JANANUDI.COM NETWORK

ಕುಂದಾಪುರ, 05-12-2020 ರಂದು ವಿಶ್ವ ವಿಶೇಷ ಚೇತನರ ದಿನಾಚರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ತೆಯು, ಭಾರತೀಯ ರೆಡ್ ಕ್ರಾಸ್ ಸಂಸ್ತೆಯ ರಕ್ತ ನಿಧಿ ಕೇಂದ್ರದಲ್ಲಿ ಆಚರಿಸಿದರು. ರೆಡ್ ಕ್ರಾಸ್ ಸಂಸ್ತೆಯ ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ, ಇಬ್ಬರು ಅಹ್ರ್ಃ ವ್ಯಕ್ತಿ ಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ರಿಕ್ಶಾ ಚಾಲಕ ರಾಜೀವ ಇವರರಿಗೆ ವೈದ್ಯಕೀಯ ವೆಚ್ಚಕ್ಕಾಗಿ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಲಾಯಿತು ಮತ್ತು ಹೋಟೆಲ್ ಕಾರ್ಮಿಕ ರಾಮ ಇವರಿಗೆ ಹತ್ತು ಸಾವಿರ ಬೆಲೆ ಬಾಳುವ ಶ್ರವಣ ಸಾಧನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಡಾ . ಸೋನಿ ಡಿಕೊಸ್ಟಾ, ಸೀತಾರಾಮ್ ನಕ್ಕತ್ತಾಯ, ಸಂತೋಷ್ ಶೆಟ್ಟಿ ವಕೀಲರು, ಗಣೇಶ್ ಆಚಾರ್ಯ, ಅಬ್ದುಲ್ ಬಶೀರ್, ನಾರಾಯಣ ದೇವಾಡಿಗ, ಸದಾನಂದ ಶೆಟ್ಟಿ ಮತ್ತು ಸತ್ಯನಾರಾಯಣ ಪುರಾಣಿಕ್ ಹಾಜರಿದ್ದರು.
ಕಾರ್ಯದರ್ಶಿಯವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.