ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿಯ ಅರಿವು

JANANUDI NETWORK

 

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿಯ ಅರಿವು


ಕುಂದಾಪುರ: ಇಲ್ಲಿನ ಸೈಂಟ್ ಮೇರಿಸ್ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ಚುನಾವಣಾ ಆಯೋಗದ ನಿಯಮದಂತೆ ಶಾಲಾ ವಿದ್ಯಾರ್ಥಿ ಸರಕಾರದ ಚುನಾವಣೆ ನಡೆದಿದ್ದು,ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಮತದಾನದ ಅನುಭವ ಪಡೆದುಕೊಂಡರು.
ಶನಿವಾರ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ,ಮತಗಟ್ಟೆಯ ಅಧಿಕಾರಿಗಳ ಜತೆಗೆ ಎನ್‍ಸಿಸಿ ಕೆಡೆಟ್‍ಗಳ ಪೋಲಿಸ್ ಬಂದೋಬಸ್ತ್ ಮಾಡಿ ಮಾತನಾನ ನಡೆಸಿರುವುದು ವಿಶೇಷತೆಯಾಗಿದೆ.
ನಾಮಪತ್ರ ಸಲ್ಲಿಕೆ, ಪರಿಶೀಲತೆ, ಹಿಂತೆಗೆತದ ಬಳಿಕ ವಿದ್ಯಾರ್ಥಿ ನಾಯಕರ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಗಡಿಯಾರ,ಕೊಡೆ, ಉಪನಾಯಕನ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸೈಕಲ್, ಟಿವಿ, ರಿಕ್ಷಾ ಚಿಹ್ನೆ ನೀಡಿಲಾಯಿತು. ಅಭ್ಯರ್ಥಿಗಳ ಬಗ್ಗೆ ಸಹಮತ ಇಲ್ಲದಿದ್ದರೆ ನೋಟಾಕ್ಕೂ ಸಹ ಅವಕಾಶ ಕಲ್ಪಿಸಲಾಗಿತ್ತು. ಚುನಾವಣೆ ಆರಂಭಗೊಂಡ ಬಳಿಕ ರೋಲ್ ನಂಬರ್ ಪ್ರಕಾರ ಮತದಾನ ಮಾಡಿದ ವಿದ್ಯಾರ್ಥಿಗಳಿಗೆ ಬಲಗೈ ತೋರು ಬೆರಳಿಗೆ ಶಾಯಿಯಿಂದ ಗುರುತು ಹಾಕಿಸಿಕೊಂಡು,ಗೌಪ್ಯವಾಗಿ ಬೇಕಾದ ಅಭ್ಯರ್ಥಿಗಳಿಗೆ ಮತ ಹಾಕುವ ಅವಕಾಶ ನೀಡಲಾಗಿತ್ತು.ಮತದಾನ ಮುಗಿದ ತಕ್ಷಣ ಎಲ್ಲಾ ವಿದ್ಯಾರ್ಥಿಗಳ ಎದುರು ಮತ ಎಣಿಕೆ ಮಾಡಲಾಗಿದ್ದು, ವಿಜೇತರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.
ಮುಖ್ಯ ಚುನಾವಣಾ ಅಧಿಕಾರಿಯಾಗಿ ಚಂದ್ರಶೇಖರ ಬೀಜಾಡಿ,ಸಹ ಚುನಾವಣಾ ಅಧಿಕಾರಿಯಾಗಿ ಸ್ಮಿತಾ ಡಿ ಸೋಜಾ ಕಾರ್ಯನಿರ್ವಹಿಸಿದರು.ಮತಗಟ್ಟೆಯ ಅಧಿಕಾರಿಯಾಗಿ ಶಿಕ್ಷಕರಾದ ಭಾಸ್ಕರ್ ಗಾಣಿಗ,ಸಿಸ್ಟರ್ ಚೇತನಾ,ಪ್ರೀತಿ  ಪಾಯ್ಸ್, ಸುಶೀಲಾ ಖಾರ್ವಿ ಸಹಕರಿಸಿದರು.ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಮಾರ್ಗದರ್ಶನ ನೀಡಿದರು.