ಕೊರೊನಾ ತನ್ನ ಬಾಹುಗಳನ್ನು ವಿಸ್ತರಿಸುತ್ತಾ ಇದೆ. ಉಡುಪಿಯಲ್ಲಿ ಮೊದಲ ಸೊಂಕು ಪೀಡಿತ ಧ್ರಡ: ಕುಂದಾಪುರದಲ್ಲಿ ಇವತ್ತಿನ ಲಾಖ್ ಡೌನ್ ಚಿತ್ರಣ

JANANUDI.COM NETWORK

 

 

ಕೊರೊನಾ ತನ್ನ ಬಾಹುಗಳನ್ನು ವಿಸ್ತರಿಸುತ್ತಾ ಇದೆ. ಉಡುಪಿಯಲ್ಲಿ ಮೊದಲ ಸೊಂಕು ಪೀಡಿತ ಧ್ರಡ: ಕುಂದಾಪುರದಲ್ಲಿ ಇವತ್ತಿನ ಲಾಖ್ ಡೌನ್ ಚಿತ್ರಣ

 

 

ಕುಂದಾಪುರ, ಮಾ.25: ಕೊರೊನಾ ವೈರಸ್ ಪ್ರಪಂಚಾದ್ಯಂತ ತನ್ನ ಕರಾಳು ಭಾಹುಗಳಿಂದ ಚಾಚುತಿರುವಾಗ ಉಡುಪಿಯಲ್ಲಿ ಒಬ್ಬರಿಗೆ ಕೊರೊನಾ ಸೊಂಕು ಧ್ರಡ ಪಟ್ಟಿದ್ದು, ಜಿಲ್ಲೆಯ ಬಾಗಿಲೊಳಗೆ ಕೊರೊನಾ ಬಂದು ಮುಟ್ಟಿದೆ.
ತಜ್ಞರು ಕೊರೊನಾ ವೈರಸ್ ಅಷ್ಟೊಂದು ಮಾರಕವಲ್ಲಾ, ಅದನ್ನು ಗುಣ ಪಡಿಸಲಿಕ್ಕೆ ಸಾಧ್ಯವಿದೆಯೆಂದು ಹೇಳುತಿದ್ದಾರೆ. ಆದರೆ ಇದು ಹರಡಿದರೆ ನಮ್ಮಲ್ಲಿ ಆಸ್ಪತ್ರೆಗಳಲ್ಲಿ, ಬೆಡ್ಡುಗಳು, ವೆಂಟಿಲೇಟರ್ ಇನ್ನಿತರ ಉಪಕರಣ ಕೊರತೆ, ಇದ್ದುದರಿಂದ ತಡೆ ಕಟ್ಟುವುದೆ ಪ್ರಮುಖವಾಗಿ ಕಂಡು ಇಡೀ ದೇಶವನ್ನೆ ಲಾಖ್ ಡೌನ್ ಮಾಡಾಲಾಗಿದೆ.

 

 

