ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ: ಡೇವಿಡ್ ಸಿಕ್ವೇರಾ,ಜಾಕ್ಸನ್ ಡಿ ಸೋಜಾ ಅವರಿಗೆ ಸನ್ಮಾನ

JANANUDI.COM NETWORK 

 

ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ: ಡೇವಿಡ್ ಸಿಕ್ವೇರಾ,ಜಾಕ್ಸನ್ ಡಿ ಸೋಜಾ ಅವರಿಗೆ ಸನ್ಮಾನ

 

ಕುಂದಾಪುರ : ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಉತ್ಸಾಹದಲ್ಲಿ ಕ್ರೀಡೆಯಲ್ಲಿ ಭಾಗವಹಿಸಬೇಕು. ಜೀವನದಲ್ಲಿ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ತುಂಬಾ ಸಹಕಾರಿ. ಸ್ಪರ್ಧೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸೈಂಟ್ ಮೇರಿಸ್ ಶಾಲಾ ಹಳೆ ವಿದ್ಯಾರ್ಥಿ ಡೇವಿಡ್ ಸಿಕ್ವೇರಾ ಹೇಳಿದರು.
ಅವರು ಶುಕ್ರವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ಕುಂದಾಪುರ ಸೈಂಟ್ ಮೇರಿಸ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾಧ್ವಜ ಅರಳಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ,ಕುAದಾಪುರ ವಲಯದ ಪ್ರಧಾನ ಧರ್ಮಗುರು ವಂದನೀಯ ಫಾ.ಸ್ಟಾö್ಯನ್ಲಿ ತಾವ್ರೊ ವಹಿಸಿ, ವಿದ್ಯಾರ್ಥಿಗಳ ಪಥಸಂಚಲನೆಯ ಗೌರವ ವಂದನೆ ಸ್ವೀಕರಿಸಿದರು. ಶಾಲಾ ಹಳೆ ವಿದ್ಯಾರ್ಥಿ,ಅಂತರ್‌ರಾಷ್ಟಿçÃಯ ಮಟ್ಟದ ಪವರ್ ಲಿಪ್ಟರ್ ಜಾಕ್ಸನ್ ಡಿ ಸೋಜಾ ಕ್ರೀಡಾಜ್ಯೋತಿಯನ್ನು ಬೆಳೆಗಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೇಜಾ ಶಾಂತಿ,ಹೋಲಿ ರೋಜರಿ ಪ್ಲೇ ಸ್ಕೂಲ್‌ನ ಮುಖ್ಯ ಶಿಕ್ಷಕಿ ಶೈಲಾ ಲೂಯಿಸ್ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಸುಹಾನ್‌ಪ್ರತಿಜ್ಞಾವಿಧಿ ಭೋದಿಸಿದನು.
ಇದೇ ಸಂದರ್ಭದಲ್ಲಿ ವಿದ್ಯಾಸಂಸ್ಥೆಗಳ ವತಿಯಿಂದ ಡೇವಿಡ್ ಸಿಕ್ವೇರಾ,ಜಾಕ್ಸನ್ ಡಿ ಸೋಜಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೈಂಟ್ ಮೇರಿಸ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಸ್ವಾಗತಿಸಿದರು.ಸೈಂಟ್ ಮೇರಿಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೊರೊತಿ ಸುವಾರಿಸ್ ವಂದಿಸಿದರು.ಶಿಕ್ಷಕ ಭಾಸ್ಕರ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.ಕ್ರೀಡಾಕೂಟದ ನಿರ್ವಹಣೆಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಬೀಜಾಡಿ, ಶಾಂತಿ ಬರೆಟ್ಟೋ ನಿರ್ವಹಿಸಿದರು.