ಕುಂದಾಪುರ ಸಂತ ಮೆರಿಸ್ ಕನ್ನಡ ಪ್ರೌಢ ಶಾಲೆಯ ದುರಸ್ತಿಗಾಗಿ: ಶ್ರಮದಾನ
ಕುಂದಾಪುರ, ಎ.13: ಕಳೆದ ವರ್ಷ ಸ್ವರ್ಣ ಮಹತ್ಸೋವನ್ನು ಆಚರಿಸಿದ ಕುಂದಾಪುರ ಸಂತ ಮೇರಿಸ್, ಕನ್ನಡ ಮಾಧ್ಯಮ ಶಾಲೆಯ ಕಟ್ಟಡಕ್ಕೆ ಸುಮಾರು ಸುಮಾರು ಐವತ್ತು ವರ್ಷಗಳಿಕ್ಕಿಂತಲು ಹಳೆಯದಾದ ಕಟ್ಟಡವಾಗಿದ್ದು. ಅದೀಗ ದುರಸ್ತಿ ಮಾಡುವ ಸಮಯ ಬಂದಿದ್ದರಿಂದ ದುರಸ್ತಿ ಕಾರ್ಯ ಆರಂಭವಾಗಿದ್ದು, ಅದಕ್ಕಾಗಿ ಶಾಲೆಯ ಹಳೆ ವಿದ್ಯಾಥಿಗಳು, ಈಗಿನ ವಿದ್ಯಾರ್ಥಿಗಳು, ಶಾಲೆಯ ಹಿತಚಿಂತಕರು ಮತ್ತು ಕುಂದಾಪುರ ಇಗರ್ಜಿಯ ಬಂದುಗಳು ಶ್ರಮದಾನವನ್ನು ಇದೇ ಸುಕ್ರವಾರದಂದು ಶಾಲೆಗಾಗಿ ಶ್ರಮದಾನವನ್ನು ಆರಂಭಿಸಿದರು.
ಉಡುಪಿ ಧರ್ಮಪ್ರಾಂತ್ಯ ಕಥೊಲಿಕ್ ವಿಧ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವ|ಸ್ಟ್ಯಾನಿ ತಾವ್ರೊ ಪ್ರಾರ್ಥನೆ ಸಲ್ಲಿಸಿ ಶ್ರಮದಾನಕ್ಕೆ ಚಾಲನೆಯನ್ನು ನೀಡಿದರು. ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ ಶುಭ ಕೋರಿದರು. ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಸ್ವರ್ಣ ಮಹತ್ಸೋವ ಸಮಿತಿಯ ಅಧ್ಯಕ್ಷ ಇದೇ ಶಾಲೆಯ ನಿವ್ರತ್ತ ಮುಖ್ಯೋಪಾಧ್ಯಾಯ ಲುವಿಸ್ ಜೆ. ಫೆರ್ನಾಂಡಿಸ್, ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು, ಶಿಕ್ಷರರು, ಶಾಲಾ ಶಿಕ್ಷಕೇತರ ಸಿಬಂದಿ, ಶಾಲೆಯ ಹಿತಚಿಂತಕರು ಮತ್ತು ಕುಂದಾಪುರ ಇಗರ್ಜಿಯ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶ್ರಮದಾನದಲ್ಲಿ ಭಾಗಿಯಾದರು.