ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ ಅಕ್ಟೋಬರ್ 15 : ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಕಾಯಿಲೆಗಳು ಹರಡುವುದಿಲ್ಲ ನಿಯಂತ್ರಿಸಬಹುದು ಎಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ವಿ ಹರೀಶ್ ತಿಳಿಸಿದರು .
ಜಿಲ್ಲಾ ಹಾಲು ಒಕ್ಕೂಟ ವತಿಯಿಂದ ಇಂದು ಏರ್ಪಡಿಸಿದ್ದ ವಿಶ್ವ ಕೈ ತೊಳೆಯುವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು .
ಇದರಿಂದ ಜನರಿಗೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಸಂದರ್ಭದಲ್ಲಿ ಇರುವ ಸರ್ಕಾರದ ಎಲ್ಲ ಸೂಚನೆಗಳನ್ನು ಅನುಸರಿಸುವುದರಿಂದ ಮತ್ತು ಕಡ್ಡಾಯವಾಗಿ ಕೈ ತೊಳೆಯುವುದರಿಂದ ಕೋವಿಡ್ ನಿಯಂತ್ರಿಸಬಹುದು ಎಂದರು ..
ಸಸಿಗಳಿಗೆ ನೀರುಣಿಸಿ ಕೋಮಲ್ ವ್ಯವಸ್ಥಾಪಕ ನಿರ್ದೇಶಕ ಡಾ ಕೆ ವಿ ತಿಪ್ಪಾರೆಡ್ಡಿ ಮಾತನಾಡಿ ಕೈ ತೊಳೆದು ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಕ್ರಿಮಿಗಳು ಸೇರಿಕೊಂಡು ಆರೋಗ್ಯ ಕೆಡುತ್ತದೆ ಅಶುದ್ಧವಾದ ನೀರು ಸೇವನೆಯಿಂದ ಕಾಮಾಲೆ ಹಾಗೂ ಇತರೆ ರೋಗಗಳು ಬಾಧಿಸುತ್ತವೆ ಎಂದರು .
ವಡಗೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸಿ ಆರ್ ಅಶೋಕ್ ಮಾತನಾಡಿ ಅಶುದ್ಧ ನೀರು ಸೇವನೆಯಿಂದ ವಿಷಮಶೀತ ಜ್ವರ ಕಾಲರಾ ಇತರೆ ಸೊಂಕುಗಳು ಜನರನ್ನು ಬಾಧಿಸುತ್ತಿವೆ .ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಅನೇಕ ರೋಗಗಳಿಂದ ದೂರವಿರಬಹುದು ಎಂದರು .
ತಂತ್ರ ಶಿಕ್ಷಣ ಸಂಯೋಜಕ ಆರ್ ಶ್ರೀನಿವಾಸನ್ . ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್. ಪಂಚಾಯಿತಿಯ ಚಲಪತಿ.ನಾಗೇಶ್. ರವಿ .ಕೆಎಂಎಫ್ ನ ರೂಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು