ಕುಂದಾಪುರ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಕಾರ್ಯಗಾರ

JANANUDI NETWORK

 

ಕುಂದಾಪುರ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಕಾರ್ಯಗಾರ


ಕುಂದಾಪುರ, ಜು.1: ಸ್ಥಳಿಯ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಎನ್ನುವ ವಿಷಯದ ಮೇಲೆ ಒಂದು ದಿನದ ಕಾರ್ಯಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಮೆಲ್ವಿನ್ ಡಿ’ಸೋಜರವರು ಆಗಮಿಸಿ ‘ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೇಗೆ ಶಿಕ್ಷಣ ಪಡೆಯಬೇಕು ಮತ್ತು ಪಾಠಗಳ ವಿಷಯವನ್ನು ಹೇಗೆ ನೆನಪಿನಲ್ಲಿ ಇಟ್ಟು ಕೊಳ್ಳಬೇಕು’ ಎಂದು ಕಾರ್ಯಗಾರದಲ್ಲಿ ಮಾಹಿತಿ ನೀಡಿ ವಿದ್ಯಾರ್ಥಿಗಳು ಕಠಿಣವಾದ ಪರಿಶ್ರಮದಿಂದ ಓದುವುದರ ಬದಲು ಜಾಣತನದಿಂದ ಹೇಗೆ ಓದಬೇಕು ಎಂದು ವಿವಿಧ ಉದಾರಣೆಯ ಮೂಲಕ ಹಾಗೂ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಗಾರದ ನಂತರ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲ್ಪಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಒಳ್ಳೆಯ ಶಿಕ್ಷಣದ ಜೊತೆಗೆ ಒಳ್ಳೆಯ ಪ್ರಜೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತಿದ್ದೆವೆ’ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಿಕ್ಷಕಿ ಸಿಸ್ಟರ್ ಸಿಲ್ವಿಯ ತಿಳಿಸಿದರು. ಶಾಲೆಯ ಶಿಕ್ಷಕ ಮೈಕಲ್ ಪುರ್ಟಾಡೊ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಸ್ವಾಗತಿಸಿ, ಕಾರ್ಯಕ್ರಮ ನೆಡೆಸಿಕೊಟ್ಟರು.