ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪಾಲಕ ಸಂ. ಸಾಬೆಸ್ಟಿಯನವರ ಹಬ್ಬ

JANANUDI.COM NETWORK

 

 

ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪಾಲಕ ಸಂ. ಸಾಬೆಸ್ಟಿಯನವರ ಹಬ್ಬ

 

ಕುಂದಾಪುರ, ಫೆ.2: ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ, ವಾಳೆಯವರು ತಮ್ಮ ಪಾಲಕ ಸಂತ ಸಾಬಾಸ್ಟಿಯನರ ಹಬ್ಬವನ್ನು ಬೆಳಿಗ್ಗೆ ರೊಜರಿ ಮಾತಾ ಇಗರ್ಜಿಯಲ್ಲಿ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರ ಪ್ರಧಾನ ಯಾಜಕತ್ವದಲ್ಲಿ ಮತ್ತು ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಗೂ ಚರ್ಚಿನ ಕ್ರೈಸ್ತ ಸಮುದಾಯದವರೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು.
ಸಂಜೆ ಜೋಕಿಮ್ ಡಿಆಲ್ಮೇಡಾ ಇವರ ಮನೆಯಲ್ಲಿ ವಾಳೆಯವರ ಸಮ್ಮಿಲನ ಕಾರ್ಯಕ್ರಮ ನೆಡೆಯಿತು. ‘ಇಂತಹ ಹಬ್ಬಗಳನ್ನು ಆಚರಿಸುವುದರಿಂದ ವಾಳೆಯಯಲ್ಲಿ ಒಗ್ಗಟ್ಟು, ಪ್ರೀತಿ, ವಿಶ್ವಾಸ ಹೆಚ್ಚುತ್ತದೆ, ಕಿರು ಸಮುದಾಯದಲ್ಲಿ ದೇವರ ವಾಕ್ಯಗಳನ್ನು ಒದಿ ಅದರ ಪ್ರೇರಣೆಯಿಂದ ದೇವರಲ್ಲಿ ವಿಶ್ವಾಸವನ್ನು ಗಟ್ಟಿಗಳಿಸಬೇಕು. ಯಾವುದೇ ಕಾರಣಕ್ಕೆ ನಾವು ದೇವರಲ್ಲಿನ ವಿಶ್ವಾಸವನ್ನು ಕಳೆದು ಕೊಳ್ಳಬಾರದು. ನಿಮ್ಮ ವಾಳೆಯ ಪಾಲಕ ಸಂತ ಸಾಬೆಸ್ಟಿಯನ್‍ನನ್ನು ಮರಕ್ಕೆ ಕಟ್ಟಿ ಹಾಕಿ ಭರ್ಚಿಯಿಂದ ತಿವಿದು ಕೊಂದರು ಆತನು ದೇವರಲ್ಲಿ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲಾ. ಅಂತಹ ಪಾಲಕನನ್ನು ಪಡೆದವ್ರು ನೀವು ಭಾಗ್ಯಶಾಲಿಗಳು. ಅವನಂತ್ತ ನಾವು ವಿಶ್ವಾಸವನ್ನು ಗಟ್ಟಿಗಳಿಸೋಣ’ ಎಂದು ಸಂದೇಶ ನೀಡಿದರು.
ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ದೇವರ ವಾಕ್ಯದ ತಿರುಳನ್ನು ನೀಡಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಬೋಜನದ ಪ್ರಾಥನೆಯನ್ನು ನೆಡೆಸಿಕೊಟ್ಟರು. ಪಾಲನ ಮಂಡಳಿ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್ ಮತ್ತು ಕಿರು ಸಮುದಾಯ ಸಂಯೋಜಕಿ ಶಾಂತಿ ಪಿಂಟೊ ಹಬ್ಬದ ಶುಭಾಶಯಗಳನ್ನು ಕೋರಿದರು, ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ ಕಾರ್ಯಕ್ರಮವನ್ನು ವಿಮರ್ಶಿಸಿದರು, ಕಾರ್ಯದರ್ಶಿ ಆಶಾ ಕರ್ವಾಲ್ಲೊ 18 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಉಪಸ್ಥಿತರಿದ್ದರು.
ಲಘು ಆಟಗಳನ್ನು ಆಡಿಸಲಾಯಿತು, ಹಲವರನ್ನು ಪುಷ್ಪ ನೀಡಿ ಗೌರವಿಸಲಾಯಿತು. ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಮಕ್ಕಳು ಮತ್ತು ಹಿರಿಯವರು ಗಾಯನ, ರೂಪಕಗಳನ್ನು ಪ್ರದರ್ಶಿಸಿದರು. ಸಾಹಿತಿ ಬರ್ನಾಡ್ ಡಿಕೋಸ್ತಾರ ಕಿರು ಕೊಂಕಣಿ ‘ಯೆ ಮೊಜ್ಯಾ ಗೊಪಾಂತ್’ ಪ್ರಹಸನವನ್ನು ಆಡಿ ತೋರಿಸಲಾಯಿತು ವಾಳೆಯ ಕಿರು ಸಮುದಾಯದ ಲಿಡಿಯಾ ಡಿಆಲ್ಮೇಡಾ ವರದಿ ವಾಚಿಸಿದರು, ವಾಳೆಯಾ ಗುರಿಕಾರ ಅಂಟೋನಿ ಡಿಆಲ್ಮೇಡಾ ಸ್ವಾಗತಿಸಿದರು. ಪ್ರತಿನಿಧಿ ಜೂಲಿಯಾನ ಮಿನೇಜೆಸ್ ಧನ್ಯವಾದಗಳನ್ನು ಅರ್ಪಿಸಿದರು. ರೇಖಾ ಡಿಅಲ್ಮೇಡ ಮತ್ತು ಪ್ರಮೀಳಾ ಡಿಸಿಲ್ವಾ ನಿರೂಪಿಸಿದರು.