡಿಕೊಟ್ಟು ಸಂಕಷ್ಟದಲ್ಲಿರುವ ಬೆಳೆಗಾರರ ರಕ್ಷಣೆಗೆ ಸರ್ಕಾರ ನಿಲ್ಲಬೇಕು ಎಂದರು.
ಜಿಲ್ಲೆಯಾದ್ಯಂತ ರೈತರು ಆಲೂಗಡ್ಡೆ, ಟೊಮೆಟೊ ಬೆಳೆ ನಾಟಿ ಮಾಡಿದ್ದು, ಸತತವಾಗಿ ಸುರಿಯುತ್ತಿರುವ ಜಡಿಮಳೆಯಿಂದ ಕೈಗೆ ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿರುವ ಟೊಮೆಟೊ ಆಲೂಗಡ್ಡೆಗೆ ಬೆಳೆಗೆ ಊಜಿ ಮತ್ತು ಆಂಗಮಾರಿ ರೋಗ ಹರಡುತ್ತಿದೆ, ಇದರ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಸರಿಯಾದ ರೀತಿಯಲ್ಲಿ ನಿಯಂತ್ರಣಕ್ಕೆ ಔಷದಿ ನೀಡುತ್ತಿಲ್ಲ, ಇದರಿಂದ ರೈತರು ಖಾಸಗಿ ಅಂಗಡಿಗಳಲ್ಲಿ ಲಕ್ಷಾಂತರ ಔಷದಿ ತಂದು ಸಿಂಪಡಿಸಿದರು ಉತ್ತಮ ಇಳುವರಿ ಬರುತ್ತಿಲ್ಲ, ಸರ್ಕಾರವೇ ಈ ರೋಗಗಳನ್ನು ನಿಯಂತ್ರಿಸಲು ರೈತರಿಗೆ ಉಚಿತವಾಗಿ ಔಷದಿಗಳನ್ನು ವಿತರಣೆ ಮಾಡುವ ಮೂಲಕ ಸಂಕಷ್ಟದಿಂದ ಪಾರು ಮಾಡಲು ಸಚಿವರ ಗಮನಕ್ಕೆ ತರಲು ಮುತ್ತಿಗೆ ಹಾಕಬೇಕಾದ ಅನಿವಾರ್ಯ ಇದೆ, ಈ ಸಂದರ್ಭದಲ್ಲಿ ರೈತರು ಹೆಚ್ಚಿನ ಸಂಖ್ಯೆಲ್ಲಿ ಸೇರಬೇಕು ಎಂದು ಕೋರಿದರು.
ಸಭೆಯಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಎ.ನಳಿನಿ ಕೋಲಾರ ತಾಲ್ಲೂಕು ಅಧ್ಯಕ್ಷ ಈಕ್ಕಂಬಳ್ಳಿ ಮಂಜುನಾಥ್, ಶ್ರೀ ತಾ.ಅ ತೆರನಹಳ್ಳಿ ಆಂಜಿನಪ್ಪ, ಮು ತಾ.ಅ ಪಾರುಕ್ಪಾಷ, ಕೆ ತಾ ಅ ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ಮಾ ತಾ ಅ ಹೊಸಹಳ್ಳಿ ವೆಂಟಕೇಶ್, ಚಂದ್ರಪ್ಪ, ರಾಮಣ್ಣ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ವಕ್ಕಲೇರಿ ಹನುಮಯ್ಯ, ಶಾಂತಮ್ಮ, ಲೋಕೇಶ್, ನಾಲ್ಲಂಡಹಳ್ಳಿ ಕೇಶವ, ಮಣಿ, ಐತಾಂಡಹಳ್ಳಿ ಮಂಜುನಾಥ್, ಚಲ, ಶಿವು ಇತರರು ಹಾಜರಿದ್ದರು.