ಕುಂದಾಪುರ ರೋಜರಿ ಮಾತಾ ಇಗರ್ಜಿ ಧರ್ಮಗುರುಗಳಿಂದ ಶುಭ ಶುಕ್ರವಾರದ ಸಂದೇಶ: ಪವಿತ್ರ ರೋಜರಿ ಮಾತಾ ಶಿಲುಭೆ ಯಾತ್ರೆಯ 14 ತಾಣಗಳ ಸ್ಟ್ಯಾಚುಗಳು ಚಿತ್ರಗಳು ನಿಮಗಾಗಿ

JANANUDI.COM NETWORK

 

ಕುಂದಾಪುರ ರೋಜರಿ ಮಾತಾ ಇಗರ್ಜಿ ಧರ್ಮಗುರುಗಳಿಂದ ಶುಭ ಶುಕ್ರವಾರದ ಸಂದೇಶ: ಪವಿತ್ರ ರೋಜರಿ ಮಾತಾ ಶಿಲುಭೆ ಯಾತ್ರೆಯ 14 ತಾಣಗಳ ಸ್ಟ್ಯಾಚುಗಳು ಚಿತ್ರಗಳು ನಿಮಗಾಗಿ

 

 

ಕುಂದಾಪುರ, ಎ.19: ‘ಯೇಸು ಸ್ವಾಮಿ ಶಿಲುಭೆ ಯಾತ್ರೆಯ ಕಷ್ಟ ಮರಣದ ದಿನದಂದು ನೀವು ಮನೆಯಲ್ಲೇ ಇದ್ದು ಸಾಮಾಜಿಕ ಜಾಲ ತಾಣಗಳಲ್ಲಿನ ಪ್ರಾರ್ಥನ ವಿಧಿಯನ್ನು ಕಂಡು ಅದರಂತೆ ದೇವ ವಾಕ್ಯಗಳಿಗೆ ಉತ್ತರಿಸುತ್ತಾ ಪ್ರಾರ್ಥನ ವಿಧಿಯನ್ನು ಪಾಲಿಸಿ’ ಎಂದು ಕುಂದಾಪುರ ರೋಜರಿ ಮಾತೆಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ತಮ್ಮ ಸಂಗಡಿಗರಾದ ವಂ|ಧರ್ಮಗುರು ವಿಜಯ್ ಡಿಸೋಜಾ, ಮತ್ತು ವಂ|ಧರ್ಮಗುರು ಪ್ರಾಂಶುಪಾಲ ಪ್ರವೀಣ್ ಮಾರ್ಟಿಸ್ ಇವರ ಜೊತೆ ಭಕ್ತರನ್ನು ಕೇಳಿಕೊಂಡಿದ್ದಾರೆ
‘ಇವತ್ತು ಯೇಸುವಿನ ಮರಣದ ದಿನ, ಹೇಗೆ ನಾವು ನಮ್ಮ ಪ್ರೀತಿ ಪಾತ್ರರಾದವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿರೊ, ಹಾಗೇ ಯೇಸುವಿನ ಕಷ್ಟ, ದುಖದಲ್ಲಿ ಭಾಗಿಯಾಗಿ ಯೇಸುವಿನ ಶಿಲುಭೆಯ ಮರಣದಲ್ಲಿ ಒಂದಾಗೋಣ’
ಪ್ರಪಂಚವೇ ಹೀನ ದ್ರಶ್ಟಿಯಿಂದ ನೋಡುತಿದ್ದ ಶಿಲುಭೆಯನ್ನೆ ಯೇಸು ಸ್ವಾಮಿ ನಮಗಾಗಿ ಸ್ವೀಕರಿಸಿದರು. ಬಹಳ ಹಿಂಸೆ ಅನುಬವಿಸುತ್ತಾ, ಆ ಭಾರವಾದ ಶಿಲುಭೆಯನ್ನು ಹೊತ್ತು ಕಾಲ್ವಾರ್ ಗುಡ್ಡೆಯ ಮೇಲೆ ಸಾಗಿ ಪ್ರಾಣ ತೆತ್ತರು. ಗೋದಲಿಯಿಂದ ಶಿಲುಭೆಯ ವರೆಗೆ ಪಯಣ ಮಾಡಿದ ಯೇಸು ವೀಧೆಯರದಾದರು. ತನ್ನ ಪವಿತ್ರ ರಕ್ತವನ್ನು ಹರಿಸಿ ತಮ್ಮ ಪಾಪಗಳಿಗಾಗಿ ದುಖ ಪಶ್ಚಾತಾಪ ಪಡುವರನ್ನು ಕ್ಷಮಿಸಿದರು. ಕ್ಷಮೆ ಕೋರಿದ ತನ್ನ ಜೊತೆ ಶಿಲುಭೆ ಮರಣ ಶಿಕ್ಷೆ ಅನುಭವಿಸಿದ ಕೈದಿಗೆ ಇಂದಿನಿಂದಲೇ ನೀನು ನನ್ನ ಜೊತೆ ಸ್ವರ್ಗ ರಾಜ್ಯದಲ್ಲಿ ಇರುತ್ತಿಯ ಎಂದು ಸ್ವರ್ಗವನ್ನು ಕರುಣಿಸಿ, ತಮ್ಮ ಪ್ರಾಣವನ್ನು ಪಿತನಿಗೆ ಸಮರ್ಪಿಸಿದರು.
ಹಿಂಸೆ ಅನುಭವಿಸಿದ ಯೇಸುವಿನ ಜೊತೆ ಒಂದಾಗೋಣ. ಇವತ್ತು ಜಗತ್ತೆ ಕೊರೊನಾ ವೈರಸ್ ನಿಂದ ಹಿಂಸೆ ಪಡುತ್ತದೆ. ಈ ಕೊರೊನಾ ಎಂಬ ಯುದ್ದದ ಜೊತೆ ಯೇಸುವಿನ ನಾಮದಲ್ಲಿ ನಾವು ಹೋರಾಡೊಣ. ಪವಿತ್ರ ಶಿಲುಭೆಯ ಮೇಲೆ ನಮ್ಮ ದ್ರಷ್ಟಿ ಭಿರಿ ನಾವೆಲ್ಲಾ ರಕ್ಷಣೆ ಪಡೆಯೋಣ.
ಶಿಲುಭೆಯ ಮೇಲೆ ಭರವಸೆ ಇಡುತ್ತೇನೆ, ಕಾಯಿಲೆ ಕಷ್ಟ ದುಖದಲ್ಲಿ ನಾನು ಶಿಲುಭೆಯನ್ನು ಆಲಂಗಿಸಿಕೊಳ್ಳುತೇನೆ’ ಎಂಬ ಪ್ರಾರ್ಥನೆ ನಮ್ಮದಾಗಲಿ’ ಎಂದು ಅವರ ಸಂದೇಶವನ್ನು ಮಾಧ್ಯಮಕ್ಕೆ ತಿಳಿಸಿದರು.
ಪವಿತ್ರ ರೋಜರಿ ಮಾತಾ ಇಗರ್ಜಿಯು ಉಡುಪಿ ಧರ್ಮ ಪ್ರಾಂತ್ಯದಲ್ಲಿ ಅತ್ಯಂತ ಹಿರಿಯ ಇಗರ್ಜಿಯಾಗಿದ್ದು, ಈ ಇಗರ್ಜಿಯ ಗೋಡೆಗಳಲ್ಲಿ ಬಹಳ ಅಪರೂಪವಾದ ಯೇಸು ಸ್ವಾಮಿ ಶಿಲುಭೆಯಾತ್ರೆಯ 14 ತಾಣಗಳ ಸ್ಟ್ಯಾಚುಗಳನ್ನು ಅಳವಡಿಸಿದ್ದಾರೆ ಇದರ ಪೋಟೊಗಳನ್ನು ಈ ಸಂದರ್ಭದಲ್ಲಿ ಪ್ರಕಟಿಸುತಿದ್ದೆವೆ. ಇದನ್ನು ನೋಡಿದಾಗ ನಿಮಗೆ ರೋಜರಿ ದೇವಾಲಯದ ದ್ರಶ್ಯಗಳು ಕಣ್ಣ ಮುಂದೆ ಬಂದು, ಶಿಲುಭೆ ಯಾತ್ರೆಯ ಪ್ರಾರ್ಥನ ವಿಧಿ ಮನೆಯಲ್ಲಿ ಆಚರಿಸಲು ನಿಮಗೆ ಪ್ರೇರಣೆ ದೊರಕ ಬಹುದು.