ಲಾಖ್ ಡೌನ್ ಪರಿಣಾಮ ಕುಂದಾಪುರದಲ್ಲಿ ಇಂದು ಎಲ್ಲಾ ಅಂಗಡಿ ಮಾಲ್ ಗಳು, ಮೀನು ಪೇಟೆ, ಮಟನ್, ಚಿಕ್ಕನ್ ಶಾಪ್ ಗಳು ಮುಚ್ಚಿದ್ದವು. ತರಕಾರಿ ಅಂಗಡಿಗಳು, ಗ್ರೋಸರಿ ಅಂಗಡಿಗಳು, ಮೆಡಿಕಲ್ ಸ್ಟೋರ್ಗಳು ಮಾತ್ರ ತೆರಿದಿದ್ದವು. ಅವು ತೆರ್ದಿದ್ದರೂ ಎಲ್ಲಾ ಅಂಗಡಿಗಳ ಮೇಲೆ ಸುಣ್ಣದಿಂದ ಮಾಡಿದ ಗೇರೆಗಳಲ್ಲಿ ನಿಂತು ಸಾಮಾನು ಸರಾಂಜಾಮು ಖರೀದಿಸ ಬೇಕಿತ್ತು. ಸುಣ್ಣದ ಗೇರೆಗಳ ಬಾಕ್ಸ್ ಇಲ್ಲದ ಅಂಗಡಿಗಳನ್ನು ಪೊಲೀಸರು ಮುಚ್ಚುವಂತೆ ಗದರಿಸಿವುದು ಕಂಡು ಬಂತು.
ಈ ಲಾಖ್ ಡೌನ್ ಮಾಡಿದರೂ ಕೆಲವರು ಅರ್ಥ ಮಾಡಿಕೊಳ್ಳದೆ ರಸ್ತೆಯಲ್ಲಿ ವಾಹನ ಸಂಚಾರ ಮಾಡಿ ಪೊಲೀಸರಿಗೆ ಸಿಟ್ಟು ನೆತ್ತಿಗೆರುವಂತೆ ಮಾಡುತಿದ್ದಾರೆ, ರಸ್ತೆಯಲ್ಲಿ ಸಂಚರಿಸುವ ಕಾರು, ಬಾಯ್ಕ್ ಸ್ಕೂಟರಗಳನ್ನು ತಡೆದು ಯಾವ ಕಾರಣಕ್ಕೆ ತಿರುಗುತಿದ್ದಿರಿ ಎಂದು ಸಂಚಾರಿ ಪೊಲೀಸರು ವಿಚಾರಿಸಿ ತಮ್ಮ ಕರ್ತವ್ಯವನ್ನು ಮಾಡುವುದು ನೋಡಲಾಯಿತು. ಲೀಸ್ ಹೊಯ್ಸಳ ವಾಹನ ನಗರದಲ್ಲಿ ಗಸ್ತು ತಿರುಗಾಡುತಿದ್ದು. ಅಲ್ಲಲ್ಲಿ  ಪೊಲೀ ಸರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿದ್ದರು. ಇದೀಗ ಬಂದ ಸುದ್ದಿಯಂತೆ ಕುಂದಾಪುರದಲ್ಲಿಯೂ ಅನಾವಶ್ಯಕವಾಗಿ ತಿರುಗಾಡುತಿದ್ದವರಿಗೆ ಶಾಸ್ತ್ರಿ ಪಾರ್ಕ್ ಸರ್ಕಲನಲ್ಲಿ ಬೆತ್ತದ ರುಚಿಯನ್ನು ತೋರಿಸಲು ಆರಂಭಿಸಿದ್ದಾರೆ. ಇಂತಹ ಒಂದು ವೀಡಿಯೊ ವೈರಲ್ ಆಗಿದೆ. ಹಾಗಾಗಿ ಜನರು ಅವಶ್ಯಕತೆ ಇಲ್ಲದೆ ಸಂಚರಿಸುವುದು, ವಾಹನ ಚಲಾವಣೆ ಮಾಡುವುದನ್ನು ನಿಲ್ಲಿಸ ಬೇಕು

ಲಾಖ್ ಡೌನ್ ಸಂದರ್ಭದಲ್ಲಿ  ಅನಿಯಂತ್ರಿತ ಸಂಚಾರ ವಾಹನ ಸಂಚಾರ ಆಗುವಾಗ ಪೊಲೀಸರಿಗೂ ತೊಂದರೆ, ಜನರಿಗೂ ತೊಂದರೆ, ಅದಕ್ಕಾಗಿ  ಕುಟುಂಬದ ಒಬ್ಬರಿಗೆ ಅಗತ್ಯ ಸಾಮಾನು, ಒಷಧಿ ತರಲಿಕ್ಕಾಗಿ ಪುರಸಭೆಯಿಂದ ಪಾಸು ನೀಡಬೇಕು, ಆ ಪಾಸು ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಬೇಕು.  ಪಾಸು ಕೊಡುವುದು, ಪಡೆಯುವುದು ಕಷ್ಟವೆ ಆಗಿದೆ.ಇಲ್ಲಾ  ಖರೀಧಿಗೆ ಒಂದು ಸಮಯ ನಿಗಧಿ ಮಾಡಬೇಕು. ಈ ಬಗ್ಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಪುರಸಭೆ ಸೇರಿ ಎನಾದರೂ ಮಾಡುವುದು ಒಳಿತು, ಮತ್ತು ಅವಶ್ಯವಾಗಿದೆ.