ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಕೃಷಿಕರು ಕಂದಾಯ ಇಲಾಖೆಯ ವಿಶೇಷ ಪವತಿ ವಾರಸ್ಸು ಖಾತೆ ಆಂದೋಲನದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಿರಸ್ತೇದಾರ್ ಬಿ.ಆರ್.ಮುನಿವೆಂಕಟಪ್ಪ ಹೇಳಿದರು.
ತಾಲ್ಲೂಕಿನ ಹೆಬ್ಬಟ ಗ್ರಾಮದದಲ್ಲಿ ಕಂದಾಯ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪವತಿ ವಾರಸ್ಸು ಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ಸೇವೆಯನ್ನು ರೈತರ ಮನೆ ಬಾಗಿಲಿಗೆ ಒದಗಿಸುವ ದೃಷ್ಟಿಯಿಂದ ಈ ಆಂದೋಲನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಮಾತನಾಡಿ, ಪವತಿ ವಾರಸ್ಸು ಖಾತೆ ಮಾಡಿಸಿಕೊಂಡಲ್ಲಿ ಹೆಚ್ಚು ಪ್ರಯೋಜನವಾಗುತ್ತದೆ. ಅದಕ್ಕೆ ಪೂರಕವಾಗಿ ಪವತಿಯಾದ ವ್ಯಕ್ತಿಯ ಮರಣ ಪತ್ರ, ಖಾತೆಗೆ ಸಂಬಂಧಿಸಿದ ಜಮೀನಿನ ಪಹಣಿ, ವಂಶವೃಕ್ಷ ಮತ್ತಿರ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಅರ್ಹ ವ್ಯಕ್ತಿಗಳು ಪವತಿ ವಾರಸ್ಸು ಖಾತೆ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಪರಿಶೀಲನೆ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೈತರ ಹಿತ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ನಿಗದಿತ ಸ್ಥಳ ಹಾಗೂ ದಿನಾಂಕಗಳಂದು ಪವತಿ ವಾರಸ್ಸು ಖಾತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಆಯಾ ದಿನಾಂಕಗಳಂದು ಸಮಯಕ್ಕೆ ಸರಿಯಾಗಿ ಹಾಜರಿದ್ದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ 16 ರೈತರು ಪವತಿ ವಾರಸ್ಸು ಖಾತೆ ಮಾಡಿಕೊಂಡುವಂತೆ ಕೋರಿ ಅರ್ಜಿ ಸಲ್ಲಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳಾದ ಸಲೀಂ, ಪವಿತ್ರ ಇದ್ದರು.