ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ ನೋರಾ ಡಿಸೋಜಾ
ಕುಂದಾಪುರ, ಜು.16: ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೆ ಭಾವನ ಒಕ್ಕೂಟದ ಈ ಸಾಲಿನ ಪದಾಧಿಕಾರಿಗಳ ಚುನಾವಣೆ ಜುಲಾಯ್ 11 ರಂದು ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು. ನೋರಾ ಡಿಸೋಜಾ ಕೋಟಾ, ಇವರು ಅಧ್ಯಕ್ಷೆಯಾಗಿ ಆರಿಸಿ ಬಂದರು. ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಡೇಸಾ, ಪಿಯುಸ್ ನಗರ್, ಕಾರ್ಯದರ್ಶಿಯಾಗಿ ಶಾಲೆಟ್ ಡಿಸಿಲ್ವಾ,ತ್ರಾಸಿ. ಖಜಾಂಚಿಯಾಗಿ ಕ್ಯಾರಲ್ ಗೊನ್ಸಾಲ್ವಿಸ್,ತಲ್ಲೂರು, ಮೊತಿಯಾ ಪತ್ರಿಕೆಯ ಪ್ರತಿನಿಧಿಯಾಗಿ ಡೇಝಿ ಕಾರ್ಡಿನ್, ಗಂಗೊಳ್ಳಿ. ಉಪಾಧ್ಯಕ್ಷೆಯಾಗಿ ರೋಜಿ ಡಿಸೋಜಾ, ಕಂಡ್ಲೂರು, ಕಾರ್ಯದರ್ಶಿಯಾಗಿ, ಗ್ರೆಟ್ಟಾ ರೊಡ್ರಿಗಸ್, ಬೈಂದೂರು, ಕೇಂದ್ರಿಯ ಪ್ರತಿನಿಧಿಗಳಾಗಿ, ಪ್ರಮೀಳಾ ಡೇಸಾ, ಪಿಯುಸ್ ನಗರ, ಶಾಂತಿ ಸುವಾರಿಸ್, ಪಡುಕೋಣೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪ್ರಮೀಳಾ ಕರ್ವಾಲ್ಲೊ, ಬಸ್ರೂರು. ವಿಕ್ಟೋರಿಯಾ ಡಿಸೋಜಾ,ಕುಂದಾಪುರ. ಮತ್ತು ಕೀರ್ತನ ಪುರ್ಟಾರ್ಡೊ ಕೊಟೇಶ್ವರ ಇವರುಗಳು ಆರಿಸಿ ಬಂದರು.
ಚುನಾವಣಾ ಪ್ರಕ್ರಿಯೆಯನ್ನು ಉಡುಪಿ ಜಿಲ್ಲಾ ಕಥೊಲಿಕ್ ಸ್ತ್ರೀ ಸಂಘಟನೆ ಸುಗಮ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾನೆಟ್ ಬಾರ್ಬೊಜಾ ನಡೆಸಿಕೊಟ್ಟು, ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಸಂಘಟನೇಯ ಅಧ್ಯಾತ್ಮಿಕ ನಿದೇಶಕ ವಲಯ ಪ್ರಧಾನ ದರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ‘ಎಲ್ಲರೂ ಒಗ್ಗಟಾಗಿ ಸಂಘಟನೇಯನ್ನು ಬಲ ಪಡಿಸುತ್ತಾ, ನಿಮ್ಮ ಎಳಿಗೆಗಾಗಿ ಶ್ರಮಿಸಿ’ ಎಂದು ಶುಭ ಕೋರಿದರು. ನೋರಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ನಿರ್ಗಮನ ಕಾರ್ಯದರ್ಶಿ ಸುನೀತಾ ಮೆಂಡೊನ್ಸಾ ಧನ್ಯವಾದಗಳನ್ನು ಅರ್ಪಿಸಿದರು.