JANANUDI.COM NETWORK
ಕುಂದಾಪುರ,ಡಿ.10: ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸಮಸ್ಯೆ ಇರದೆ ಅವರಿಗೆ ನಮ್ಮ ಪ್ರೊತ್ಸಾಹ ಇದ್ದರೆ ಸಾಕು ಎಂದು ನಾವು ಪ್ರೋತ್ಸಾಹ ನೀಡುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ನಾವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡಬೇಕು. ಎಲ್ಲಾ ಶಾಲೆಯವರು ಸರ್ಕಾರಿ ನಿಯಮವನ್ನು ಪಾಲಿಸಬೇಕು. ಶಿಕ್ಷಣ ಎನ್ನುವುದು ಸೇವೆ ಅದು ವ್ಯಾಪಾರವಲ್ಲ, ಶಿಕ್ಷಣ ಎನ್ನುವುದು ಮಕ್ಕಳ ಹಕ್ಕು ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರುಣ್ ಕುಮಾರ್ ಶೆಟ್ಟಿಯವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಇವರ ಜಂಟಿ ಆಶ್ರಯದಲ್ಲಿ ಅನುದಾನರಹಿತ ಶಾಲಾ ಮುಖ್ಯೋಪಾದ್ಯಾಯರ ಸಭೆಯು ಸಂತ ಮೇರಿಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರುಣ್ ಕುಮಾರ್ ಶೆಟ್ಟಿಯವರು ವಹಿಸಿಕೊಂಡರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಮ್. ಮುಂದಿನಮನೆ, ಕುಂದಾಪುರ ಶಿಕ್ಷಣ ಸಮನ್ವಯ ಅಧಿಕಾರಿ ಸದಾನಂದ ಬೈಂದೂರು, ದೇವ ಕುಮಾರಿ ಸಿ.ಇ.ಒ ಕುಂದಾಪುರ, ಶೇಖರ್ ಇ.ಸಿ.ಒ ಹಾಲಾಡಿ ವೃತ, ಶಂಕರ್ ಶೆಟ್ಟಿ ಸಿ.ಆರ್.ಪಿ, ಪಿ. ರಮಾನಾಥ ಶೆಣೈ ಬಿ.ಆರ್.ಪಿ, ಸುನೀತಾ ಬಾನ್ರ ಸಿ.ಆರ್.ಪಿ ಮೊದಲಾದವರು ಉಪಸ್ಥಿತರಿಧ್ದರು. ಶಾಲೆಯ ಸಹ ಶಿಕ್ಷಕ ಮೆಲ್ವಿನ್ ಪುರ್ತಾದೊ ಮತ್ತು ಅವರ ತಂಡ ಪ್ರಾರ್ಥಿಸಿ, ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿ ಎ.ಸಿ. ಯವರು ಸ್ವಾಗತಿಸಿದರು. ಸಹ ಶಿಕ್ಷಕಿ ಪ್ರತಿಮಾ ನಿರೂಪಿಸಿದರು, ಸಹ ಶಿಕ್ಷಕಿ ರಮ್ಯಾರವರು ವಂದಿಸಿದರು.