JANANUDI.COM NET WORK
ಕುಂದಾಪುರ,ತಾರೀಕು 26-09- 2020 ರಂದು ಕುಂದಾಪುರ ಜೂನಿಯರ್ ಕಾಲೇಜ್, ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ತೆಯ ವಾರ್ಷಿಕ ಮಹಾ ಸಭೆಯನ್ನು ನಡೆಸಲಾಯಿತು. ಇದರ ಅದ್ಯಕ್ಷತೆಯನ್ನು ರೆಡ್ ಕ್ರಾಸ್ ಕುಂದಾಪುರ ಶಾಖೆಯ ಅದ್ಯಕ್ಷರೂ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಯೂ ಆದ ಶ್ರೀ ರಾಜು ಕೆ. ಇವರು ವಹಿಸಿದರು. ರೆಡ್ ಕ್ರಾಸ್ ಉದ್ಯೋಗಿಯ ಪ್ರಾಥನೆ ಯೊಂದಿಗೆ ಮಹಾಸಭೆ ಆರಂಭವಾಯಿತು. ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಎಲ್ಲರನ್ನು ಸ್ವಾಗತ ಮಾಡಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯದರ್ಷಿ ವೈ ಸೀತಾರಾಮ ಶೆಟ್ಟಿ 2018-19 ರ ಆಡಳಿತಾತ್ಮಕ ವರದಿ ಮಂಡಿಸಿದರು ಮತ್ತು ಇದನ್ನು ಸಭೆಯು ಆಂಗೀಕರಿಸಿತು. ಖಜಾಂಚಿ ಶಿವರಾಮ ಶೆಟ್ಟಿ ಇವರು ಮಂಡಿಸಿದ ರೆಡ್ ಕ್ರಾಸ್, ರಕ್ತ ನಿಧಿ ಕೇಂದ್ರ, ಜನ ಔಷದಿ ಮತ್ತು ರಕ್ತ ನಿಧಿ ಟ್ರಸ್ಟ್ ಇವುಗಳ ಲೆಕ್ಕ ಪತ್ರ ಗಳನ್ನು ಸಭೆಯು ಆಂಗೀಕರಿಸಿತು. ತದ ನಂತರ ಖಜಾಂಚಿಯವರು ರೆಡ್ ಕ್ರಾಸ್, ರಕ್ತ ನಿಧಿ ಕೇಂದ್ರ ಮತ್ತು ಜನ ಔಷದಿ ಇವುಗಳ 2020-21 ರ ಸಾಲಿನ ಅಂದಾಜು ಆಯ ವ್ಯಯ ಪಟ್ಟಿಯನ್ನು ಮಂಡಿಸಿದರು ಮತ್ತು ಸಭೆಯು ಇದನ್ನು ಅಂಗೀಕರಿಸಿತು. ಕೋವಿಡ್ 19 ರ ವಾರಿಯಾರ್ಸ್ ಗಳಾದ – ಡಾ. ನಾಗಭೂಷಣ ಉಡುಪ, ಡಾ. ನಾಗೇಶ್, ಡಾ. ವಿಜಯ್ ಶಂಕರ್ ಮತ್ತು ಡಾ. ಚಂದ್ರ ಇವರುಗಳ ಸಾಧನೆ ಉಪ ಸಭಾಪತಿ ಡಾ. ಉಮೇಸ್ ಪುತ್ರನ್ ಸಭೆಗೆ ಪರಿಚಯಿಸಿದರು ಮತ್ತು ಇವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರಾದ ಡಾ. ನಾಗಭೂಷಣ ಉಡುಪರು ಕೋವಿಡ್ ಹೋರಾಟದಲ್ಲಿ ಸಿಭಂದಿಗಳ ಕಾರ್ಯ ಚಟುವಟಿಕೆ ಮತ್ತು ಸಾರ್ವಜನಿಕ ಓ.ಉ,ಔ ಗಳ ಪ್ರತ್ಯೇಕವಾಗಿ ರೆಡ್ ಕ್ರಾಸಿನ ಸಹಕಾರದಿಂದ ತಮ್ಮ ಸಾಧನೆ ಸಾದ್ಯವಾಯಿತು ಎಂದರು. ಅದ್ಯಕ್ಷತೆ ವಹಿಸಿದ ಂ.ಅ ಯವರು ರೆಡ್ ಕ್ರಾಸ್ ಮಾಡಿದ ಸಾಧನೆ ಗಳನ್ನು ಶ್ಲಾಗಿಸಿದರು. ಮತ್ತು ಕುಂದಾಪುರ ಶಾಖೆಯ ಈ ವರ್ಷದ ದಶಮಾನೋತ್ಸವ ಮತ್ತು ಭಾರತೀಯ ರೆಡ್ ಕ್ರಾಸಿನ ಶತಮಾನೋತ್ಸವಕ್ಕೆ ತಮ್ಮ ಸಹಕಾರವನ್ನು ತಿಳಿಸಿದರು. ಮತ್ತು ಸಾರ್ವಜನಿಕರು ಕೋರೋನಾ ತಡೆಗಟ್ಟಲು ಸಹಕಾರ ನೀಡಬೇಕಾಗಿ ಕೇಳಿಕೊಂಡರು.ಕಾರ್ಯದರ್ಷಿ ವೈ ಸೀತಾರಾಮ ಶೆಟ್ಟಿಯವರ ವಂದನಾರ್ಪಣೆ ಯೊಂದಿಗೆ ಮಹಾ ಸಭೆಯು ಮುಕ್ತಾಯಗೊಂಡಿತು.